ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ ಈ ದ್ವಿದಳ ಧಾನ್ಯಗಳು

First Published Jun 26, 2022, 11:10 AM IST

ಬೇಳೆಕಾಳುಗಳು ನಾವು ಸಾಮಾನ್ಯವಾಗಿ ಸೇವಿಸುವಂತಹ ಅಲ್ಲದೇ, ಹೆಚ್ಚಿನ ಜನ ಇಷ್ಟಪಟ್ಟು ಸೇವಿಸುವ ಆಹಾರವಾಗಿದೆ. ಇವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (glycemic index) ಹೊಂದಿವೆ ಮತ್ತು ಅಷ್ಟೇ ಅಲ್ಲ ಇದರಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುವ ಕಾರ್ಬೋಹೈಡ್ರೇಟ್ ಕೂಡ ಹೆಚ್ಚಾಗಿದೆ.  ಬೇರೆ ಬೇರೆ ರಿತಿಯ ಬೇಳೆಕಾಳುಗಳು, ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ… 

 ಮಧುಮೇಹದ ಚಿಕಿತ್ಸೆಯಲ್ಲಿ (diabetes treatment) ಅಗತ್ಯ ಔಷಧಿಗಳು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆಯೋ ಅದು ಮಧುಮೇಹದ ಮೇಲೆ ಭಾರಿ ಪರಿಣಾಮ ಬೀರುತ್ತೆ ಅನ್ನೋದು ಡಯಾಬಿಟೀಸ್ ರೋಗಿಗಳಿಗೆ ಗೊತ್ತೇ ಇದೆ. ವೈದ್ಯರು ಮಧುಮೇಹಿಗಳಿಗೆ ಹೆಚ್ಚಿನ ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬುಗಳು, ಖನಿಜಗಳು ಮತ್ತು ವಿಟಮಿನ್ ಭರಿತ ಆಹಾರ ಸೇವಿಸಲು ಸಲಹೆ ನೀಡುತ್ತಾರೆ. 

ನೀವು ಮಧುಮೇಹ (diabetes) ರೋಗಿಯಾಗಿದ್ದರೆ, ನಿಮ್ಮ ಡಯಟ್ ಯೋಜನೆ ಬಹಳಷ್ಟು ವಿಷಯಗಳ ಮೇಲೆ ಡಿಪೆಂಡ್ ಆಗಿರುತ್ತೆ, ರೋಗಿಯ ವಯಸ್ಸು, ಮಧುಮೇಹದ ಸ್ಥಿತಿ, ರೋಗಿಯ ಆಹಾರ ಯೋಜನೆಯ ಮೇಲೆ ಪರಿಣಾಮ ಬೀರುವ ತೂಕ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಗಮನ ಹರಿಸೋದು ತುಂಬಾನೆ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ಮಧುಮೇಹ ರೋಗಿಗಳಿಗೆ ಸಾಕಷ್ಟು ದ್ವಿದಳ ಧಾನ್ಯಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. 

 ನೀವು ಮಧುಮೇಹ ರೋಗಿಯಾಗಿದ್ದರೆ ದ್ವಿದಳ ಧಾನ್ಯಗಳನ್ನು ತಿನ್ನೋದೇನೋ ನಿಜಾ. ಆದರೆ ಯಾವ ಬೇಳೆಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನು ಸಹ ನಿರ್ಧರಿಸಬೇಕಾಗಿರೋದು ತುಂಬಾನೆ ಮುಖ್ಯ.  ಉದಾಹರಣೆಗೆ, ಮಧುಮೇಹಿ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ (blood sugar leve ನಿಯಂತ್ರಿಸಲು ಹೆಸರುಬೇಳೆ ಸೇವಿಸಲು ಹೇಳಲಾಗುತ್ತದೆ. ಇದಲ್ಲದೆ, ಅನೇಕ ಬೇಳೆಕಾಳುಗಳ ಬಳಕೆಯನ್ನು ಸಹ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

ದ್ವಿದಳ ಧಾನ್ಯಗಳನ್ನು ಯಾಕೆ ಸೇವಿಸಬೇಕು? 
ದ್ವಿದಳ ಧಾನ್ಯಗಳು ಕರಗುವ ಮತ್ತು ಕರಗದ ಆಹಾರದ ಫೈಬರ್, ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತವೆ. ಇದರಲ್ಲಿ ಹೆಚ್ಚಿನ ನಾರಿನಾಂಶದ ಜೊತೆಗೆ ಉತ್ತಮ ಪ್ರಮಾಣದ ಪ್ರೋಟೀನ್ ಅಂಶ ಸಹ ಹೊಂದಿದೆ. ಅದಕ್ಕಾಗಿಯೇ ಮಧುಮೇಹ ರೋಗಿಗಳು ದ್ವಿದಳ ಧಾನ್ಯ ಹೆಚ್ಚಾಗಿ ಸೇವಿಸಬೇಕು. ಇದರಿಂದ ಹಲವಾರು ಪ್ರಯೋಜನಗಳು ಸಹ ಇವೆ. 

 ನೀವು ಹೆಸರು ಬೇಳೆಯಿಂದ (green gram) ವಿವಿಧ ರೀತಿಯ ಅಡುಗೆ ಮಾಡಿ ಸೇವಿಸಬಹುದು. ಅಥವಾ ಅದನ್ನು ಮೊಳಕೆ ಕಾಳುಗಳಾಗಿ ಸೇವಿಸಬಹುದು. ಅದಕ್ಕಾಗಿ ಮೊದಲು ಹೆಸರುಕಾಳನ್ನು ನೆನೆಸಬೇಕು, ಅದನ್ನು ರಾತ್ರಿಯಿಡೀ ನೀರಿನಲ್ಲಿ ಇರಲು ಬಿಡಿ ಮತ್ತು ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ ಆ ಹೆಸರುಬೇಳೆ ತಿನ್ನಿ. 

 ವೈದ್ಯರ ಪ್ರಕಾರ, ಹೆಸರು ಬೇಳೆ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಮತ್ತು ಬೆಳಿಗ್ಗೆ ತಿನ್ನೋದ್ರಿಂದ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ಮಧುಮೇಹ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ (high blood pressure) ನಿವಾರಣೆಯಾಗುತ್ತೆ.

 ಇದಲ್ಲದೆ, ರಾಜ್ಮಾ ಸಹ ತುಂಬಾನೇ ಉತ್ತಮ ಆಹಾರವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದರ ಜಿಐ ಮಟ್ಟವು 19 ಆಗಿದೆ, ರಾಜ್ಮಾದಲ್ಲಿ ಫೈಬರ್ ಸಮೃದ್ಧವಾಗಿದ್ದು, ಈ ಕಾರಣದಿಂದಾಗಿ, ಇದು ರಕ್ತಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

 ಇದಲ್ಲದೆ, ಕಡಲೆ ಬೇಳೆಯನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು 8 ಕ್ಕಿಂತ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಫೋಲಿಕ್ ಆಮ್ಲದ (folic acid) ಜೊತೆಗೆ, ಇದರಲ್ಲಿ ಪ್ರೊಟೀನ್ ಸಹ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಕೆಂಪು ರಕ್ತ ಕಣ ದೇಹದಲ್ಲಿ ಹೆಚ್ಚಾಗುತ್ತೆ.

 ಉದ್ದಿನ ಬೇಳೆ ಸಹ ಮಧುಮೇಹಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಇದು 43 ರ ಗ್ಲೈಸೆಮಿಕ್ ಸೂಚ್ಯಂಕವನ್ನು (glycemic index) ಹೊಂದಿದೆ, ಇದು ಪ್ರೋಟೀನ್ ನ ಉತ್ತಮ ಮೂಲವಾಗಿದೆ. ಮಧುಮೇಹಿಗಳು ತಮ್ಮ ಆಹಾರದಲ್ಲಿ ಉದ್ದಿನ ಬೇಳೆಯನ್ನು ಸೇರಿಸಬೇಕು.

 ಒಟ್ಟಿನಲ್ಲಿ ದ್ವಿದಳ ಧಾನ್ಯಗಳು ಮಧುಮೇಹದ ರೋಗಿಗಳಿಗೆ ಮತ್ತು ವಿಶೇಷವಾಗಿ ಸಕ್ಕರೆಯ ಸಮಸ್ಯೆಯಿಂದ (sugar problem) ಬಳಲುತ್ತಿರುವ ರೋಗಿಗಳಿಗೆ ತುಂಬಾ ಆರೋಗ್ಯಕರವಾಗಿದೆ. ಮಧುಮೇಹ ರೋಗಿಗಳು ಈ ಆಹಾರ ಸೇವಿಸಿದ್ರೆ ಆರೋಗ್ಯ ಉತ್ತಮವಾಗಿರುತ್ತೆ.

click me!