ಮಕ್ಕಳಲ್ಲಿ ಆನ್ಲೈನ್ ಗೇಮ್ಸ್ ಆಡುವ ಕ್ರೇಜ್ ಎಷ್ಟು ಹೆಚ್ಚಾಗಿದೆಯೆಂದ್ರೆ ಅನೇಕ ಮಕ್ಕಳು (Children) ತಮ್ಮ ಹೆಚ್ಚಿನ ಟೈಮ್ ಗೇಮ್ಸ್ ಆಡೋದ್ರಲ್ಲಿ ಕಳೆಯುತ್ತಾರೆ. ಇದರ ನೇರ ಪರಿಣಾಮ ಮಕ್ಕಳ ಶಿಕ್ಷಣ ಮತ್ತು ಅವರ ಆರೋಗ್ಯದ ಮೇಲೆ ಉಂಟಾಗುತ್ತೆ. ಮಕ್ಕಳ ಈ ಚಟ ತೊಡೆದುಹಾಕಲು ಕೆಲವು ಈಸಿ ಟಿಪ್ಸ್ ಇಲ್ಲಿವೆ… ಇದರ ಬಗ್ಗೆ ತಿಳಿದುಕೊಳ್ಳೋಣ.
ಜಾಗರೂಕತೆ ಅತ್ಯಗತ್ಯ
ಮಕ್ಕಳು ತಮ್ಮ ನೆಚ್ಚಿನ ಆಟ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ಟ್‌ಗೆ (Google play store) ಆಗಾಗ್ಗೆ ಭೇಟಿ ನೀಡ್ತಾರೆ ಮತ್ತು ಹಗಲು ಮತ್ತು ರಾತ್ರಿ ಒಂದೇ ಗೇಮ್ ಆಡೋದ್ರಲ್ಲಿ ನಿರತರಾಗ್ತಾರೆ. ಪೋಷಕರು ಮಕ್ಕಳ ಆನ್ಲೈನ್ ಚಟುವಟಿಕೆ ಮೇಲೆ ಕಣ್ಣಿಡಬೇಕು. ಸಹಜವಾಗಿ, ನೀವು ಮಕ್ಕಳು ಆಟ ಆಡೋದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಪಬ್ಜಿಯಂತಹ ಆಟಗಳಿಂದ ಮಕ್ಕಳನ್ನು ದೂರವಿಡುವ ಮೂಲಕ, ಅವರು ಖಂಡಿತವಾಗಿಯೂ ತಮ್ಮ ಗೇಮಿಂಗ್ ಚಟ ಸ್ಟ್ರಾಂಗ್ ಆಗದಂತೆ ತಡಿಬಹುದು.
ಏಜ್ ರೇಟಿಂಗ್(Age rating) ಚೆಕ್ ಮಾಡಿ
ನೀವು ಬಯಸಿದರೆ ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ಮಕ್ಕಳ ನೆಚ್ಚಿನ ಆಟಗಳ ಏಜ್ ರೇಟಿಂಗ್ ಪರಿಶೀಲಿಸಬಹುದು. ಆ ಗೇಮ್ಸ್ ನಿಮ್ಮ ಮಕ್ಕಳ ವಯಸ್ಸಿಗೆ ಅನುಗುಣವಾಗಿರದಿದ್ದರೆ, ಮಕ್ಕಳು ಅದನ್ನು ಆಡಲು ಬಿಡಬೇಡಿ. ಅದೇ ಸಮಯದಲ್ಲಿ, ಆನ್ ಲೈನ್ ಗೇಮ್ಸ್ ಆಡೋದರ ಬ್ಯಾಡ್ ಎಫೆಕ್ಟ್ಸ್ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಮತ್ತು ಪ್ರೀತಿಯಿಂದ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಅವರಿಗೆ ತಿಳಿಸಿ.
ಈ ಆಟಗಳಿಂದ ದೂರವಿರಿ.
ಕೆಲವು ಆನ್ ಲೈನ್ ಗೇಮ್ಸ್ ಕೆಟ್ಟ ಚಟಕ್ಕಿಂತ ಕಡಿಮೆಯೇನಿಲ್ಲ. ಮಕ್ಕಳನ್ನು ಈ ಆಟಗಳಿಂದ ದೂರವಿಡೋದು ಅತ್ಯಗತ್ಯ. ಆದ್ದರಿಂದ ಹಿಂಸಾತ್ಮಕ ಗನ್ (Gun) ವೀಡಿಯೊ ಗೇಮ್ಸ್ ಆಡಲು ಮಕ್ಕಳಿಗೆ ಅವಕಾಶ ನೀಡಬೇಡಿ. ಇದು ಮಕ್ಕಳಿಗೆ ನಿಜವಾಗಿಯೂ ಗನ್ ಬುಲೆಟ್ಸ್ ಹಾರಿಸುವಂತೆ ಮಾಡುತ್ತೆ ಮತ್ತು ಮಕ್ಕಳಿಗೆ ಅವಕಾಶ ಸಿಕ್ಕರೆ ಅಪಘಾತ ಸಂಭವಿಸಬಹುದು.
ಮಕ್ಕಳಲ್ಲಿ ಜಾಗೃತಿ ಮೂಡಿಸಿ
ಆನ್ ಲೈನ್ ಗೇಮ್ಸ್ ಆಡೋದರ ಬ್ಯಾಡ್ ಎಫೆಕ್ಟ್ಸ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿ. ಈ ಗೇಮ್ಸ್ ಉಂಟು ಮಾಡೋ ಹಾನಿಗಳ ಬಗ್ಗೆ ಮಕ್ಕಳಿಗೆ ತಿಳಿಸಿ. ಮಕ್ಕಳ ಮುಂದೆ ಸ್ಮಾರ್ಟ್ಫೋನ್ ನೀವೇ ಬಳಸಬೇಡಿ ಮತ್ತು ಮಕ್ಕಳು ಅದೇ ರೀತಿ ಮಾಡೋದನ್ನು ತಡೆಯಿರಿ. ಇದಲ್ಲದೆ, ಎಲೆಕ್ಟ್ರಾನಿಕ್ ಗ್ಯಾಜೆಟ್ (ELectronic gadgets) ಮಕ್ಕಳ ಕೋಣೆಯಿಂದ ದೂರವಿಡಿ.
ಹೀಗೆ ಮಾನಿಟರ್ (Monitor)ಮಾಡಿ
ಮಕ್ಕಳ ಸ್ಮಾರ್ಟ್ ಫೋನ್ ಮತ್ತು ಆನ್ ಲೈನ್ ಚಟುವಟಿಕೆ ಮಾನಿಟರ್ ಮಾಡಲು ನೀವು Google Family Link ನ ಸಹಾಯ ಪಡೆಯಬಹುದು. ಇದಲ್ಲದೆ, ಫೋನ್ ಸ್ಕ್ರೀನ್ ಟೈಮರ್ ಹಾಕುವ ಮೂಲಕ ನೀವು ಮಕ್ಕಳ ಸ್ಮಾರ್ಟ್ಫೋನ್ ಆಕ್ಟಿವಿಟೀಸ್ ಟ್ರ್ಯಾಕ್ ಮಾಡ್ಬಹುದು. ಮಕ್ಕಳಿಂದ ಫೋನ್ ಚಟ ತೊಡೆದುಹಾಕಲು ನಿಮಗೆ ಸಹಾಯ ಮಾಡುವ ಅಪ್ಲಿಕೇಶನ್ ಗಳ ಹೆಲ್ಪ್ ಸಹ ನೀವು ತೆಗೆದುಕೊಳ್ಳಬಹುದು.