ಮಕ್ಕಳ ಒಬೆಸಿಟಿ, ಆರೋಗ್ಯದ ಕಡೆ ಹೀಗಿರಲಿ ಗಮನ

First Published | Jun 25, 2022, 5:54 PM IST

ಬದಲಾಗುತ್ತಿರುವ ಲೈಫ್ ಸ್ಟೈಲಿಂದ, ಮಕ್ಕಳಲ್ಲಿ ಒಬೆಸಿಟಿ ವೇಗವಾಗಿ ಹೆಚ್ಚುತ್ತಿದೆ. ಮಕ್ಕಳಲ್ಲಿ ಒಬೆಸಿಟಿ ಒಂದು ದೊಡ್ಡ ಸಮಸ್ಯೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಆಹಾರ (Food). ಇತ್ತೀಚಿನ ದಿನಗಳಲ್ಲಿ, ಮಕ್ಕಳು ಮೈದಾ, ಜಂಕ್ ಫುಡ್ (Junk Food) ಮತ್ತು ಪ್ಯಾಕ್ ಮಾಡಿದ ಫುಡ್ ಸಾಕಷ್ಟು ತಿನ್ನುತ್ತಿದ್ದಾರೆ. ಇದರಿಂದಾಗಿ ಬೊಜ್ಜು ಸಹ ಹೆಚ್ಚುತ್ತಿದೆ. 

ತೂಕ ಹೆಚ್ಚಳದಿಂದಾಗಿ(Weight gain), ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಉಸಿರಾಟ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಸ್ಲೀಪ್ ಅಪ್ನಿಯಾ ಮೊದಲಾದ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಮಗು ಆರೋಗ್ಯವಾಗಿರಲು ಮಗುವಿನ ತೂಕ ಬ್ಯಾಲೆನ್ಸ್ ಆಗಿರೋದು ಮುಖ್ಯ, ಅಂದರೆ ಮಗುವಿನ ತೂಕವು ಉದ್ದಕ್ಕೆ ಸರಿಯಾಗಿ ಇರಬೇಕು. 

ನಿಮ್ಮ ಮಗು ಬೊಜ್ಜಿನ ಸಮಸ್ಯೆಯಿಂದ(Child Obesity) ತೊಂದರೆಗೀಡಾಗಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸೋದು ತುಂಬಾ ಮುಖ್ಯ. ಈ ಅಭ್ಯಾಸಗಳನ್ನು ಮಗುವಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ಮಗುವಿನ ತೂಕ ಕಡಿಮೆ ಮಾಡಬಹುದು. ಆ ಮೂಲಕ ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು. 

Tap to resize

ಆರೋಗ್ಯಕರ ಆಹಾರದ(Healthy food) ಅಭ್ಯಾಸ ಮಾಡಿಕೊಳ್ಳಿ

ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ. ನಿಮ್ಮ ಮಕ್ಕಳಿಗೆ ಪ್ರತಿದಿನ ತಾಜಾ ಆಹಾರ ನೀಡಿ. ಸಾಧ್ಯವಾದಷ್ಟು ಹಣ್ಣು, ತರಕಾರಿ, ಇಡೀ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ. ನೀವು ಪಾಸ್ತಾ ಅಥವಾ ಬ್ರೆಡ್ ತಿನ್ನುತ್ತಿದ್ದರೆ, ಮೈದಾ ಬದಲಿಗೆ ಗೋದಿ ಹಿಟ್ಟಿನಿಂದ ಮಾಡಿದ ಆಹಾರ ತಿನ್ನಿಸಿ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನ ಮಕ್ಕಳಿಗೆ ನೀಡಿ. ಬೀನ್ಸ್, ಟೋಫು, ನಟ್ಸ್ ಮತ್ತು ಮೀನು ಮೊದಲಾದ ಪ್ರೋಟೀನ್ ಆಹಾರ ಸೇವಿಸಿ.

ದೈಹಿಕವಾಗಿ ಸಕ್ರಿಯರಾಗಿರಿ

ಮಕ್ಕಳ ಒಬೆಸಿಟಿ ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅವರನ್ನು ದೈಹಿಕವಾಗಿ ಸಕ್ರಿಯವಾಗಿಡೋದು. ಪ್ರತಿದಿನ ಮಕ್ಕಳನ್ನು ಪಾರ್ಕ್ ಗೆ ಕರೆದೊಯ್ಯಿರಿ. ಸ್ಕಿಪ್ಪಿಂಗ್ (Skipping) ಮಾಡಲು ಹೇಳಿ. ಅವರ ಆಯ್ಕೆಯ ಆಟ ಆಡಲು ಬಿಡಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಮಕ್ಕಳನ್ನು ಸೈಕ್ಲಿಂಗ್ ಮತ್ತು ಜಾಗಿಂಗ್ ಗೆ ಕಳುಹಿಸಿ. ಇದು ವೇಗವಾಗಿ ತೂಕ ಕಡಿಮೆ ಮಾಡುತ್ತೆ.

ಸ್ಕ್ರೀನ್ ಸಮಯ(Screen time) ಕಡಿಮೆ ಮಾಡಿ

ನಿಮ್ಮ ಮಗು ಟಿವಿ ಅಥವಾ ಫೋನ್ ದೀರ್ಘಕಾಲದವರೆಗೆ ವೀಕ್ಷಿಸಿದರೆ, ಅದು ಸ್ಥೂಲಕಾಯವನ್ನು ಹೆಚ್ಚಿಸುತ್ತೆ. ಮಗು ಬಹಳ ಹೊತ್ತು ಕುಳಿತುಕೊಳ್ಳುತ್ತೆ ಇದರಿಂದ ತೂಕ ಹೆಚ್ಚುತ್ತೆ. ಫೋನ್ ಅಥವಾ ಟಿವಿ ತೋರಿಸುವ ಬದಲು ಮಕ್ಕಳನ್ನು ಹೊರಗೆ ಕರೆದೊಯ್ಯಿರಿ. ಅವರೊಂದಿಗೆ ಆಟ ಆಡಿ. 

ಮಗುವಿನ ಬಿಎಂಐ(BMI)  ಕಂಡುಹಿಡಿಯಿರಿ

ಮಕ್ಕಳನ್ನು ಆರೋಗ್ಯಕರವಾಗಿಡಲು, ನೀವು ಮಕ್ಕಳ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ)  ತಿಳಿದಿರಬೇಕು. ಇದು ಮಗುವಿನ ಎತ್ತರ ಮತ್ತು ತೂಕ ನಿಮಗೆ ತಿಳಿಸುತ್ತೆ . ಮಗು ಅಧಿಕ ತೂಕ ಹೊಂದಿದ್ದರೆ, ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ.
 

ಆರೋಗ್ಯಕರ ಲೈಫ್ ಸ್ಟೈಲ್ (Life style)

ಮಕ್ಕಳು ತಮ್ಮ ಪೋಷಕರಿಂದ ಸಾಕಷ್ಟು ಕಲಿಯುತ್ತಾರೆ. ಹಾಗಾಗಿ ನೀವು ಮನೆಯಲ್ಲಿ ಆರೋಗ್ಯಕರ ಲೈಫ್ ಸ್ಟೈಲ್ (Healthy LIfestyle) ಫಾಲೋ ಮಾಡಬೇಕು. ಮಕ್ಕಳೊಂದಿಗೆ ದೈಹಿಕವಾಗಿ ಸಕ್ರಿಯರಾಗಿರಿ. ನಿಮ್ಮ ಮಕ್ಕಳೊಂದಿಗೆ ಆರೋಗ್ಯಕರ ಆಹಾರ ಸೇವಿಸಿ. ಇದು ಮಗುವಿಗೆ ಆರೋಗ್ಯಕರ ಲೈಫ್ ಸ್ಟೈಲ್ ನೀಡಲು ಸಹಾಯ ಮಾಡುತ್ತೆ ಮತ್ತು ಒಬೆಸಿಟಿ ನಿಯಂತ್ರಿಸಬಹುದು.

Latest Videos

click me!