ನಶೆ ಏರಿಸಿ, ಕಿಕ್ ನೀಡೋ ಗಾಂಜಾ… ದೇಹ ಸೇರಿದರೆ ನಿತ್ಯ ನರಕ, ತರೋ ಕಾಯಿಲೆ ಒಂದೆರಡಲ್ಲ

First Published | Jul 22, 2023, 5:55 PM IST

ಗಾಂಜಾ, ವೀಡ್, ಪಾಟ್, ಮದ್ದು, ಹೀಗೆ ಬೇರೆ ಬೇರೆ ಹೆಸರುಗಳಿಂದ ಪ್ರಸಿದ್ಧವಾಗಿದೆ ಗಾಂಜಾ. ಇದನ್ನ ಸಿಗರೇಟ್ ನಂತೆ ಸ್ಮೋಕ್ ಮಾಡಿ ಸೇದಬಹುದು, ವೇಪ್ ಮಾಡಬಹುದು, ಕುಡಿಯಬಹುದು ಅಥವಾ ತಿನ್ನಬಹುದು. ಹೆಚ್ಚಿನ ಜನರು ನಶೆ ಏರಿಸಿಕೊಳ್ಳಲು, ಸಂತೋಷ ಮತ್ತು ಮನರಂಜನೆಗಾಗಿ ಗಾಂಜಾ ಬಳಸುತ್ತಾರೆ. ಆದರೆ ಇದರಿಂದ ಯಾವೆಲ್ಲಾ ರೀತಿಯಲ್ಲಿ ದೇಹದ ಮೇಲೆ ಪರಿಣಾಮ ಬೀರುತ್ತೆ ಗೊತ್ತಾ?
 

ನಶೆ ಏರಿಸಲು ಯುವ ಜನತೆ ದಾಸರಾಗಿರುವ ಗಾಂಜಾ (marijuana)ಕಿಕ್ ನೀಡುತ್ತೆ. ಆದರೆ ಇದರಿಂದ ಅಡ್ಡ ಪರಿಣಾಮಗಳೆಷ್ಟು. ಗಾಂಜಾ ಮೆದುಳು ಮತ್ತು ದೇಹದ ಮೇಲೆ ಪರಿಣಾಮ ಬೀರುವ, ಮನಸ್ಸನ್ನು ಬದಲಾಯಿಸುವ ಸಂಯುಕ್ತಗಳನ್ನು ಹೊಂದಿದೆ. ಇದು ನಿಮ್ಮನ್ನು ಅಡಿಕ್ಟ್ ಆಗಿಸುತ್ತೆ, ಅಷ್ಟೇ ಅಲ್ಲ ಆರೋಗ್ಯಕ್ಕೆ ಮಾರಕವಾಗಿದೆ. ನೀವು ಇದನ್ನ ಬಳಸಿದ್ರೆ ಏನಾಗುತ್ತೆ?
 

ನಶೆ ಹೆಚ್ಚಾಗುತ್ತೆ
ಒಳ್ಳೆಯ ಕಿಕ್ ಕೊಡುತ್ತೆ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಜನರು ಗಾಂಜಾ ಟ್ರೈ ಮಾಡ್ತಾರೆ. ಮುಖ್ಯ ಸೈಕೋಆಕ್ಟಿವ್ ಘಟಕಾಂಶವಾದ ಟಿಎಚ್ಸಿ, ಆಹಾರ ಮತ್ತು ಸೆಕ್ಸ್ ನಂತಹ ಸಂತೋಷಕ್ಕೆ (Happiness) ಪ್ರತಿಕ್ರಿಯಿಸುವ ಮೆದುಳಿನ ಭಾಗವನ್ನು (Part of Brain) ಉತ್ತೇಜಿಸುತ್ತದೆ. ಅದು ಡೋಪಮೈನ್ (dopamine) ಎಂಬ ರಾಸಾಯನಿಕವನ್ನು ಹೊರಹಾಕುತ್ತದೆ, ಇದು ಕಿಕ್ ಕೊಡುತ್ತೆ.

Latest Videos


ನೀವು ಗಾಂಜಾ ಎಳೆದ ಟಿಎಚ್‌ಸಿ ನಿಮ್ಮ ರಕ್ತಪ್ರವಾಹಕ್ಕೆ (blood circulation) ತ್ವರಿತವಾಗಿ ಪ್ರವೇಶಿಸಿ, ಸೆಕೆಂಡುಗಳಲ್ಲಿ ಹೈ ಫೀಲ್ ಆಗುವಂತೆ ಮಾಡುತ್ತೆ. ಟಿಎಚ್‌ಸಿ ಮಟ್ಟವು ಸಾಮಾನ್ಯವಾಗಿ ಸುಮಾರು 30 ನಿಮಿಷಗಳಲ್ಲಿ ಏರುತ್ತೆ, ಮತ್ತು ಅದರ ಪರಿಣಾಮ 1-3 ಗಂಟೆಗಳಲ್ಲಿ ಕರಗಬಹುದು. ನೀವು ಗಾಂಜಾವನ್ನು ಕುಡಿದರೆ ಅಥವಾ ತಿಂದರೆ, ಸಂಪೂರ್ಣವಾಗಿ ಕಂಟ್ರೋಲ್‌ಗೆ ಬರಲು ಅನೇಕ ಗಂಟೆಗಳೇ ಬೇಕಾಗಬಹುದು.
 

ಹೃದಯಕ್ಕೂ ಹಾನಿ
ಗಾಂಜಾ ನಿಮ್ಮ ಹೃದಯವನ್ನು ಹೆಚ್ಚು ಶ್ರಮಪಡುವಂತೆ ಮಾಡುತ್ತದೆ. ಸಾಮಾನ್ಯವಾಗಿ ಹೃದಯವು ನಿಮಿಷಕ್ಕೆ 50 ರಿಂದ 70 ಬಾರಿ ಬಡಿದುಕೊಳ್ಳುತ್ತದೆ. ಆದರೆ ಗಾಂಜಾ ಸೇವಿಸಿದ ನಂತರ 3 ಗಂಟೆಗಳವರೆಗೆ ಅದು ನಿಮಿಷಕ್ಕೆ 70 ರಿಂದ 120 ಬೀಟ್ಸ್ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಡಿಯುತ್ತೆ. ಗಾಂಜಾದಲ್ಲಿ ಸೇರಿಸಲಾದ ಸ್ಟ್ರೈನ್ ಪ್ಲಸ್ ಟಾರ್ ಮತ್ತು ಇತರ ರಾಸಾಯನಿಕಗಳು ಹೃದಯಾಘಾತ (heart attack) ಅಥವಾ ಪಾರ್ಶ್ವವಾಯುವಿನ ಸಾಧ್ಯತೆಯನ್ನು ಹೆಚ್ಚಿಸಬಹುದು. ವಯಸ್ಸಾದವರಲ್ಲಿ ಮತ್ತು ಹೃದಯ ಸಮಸ್ಯೆ ಹೊಂದಿರುವವರಿಗೆ ಅಪಾಯ ಹೆಚ್ಚು. 

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ (effect on mental health)
ಗಾಂಜಾ ಎಲ್ಲರಿಗೂ ಉತ್ತಮ ಅನುಭವ ನೀಡಲ್ಲ. ಇದು ಕೆಲವೊಮ್ಮೆ ನಿಮ್ಮನ್ನು ಆತಂಕ, ಭಯ, ಭೀತಿಗೆ ಒಳಗಾಗುವಂತೆ ಮಾಡಬಹುದು. ಗಾಂಜಾವನ್ನು ಬಳಸುವುದರಿಂದ ಖಿನ್ನತೆಯ ಸಾಧ್ಯತೆಗಳು (Depression) ಹೆಚ್ಚುತ್ತೆ. ನೀವು ಈಗಾಗಲೇ ಹೊಂದಿರುವ ಯಾವುದೇ ಮಾನಸಿಕ ಅಸ್ವಸ್ಥತೆಯನ್ನು ಮತ್ತಷ್ಟು ಹೆಚ್ಚಿಸುತ್ತೆ. ಹೆಚ್ಚಿನ ಜನಕ್ಕೆ ಇದು ಕೆಟ್ಟ ಅನುಭವವನ್ನೇ ನೀಡುತ್ತೆ. 

ಶ್ವಾಸಕೋಶಗಳಿಗೆ ಹಾನಿ (effect on lungs)
ಗಾಂಜಾ ಹೊಗೆಯು ಶ್ವಾಸಕೋಶಗಳಿಗೆ ತೊಂದರೆ ನೀಡಬಹುದು ಮತ್ತು ಕಿರಿಕಿರಿಗೊಳಿಸಬಹುದು. ಇದನ್ನು ನಿಯಮಿತವಾಗಿ ಬಳಸಿದರೆ, ಸಿಗರೇಟ್ ಸೇದುವವರಂತೆಯೇ ಉಸಿರಾಟದ ಸಮಸ್ಯೆಗಳು ಬಾಧಿಸಬಹುದು. ಕೆಮ್ಮು, ಶ್ವಾಸ ತೆಗೆದುಕೊಳ್ಳಲು ಸಮಸ್ಯೆ ಕಾಣಿಸಿಕೊಳ್ಳಬಹುದು. 

ನಿಮ್ಮ ಆಲೋಚನೆಯನ್ನೆ ಬದಲಿಸಬಹುದು (changes your thougts)
ಗಾಂಜಾ ನಿಮ್ಮ ಇಂದ್ರಿಯಗಳನ್ನು ಮತ್ತು ನಿರ್ಧಾರಗಳನ್ನು ಬದಲಿಸಬಹುದು. ಗಾಂಜಾ ಎಷ್ಟು ಶಕ್ತಿಶಾಲಿಯಾಗಿದೆ, ನೀವು ಅದನ್ನು ಹೇಗೆ ತೆಗೆದುಕೊಂಡಿದ್ದೀರಿ ಮತ್ತು ಈ ಹಿಂದೆ ನೀವು ಎಷ್ಟು ಗಾಂಜಾವನ್ನು ಬಳಸಿದ್ದೀರಿ ಎಂಬಂತಹ ವಿಷಯಗಳನ್ನು ಅವಲಂಬಿಸಿ ದೇಹದ ಮೇಲಿನ ಅದರ ಪರಿಣಾಮಗಳು ಭಿನ್ನವಾಗಿರಬಹುದು.  

ಗಾಂಜಾ ಅಡಿಕ್ಟ್ 
ಗಾಂಜಾ ಬಳಸುವ 10 ರಲ್ಲಿ 1 ಜನರು ವ್ಯಸನಿಗಳಾಗುತ್ತಾರೆ. ಅಂದರೆ ಅದು ಸಂಬಂಧಗಳು, ಉದ್ಯೋಗ, ಆರೋಗ್ಯ ಅಥವಾ ಹಣಕಾಸುಗಳಿಗೆ ಹಾನಿ ಮಾಡಿದರೂ ಸಹ ಅದನ್ನು ಬಳಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಾಂಜಾವನ್ನು ಪ್ರಾರಂಭಿಸಿದಷ್ಟೂ ಅಪಾಯವು ಹೆಚ್ಚಾಗಿರುತ್ತ. ಅದರ ಬಳಕೆಯೂ ಹೆಚ್ಚುತ್ತೆ.  ಇದರಿಂದ ಕಿರಿಕಿರಿ, ಚಡಪಡಿಕೆ, ನಿದ್ರೆ ಮಾಡಲು ಅಸಮರ್ಥ, ಹುಚ್ಚರಂತೆ ಮಾನಸಿಕ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. 

ಇದು ಮೆದುಳನ್ನು ದುರ್ಬಲಗೊಳಿಸಬಹುದು (brain get weak)
ಗಾಂಜಾ ಸೇವಿಸೋದರಿಂದ ಗಮನ ಕೇಂದ್ರೀಕರಿಸಲು, ಕಲಿಯಲು ಮತ್ತು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗುತ್ತೆ. ಇದು ಅಲ್ಪಾವಧಿಯ ಪರಿಣಾಮವಾಗಿದ್ದರೂ ಗಾಂಜಾ ಸೇವಿಸಿದ 24 ಗಂಟೆಗಳವರೆಗೆ ಮೆದುಳು ದುರ್ಬಲವಾಗಿರುತ್ತೆ. ಅದರಲ್ಲೂ ಹದಿಹರೆಯದಲ್ಲಿ ಹೆಚ್ಚಿನ ಪರಿಣಾಮ ಬೀರುತ್ತೆ. 

ವೈದ್ಯಕೀಯ ಗಾಂಜಾವೂ ಇದೆ 
ವೈದ್ಯಕೀಯ ಗಾಂಜಾ ಹೆಚ್ಚಿನ ರಾಜ್ಯಗಳಲ್ಲಿ ಕೆಲವು ರೂಪದಲ್ಲಿ ಕಾನೂನುಬದ್ಧವಾಗಿದೆ. ಮತ್ತು 10 ಕ್ಕೂ ಹೆಚ್ಚು ರಾಜ್ಯಗಳು ಮತ್ತು ವಾಷಿಂಗ್ಟನ್ ಡಿಸಿ ರಿಕ್ರಿಯೇಷನಲ್ ಗಾಂಜಾ ಅಥವಾ ಮೆಡಿಕಲ್ ಗಾಂಜಾವನ್ನು ಕಾನೂನುಬದ್ಧಗೊಳಿಸಿವೆ. ಆದರೆ ಫೆಡರಲ್ ಸರ್ಕಾರದ ಗಾಂಜಾ ನಿಷೇಧವು ಮಾನವರ ಮೇಲೆ ಅದರ ಪರಿಣಾಮಗಳನ್ನು ಅಧ್ಯಯನ ಮಾಡುವುದು ಕಷ್ಟಕರವಾಗಿದೆ. ಸೀಮಿತ ಸಂಶೋಧನೆಯು ಔಷಧೀಯ ಗಾಂಜಾ ಹಲವು ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ ಎಂದು ತೋರಿಸುತ್ತದೆ.

ಹೆಚ್ಚಿನ ಹಸಿವು
ಗಾಂಜಾವನ್ನು ನಿಯಮಿತವಾಗಿ ಬಳಸುವ ಅನೇಕ ಜನರಿಗೆ ಹೆಚ್ಚಿನ ಹಸಿವು ಕಂಡು ಬರುತ್ತೆ. ಅವರು ಇದನ್ನು "ಮಂಚೀಸ್" ಎಂದು ಕರೆಯುತ್ತಾರೆ. ಏಡ್ಸ್, ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ತೂಕವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ವಿಜ್ಞಾನಿಗಳು ಇದು ಸುರಕ್ಷಿತವಾಗಿದೆಯೇ ಎಂದು ಅಧ್ಯಯನ ಮಾಡುತ್ತಿದ್ದಾರೆ.

ನವಜಾತ ಶಿಶು ಕಡಿಮೆ ತೂಕ ಹೊಂದಿರಬಹುದು (low weight baby)
ಗರ್ಭಾವಸ್ಥೆಯಲ್ಲಿ ಗಾಂಜಾ ಸೇದುವ ತಾಯಂದಿರು ಕಡಿಮೆ ತೂಕದ ಅಥವಾ ಅಕಾಲಿಕ ಶಿಶುಗಳಿಗೆ ಜನ್ಮ ನೀಡುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಆದರೆ ಆ ಶಿಶುಗಳಿಗೆ ಮುಂದೆ ಶೈಕ್ಷಣಿಕ ಸಮಸ್ಯೆ, ಮಾದಕ ವ್ಯಸನಿಯಾಗುವ ಸಾಧ್ಯತೆ, ಇನ್ನಿತರ ಸಮಸ್ಯೆ ಕಾಡಬಹುದೇ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಆಲ್ಕೋಹಾಲ್ ನ ಅಪಾಯಗಳನ್ನು ತೀವ್ರಗೊಳಿಸುತ್ತದೆ
10 ರಲ್ಲಿ 1 ಕ್ಕೂ ಹೆಚ್ಚು ಕುಡುಕರು ಕಳೆದ ವರ್ಷದಲ್ಲಿ ಗಾಂಜಾವನ್ನು ಬಳಸಿದ್ದಾರೆ ಎಂದು ಹೇಳುತ್ತಾರೆ. ಮದ್ಯಪಾನ ಮತ್ತು ಗಾಂಜಾವನ್ನು ಒಂದೇ ಸಮಯದಲ್ಲಿ ಕುಡಿಯುವ ವ್ಯಕ್ತಿಗಳಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರುತ್ತದೆ. 

click me!