ಕೀಮೋಥೆರಪಿ ಮಾಡೋವಾಗ ಕೂದಲು ಉದುರುವುದೇಕೆ?

First Published | Jul 19, 2023, 5:39 PM IST

ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ಕೀಮೋಥೆರಪಿ ಮಾಡುವಾಗ ಕೂದಲು ಉದುರೋದು ಸಾಮಾನ್ಯ. ಇದು ಯಾಕೆ ಸಂಭವಿಸುತ್ತೆ? ಎಲ್ಲಾ ಸಂದರ್ಭದಲ್ಲೂ ಹೀಗೆ ಆಗೋದು ಸಾಮಾನ್ಯವೇ? ಅನ್ನೋದನ್ನು ತಿಳಿಯೋಣ. 
 

ಕೂದಲು ಉದುರುವುದು (hair fall) ಕೆಲವು ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಸಂಭವಿಸುವ ಸಾಮಾನ್ಯ ಅಡ್ಡಪರಿಣಾಮ. ಇದು ಸಾಮಾನ್ಯವಾಗಿ ತಾತ್ಕಾಲಿಕವೂ ಆಗಿದೆ. ನೀವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೀಮೋಥೆರಪಿ ತೆಗೆದುಕೊಳ್ಳುತ್ತಿದ್ದರೆ ಕೂದಲು ಉದುರುವುದರಿಂದ ಅಸಮಾಧಾನಗೊಳ್ಳಬಹುದು. ಆದರೆ ಪ್ರತಿ ಕೀಮೋಥೆರಪಿ ಔಷಧವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆಯೇ? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕ್ಯಾನ್ಸರ್ ಒಂದು ಗಂಭೀರ ಸಮಸ್ಯೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಮಾರಣಾಂತಿಕವಾಗಬಹುದು. ಕೀಮೋಥೆರಪಿ (chemotherapy) ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ  ಪರಿಹಾರ. ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ, ಹೆಚ್ಚಿನ ಜನರು ಕೂದಲು ಉದುರುವ ಸಮಸ್ಯೆಗಳನ್ನು ಎದುರಿಸ್ತಾರೆ. ಇದಕ್ಕೆ ಮುಖ್ಯ ಕಾರಣ ಕೀಮೋಥೆರಪಿ. 

Tap to resize

ಕೀಮೋ ವೇಗವಾಗಿ ಬೆಳೆಯುತ್ತಿರುವ ಕೋಶಗಳನ್ನು ಗುರಿಯಾಗಿಸುವುದರಿಂದ ಕೂದಲು ಉದುರುವಿಕೆ (hair fall) ಉಂಟಾಗುತ್ತೆ. ಇದು ನಮ್ಮ ಕೂದಲಿನ ಬೇರುಗಳನ್ನು ಹಾನಿಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ
 

ಲೇಝರ್ ಚಿಕಿತ್ಸೆಯು (laser treatment) ಕೆಲವೊಮ್ಮೆ ಕೂದಲು ಉದುರುವಿಕೆಗೆ ಕಾರಣವಾಗಬಹುದು, ಇದನ್ನು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಬಳಸಲಾಗುತ್ತೆ. ಇದು ವಿಕಿರಣವನ್ನು ನೀಡುವ ಪ್ರದೇಶವನ್ನು ಅವಲಂಬಿಸಿರುತ್ತದೆ. ಆದರೆ ಎಲ್ಲಾ ಕೀಮೋಥೆರಪಿ ರೋಗಿಗಳು ಕೂದಲನ್ನು ಏಕೆ ಕಳೆದುಕೊಳ್ಳುವುದಿಲ್ಲ? ಅನ್ನೋದಕ್ಕೆ ಕಾರಣಗಳನ್ನು ತಿಳಿದುಕೊಳ್ಳೋಣ.

ಕೀಮೋಥೆರಪಿಯ ಪರಿಣಾಮ 
ಎಲ್ಲಾ ಕೀಮೋಥೆರಪಿ ಔಷಧಿಗಳು ಕೂದಲು ಉದುರುವಿಕೆಗೆ ಕಾರಣವಾಗೋದಿಲ್ಲ. ಒಂದೊಂದು ರೀತಿಯ ಔಷಧಿಗಳಿಂದ ಒಂದೊಂದು ರೀತಿಯಲ್ಲಿ ಕೂದಲು ಉದುರುತ್ತೆ. ಉದಾಹರಣೆಗೆ, ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ, (cancer treatment) ಕೀಮೋಥೆರಪಿ ಸಮಯದಲ್ಲಿ ಕೂದಲು ಉದುರುತ್ತೆ. 
 

ಎಲ್ಲಾ ರೀತಿಯ ಕೀಮೋಥೆರಪಿ ಚಿಕಿತ್ಸೆಯು ಬೇರೇ ಬೇರೆ ವಿಧವಾದ ಕ್ಯಾನ್ಸರ್ ಔಷಧಿಗಳ ನಿರ್ದಿಷ್ಟ ಮಿಶ್ರಣವನ್ನು ಬಳಸುತ್ತದೆ, ಅದಕ್ಕಾಗಿಯೇ ಎಲ್ಲಾ ಕೀಮೋಥೆರಪಿ ರೋಗಿಗಳು ತ್ವರಿತ ಕೂದಲು ಉದುರುವಿಕೆಯನ್ನು ಅನುಭವಿಸುವುದಿಲ್ಲ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಕೂದಲು ಉದುರುವುದರ ಜೊತೆಗೆ, ಕೂದಲು ತೆಳುವಾಗುವುದು ಅಥವಾ ಭಾಗಶಃ ಬಕ್ಕತಲೆ ಸಮಸ್ಯೆಗಳೂ ಕಾಡುತ್ತವೆ.

ಕೂದಲು ಉದುರುವಿಕೆಯ ಸಮಸ್ಯೆ ಯಾವಾಗ ಕಾಣಿಸಿಕೊಳ್ಳುತ್ತೆ?
ಈ ಸಮಸ್ಯೆ ಸಾಮಾನ್ಯವಾಗಿ ಸುಮಾರು ಮೂರು ವಾರಗಳ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ತಲೆಯ ಕೂದಲು ಮೊದಲು ಉದುರುತ್ತೆ, ನಂತರ ದೇಹದ ಇತರ ಭಾಗಗಳ ಕೂದಲು ಉದುರುತ್ತೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ. 

ಕೀಮೋ ಸಂಬಂಧಿತ ಕೂದಲು ಉದುರುವಿಕೆ ತಾತ್ಕಾಲಿಕ
ಕೀಮೋಥೆರಪಿ ನಿಮ್ಮ ಕೂದಲನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡುವುದಿಲ್ಲ. ಕೂದಲು ಉದುರುವಿಕೆಯನ್ನು ಅಡ್ಡಪರಿಣಾಮವಾಗಿ ಅನುಭವಿಸಿದರೆ, ಚಿಕಿತ್ಸೆ ಮುಗಿದ ಕೆಲವೇ ತಿಂಗಳುಗಳಲ್ಲಿ ಕೂದಲು ಮರಳಿ ಬರಲು ಪ್ರಾರಂಭಿಸುತ್ತದೆ. ಮೆಮೋರಿಯಲ್ ಸ್ಲೋನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್ ಹೇಳುವಂತೆ ಕೂದಲು 3 ರಿಂದ 5 ತಿಂಗಳಲ್ಲಿ ಮತ್ತೆ ಬೆಳೆಯುತ್ತದೆ.

ಕೀಮೋ ಥೆರಪಿಯ ಬಳಿಕ ಕೂದಲಿನ ಬೆಳವಣಿಗೆಯ (hair growth) ಆರಂಭಿಕ ಹಂತಗಳಲ್ಲಿ, ಅವುಗಳಿಗೆ ಬಣ್ಣ ಹಚ್ಚುವುದನ್ನು ಅಥವಾ ಬ್ಲೀಚಿಂಗ್ ಮಾಡುವುದನ್ನು ತಪ್ಪಿಸಬೇಕು. ಅಲ್ಲದೆ, ಕೂದಲಿಗೆ ಯಾವುದೇ ಹೀಟಿಂಗ್ ಸಾಧನವನ್ನು ಬಳಸಬೇಡಿ. ನಿಮ್ಮ ಕೂದಲು ಮತ್ತೆ ಬೆಳೆದಾಗ, ಅವುಗಳ ಬಣ್ಣ ಅಥವಾ ವಿನ್ಯಾಸವು ಮೊದಲಿಗಿಂತ ಸ್ವಲ್ಪ ಭಿನ್ನವಾಗಿರಬಹುದು.

Latest Videos

click me!