How does stress affect memory Psychology: ಹತ್ತು ಜನ ನಮ್ಮನ್ನು ಹೊಗಳಿ, ಒಬ್ಬರು ಮಾತ್ರ ಟೀಕಿಸಿದರೆ, ಆ ಟೀಕೆಯೇ ಮನಸ್ಸಲ್ಲಿ ಉಳಿದುಬಿಡುತ್ತದೆ. ನಮ್ಮ ಮೆದುಳು ಅದನ್ನೇ ಪದೇ ಪದೇ ಯೋಚಿಸುತ್ತದೆ. ನಮ್ಮ ಬ್ರೇನ್ ನೆಗೆಟಿವ್ ವಿಷಯಗಳನ್ನೇ ಯಾಕೆ ಹೆಚ್ಚು ನೆನಪಿಟ್ಟುಕೊಳ್ಳುತ್ತೆ?
ಮನಃಶಾಸ್ತ್ರಜ್ಞರ ಪ್ರಕಾರ, ನಮ್ಮ ಮೆದುಳು ಅಪಾಯಕಾರಿ ಅಥವಾ ನೋವುಂಟುಮಾಡುವ ಘಟನೆಗಳನ್ನು ಹೆಚ್ಚು ನೆನಪಿಟ್ಟುಕೊಳ್ಳುವಂತೆ ವಿಕಸನಗೊಂಡಿದೆ. ಟೀಕೆಗಳು, ವೈಫಲ್ಯಗಳು, ಉದ್ಯೋಗದ ಒತ್ತಡ, ಸಂಬಂಧಗಳಲ್ಲಿನ ಸಮಸ್ಯೆಗಳಂತಹ ನಕಾರಾತ್ಮಕ ಅನುಭವಗಳನ್ನು ನಮ್ಮ ಮೆದುಳು ಅದೇ ತೀವ್ರತೆಯಿಂದ ನೆನಪಿಟ್ಟುಕೊಳ್ಳುತ್ತದೆ.
ನ್ಯೂರೋಸೈನ್ಸ್ ಸಂಶೋಧನೆಗಳ ಪ್ರಕಾರ, ಭಾವನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೆದುಳಿನ ಕೆಲವು ಭಾಗಗಳು ವಿಶೇಷವಾಗಿ ಸಂಸ್ಕರಿಸುತ್ತವೆ. ಅದರಲ್ಲೂ ಭಯ, ಅಪಾಯ ಅಥವಾ ಒತ್ತಡಕ್ಕೆ ಸಂಬಂಧಿಸಿದ ಅನುಭವಗಳು ಹೆಚ್ಚು ಭಾವನಾತ್ಮಕ ತೀವ್ರತೆ ಹೊಂದಿದ್ದರೆ, ಅವು ನೆನಪಿನಲ್ಲಿ ಬಲವಾಗಿ ಉಳಿಯುವ ಸಾಧ್ಯತೆ ಹೆಚ್ಚು.
24
ಮಾನಸಿಕ ಆರೋಗ್ಯ ಸರಿ ಇಲ್ಲ ಎಂದರ್ಥವಲ್ಲ
ನೆಗೆಟಿವ್ ವಿಷಯಗಳು ಹೆಚ್ಚು ನೆನಪಲ್ಲಿ ಉಳಿಯುವುದು ಎಂದರೆ ನಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದರ್ಥವಲ್ಲ. ಇದೊಂದು ಸಾಮಾನ್ಯ ಮಾನಸಿಕ ಪ್ರಕ್ರಿಯೆ. ಆದರೆ, ನಕಾರಾತ್ಮಕ ಆಲೋಚನೆಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವಷ್ಟು ಹೆಚ್ಚಾದರೆ ಅಥವಾ ಕೆಲಸ, ನಿದ್ರೆ, ಸಂಬಂಧಗಳು ಅಥವಾ ಸಂತೋಷಕ್ಕೆ ಅಡ್ಡಿಯಾದರೆ, ತಜ್ಞರ ಸಲಹೆ ಪಡೆಯುವುದು ಉತ್ತಮ. ಪ್ರತಿಯೊಬ್ಬರಿಗೂ ಆಗಾಗ ನೆಗೆಟಿವ್ ಆಲೋಚನೆಗಳು ಬರುವುದು ಸಹಜ. ಆದರೆ ಅವುಗಳ ತೀವ್ರತೆ ಮತ್ತು ಪರಿಣಾಮ ಮುಖ್ಯ.
34
ಸೋಶಿಯಲ್ ಮೀಡಿಯಾ ಬಳಕೆ
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಕೂಡ ಈ ಪ್ರವೃತ್ತಿಯ ಮೇಲೆ ಪರಿಣಾಮ ಬೀರಬಹುದು. ನಕಾರಾತ್ಮಕ ಸುದ್ದಿಗಳು, ಟೀಕೆಗಳು ಅಥವಾ ಇತರರೊಂದಿಗೆ ನಿರಂತರ ಹೋಲಿಕೆಗಳು ನಮ್ಮ ಗಮನವನ್ನು ಮತ್ತಷ್ಟು ನೆಗೆಟಿವ್ ಕಡೆಗೆ ಸೆಳೆಯಬಹುದು. ಅದಕ್ಕಾಗಿಯೇ ಡಿಜಿಟಲ್ ಬಳಕೆಗೆ ಮಿತಿಗಳನ್ನು ಹಾಕಿಕೊಳ್ಳುವುದು, ವಿಶ್ವಾಸಾರ್ಹ ಮಾಹಿತಿ ಮಾತ್ರ ಓದುವುದು ಮತ್ತು ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ನೇರವಾಗಿ ಸಮಯ ಕಳೆಯುವುದು ಮಾನಸಿಕ ಸಮತೋಲನಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
ಮನಃಶಾಸ್ತ್ರಜ್ಞರ ಪ್ರಕಾರ, ನೆಗೆಟಿವ್ ವಿಷಯಗಳಿಂದ ಹೊರಬರಲು ದಿನದಲ್ಲಿ ನಡೆದ ಮೂರು ಒಳ್ಳೆಯ ವಿಷಯಗಳನ್ನು ಬರೆದಿಡುವುದು, ಕೃತಜ್ಞತಾ ಭಾವನೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.
ಧ್ಯಾನ ಅಥವಾ ಮೈಂಡ್‌ಫುಲ್‌ನೆಸ್ ಅಭ್ಯಾಸ ಮಾಡುವುದು, ಸಾಕಷ್ಟು ನಿದ್ರೆ ಮಾಡುವುದು, ಮತ್ತು ದೈಹಿಕ ವ್ಯಾಯಾಮ ಮಾಡುವ ಅಭ್ಯಾಸಗಳು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ, ಪ್ರತಿಯೊಂದು ನೆಗೆಟಿವ್ ಆಲೋಚನೆಯೂ ನಿಜವೇ, ಅದಕ್ಕೆ ಪುರಾವೆಗಳಿವೆಯೇ ಎಂದು ಪ್ರಶ್ನಿಸಿಕೊಳ್ಳುವುದು ಕೂಡ ಉತ್ತಮ ವಿಧಾನ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.