ಪ್ರಯಾಣದ ಸಮಯದಲ್ಲಿ ವಾಂತಿ ಆಗುತ್ತಾ? ಈ ಟ್ರಿಕ್ಸ್ ಟ್ರೈ ಮಾಡಿ

Published : Nov 22, 2022, 02:41 PM IST

ಪ್ರಯಾಣದ ಸಮಯದಲ್ಲಿ, ಕೆಲವು ಜನರು ವಾಂತಿ ಮತ್ತು ವಾಕರಿಕೆ ಸಮಸ್ಯೆ ಅನುಭವಿಸುತ್ತಾರೆ. ಜರ್ನಿ ಮಾಡೋವಾಗ ಇದು ತುಂಬಾ ಸಾಮಾನ್ಯ. ಅದನ್ನು ತೊಡೆದುಹಾಕಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಹಾಗಾಗಿ ಈ ಟಿಪ್ಸ್ ಟ್ರೈ ಮಾಡಿ ನೋಡಿ.  

PREV
111
ಪ್ರಯಾಣದ ಸಮಯದಲ್ಲಿ ವಾಂತಿ ಆಗುತ್ತಾ? ಈ ಟ್ರಿಕ್ಸ್ ಟ್ರೈ ಮಾಡಿ

ಪ್ರಯಾಣದ ಸಮಯದಲ್ಲಿ, ಹೆಚ್ಚಿನ ಜನರಿಗೆ ವಾಂತಿ, ತಲೆ ತಿರುಗುವಿಕೆ ಮತ್ತು ವಾಕರಿಕೆಯ ತೊಂದರೆ ಇರುತ್ತೆ. ಇದು ಅನಾರೋಗ್ಯದಿಂದ ಉಂಟಾಗುತ್ತೆ. ಬಹಳ ಸಮಯದ ನಂತರ ಪ್ರಯಾಣಿಸಿದ್ರೆ ಇದು ಸಂಭವಿಸುತ್ತೆ  ಈ ಸಮಸ್ಯೆ ಯಾವಾಗಲೂ ಪ್ರವಾಸಗಳಿಗೆ ಹೋಗುವವರೂ ಸಹ ಅನುಭವಿಸುತ್ತಾರೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಟ್ರಾವೆಲ್ ಮಾಡೋವಾಗ ವಾಂತಿಯಾಗುತ್ತೆ(Vomit). ಈ ಸಮಸ್ಯೆಯಿಂದಾಗಿ, ನೀವು ಸಹ ತೊಂದರೆಗೀಡಾಗಿದ್ದರೆ, ಈ ಸಲಹೆ ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.

211
ಮೋಶನ್ ಸಿಕ್ನೆಸ್ ತೊಡೆದು ಹಾಕಲು ಸಲಹೆಗಳು

 ಶುಂಠಿ(Ginger) - 
ಪ್ರಯಾಣದ ಸಮಯದಲ್ಲಿ ವಾಕರಿಕೆ ಅಥವಾ ವಾಂತಿಯಾಗುತ್ತಿದ್ದರೆ, ಶುಂಠಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳೊದನ್ನು ಮರಿಬೇಡಿ. ಮೋಶನ್ ಸಿಕ್ನೆಸ್ ಉಂಟಾದಾಗಲೆಲ್ಲಾ, ಶುಂಠಿ ಸಿಪ್ಪೆ ಸುಲಿದು, ಒಂದು ಸಣ್ಣ ತುಂಡನ್ನು ಬಾಯಿಯಲ್ಲಿ ಇರಿಸಿ. ಲಾಂಗ್ ಜರ್ನಿಯಲ್ಲಿ ಇದನ್ನು ಮಾಡೋದ್ರಿಂದ ವಾಂತಿ ಬರುವ ಸಾಧ್ಯತೆ ಕಡಿಮೆ. 
 

311

ಶುಂಠಿ ಮೋಶನ್ ಸಿಕ್ನೆಸ್(Motion Sickness) ಲಕ್ಷಣಗಳನ್ನು ಕಡಿಮೆ ಮಾಡುತ್ತೆ. ಶುಂಠಿಯ ರುಚಿಯು ವಾಕರಿಕೆ ಮತ್ತು ಮೋಶನ್ ಸಿಕ್ ನೆಸ್ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ ಎಂದು ಅನೇಕರು ನಂಬುತ್ತಾರೆ. ನೆಕ್ಸ್ಟ್ ಟೈಮ್ ನೀವು ಟ್ರೈ ಮಾಡಿ ನೋಡಿ.

411
ಪೇಪರ್ಮೆಂಟ್-

ಟ್ರಾವೆಲ್ಲಿಂಗ್ ಸಮಯದಲ್ಲಿ ಪೆಪ್ಪರ್ ಮಿಂಟ್ (Pepper mint) ಎಣ್ಣೆ ಬಾಟಲಿಯನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ಕರವಸ್ತ್ರದ ಮೇಲೆ ಈ ಎಣ್ಣೆ ಎರಡರಿಂದ ಮೂರು ಹನಿಗಳನ್ನು ಹಾಕಿ ಮತ್ತು ಪ್ರಯಾಣದ ಸಮಯದಲ್ಲಿ ಅದರ ವಾಸನೆ ನೋಡುತ್ತಿರಿ. ಇದು ಸಾಕಷ್ಟು ಪ್ರಯೋಜನಕಾರಿ ಉಪಾಯವಾಗಿದೆ.

511

ಪುದೀನಾದಲ್ಲಿ ಮೆಂಥಾಲ್ ಇದ್ದು, ಇದು ಜೀರ್ಣಕ್ರಿಯೆಯನ್ನು(Digestion) ಸುಲಭಗೊಳಿಸುತ್ತೆ. ಇದು ವಾಕರಿಕೆಯ ರೋಗ ಲಕ್ಷಣಗಳನ್ನು ತಡೆಗಟ್ಟಲು ಸಹಾಯ ಮಾಡುವ ಅತ್ಯಂತ ಬಲವಾದ ಪರಿಮಳವನ್ನು ಸಹ ಹೊಂದಿದೆ. ಆದುದರಿಂದ ಇದನ್ನ ಜತೆಗೆ ಒಯ್ಯೋದನ್ನು ಮಿಸ್ ಮಾಡಬೇಡಿ.

611
ನಿಂಬೆ (Lemon)-

ಪ್ರಯಾಣದ ಸಮಯದಲ್ಲಿ ಯಾವಾಗಲೂ ನಿಂಬೆಹಣ್ಣನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ನಿಂಬೆಹಣ್ಣಿನ ವಾಸನೆಯನ್ನು ತೆಗೆದುಕೊಳ್ಳಬಹುದು ಅಥವಾ ಅದನ್ನು ಅರ್ಧಕ್ಕೆ ಕತ್ತರಿಸಿ ಅದನ್ನು ಹೀರಬಹುದು. ಅದರ ಹುಳಿ ರುಚಿ ವಾಕರಿಕೆ ಉಂಟಾಗೋದನ್ನು ತಡೆಯುತ್ತೆ.

711

ನೀವು ಮೋಶನ್ ಸಿಕ್ನೆಸ್ ಅನುಭವಿಸಿದಾಗ ಮಾತ್ರ ಇದನ್ನು ಮಾಡಬೇಕಾಗುತ್ತೆ. ಯಾಕಂದ್ರೆ ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯವಾಗಿರುತ್ತವೆ. ಹಾಗಾಗಿ, ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತೆ ಮತ್ತು ವಾಕರಿಕೆ ಕಡಿಮೆ ಮಾಡುತ್ತೆ. ನಿಂಬೆಯ ತೀಕ್ಷ್ಣವಾದ ಮತ್ತು ಹುಳಿ ಪರಿಮಳ (Smell) ಮೋಶನ್ ಸಿಕ್ನೆಸ್ ಲಕ್ಷಣಗಳನ್ನು ನಿವಾರಿಸುತ್ತೆ.  

811
ಹೆಚ್ಚು ಹೆಚ್ಚು ನೀರು(Water) ಕುಡಿಯಿರಿ

ಸಾಕಷ್ಟು ನೀರು ಮತ್ತು ಇತರ ದ್ರವ ವಸ್ತುಗಳನ್ನು ಕುಡಿಯುವ ಮೂಲಕ ಹೈಡ್ರೇಟ್ ಆಗಿ ಉಳಿಯೋದು ಮೋಶನ್ ಸಿಕ್ನೆಸ್ ನಿಭಾಯಿಸುವ ಮತ್ತೊಂದು ಮಾರ್ಗವಾಗಿದೆ. ನಿರ್ಜಲೀಕರಣದಿಂದಾಗಿ ಮೋಶನ್ ಸಿಕ್ನೆಸ್  ಲಕ್ಷಣಗಳು ಹೆಚ್ಚಾಗುತ್ತವೆ. ಹಾಗಾಗಿ ನೀರು ಕುಡಿಯುತ್ತಲೇ ಇರಿ.

911
ಮೋಶನ್ ಸಿಕ್ನೆಸ್ ತಡೆಗಟ್ಟಲು ಇಲ್ಲಿದೆ ನೋಡಿ ಇತರ ಸಲಹೆಗಳು

ಆರಾಮವಾಗಿರಿ ಮತ್ತು ಪ್ರಯಾಣ ಮಾಡುವಾಗ ನಿಮ್ಮ ದೇಹಕ್ಕೆ ಹೆಚ್ಚು ಒತ್ತಡ(Stress) ನೀಡಬೇಡಿ. ಮನಸ್ಸೂ ರಿಲ್ಯಾಕ್ಸ್ ಆಗಿರುವ ಹಾಗೆ ನೋಡಿಕೊಲ್ಳಿ. ಜೊತೆಗೆ ಹೋಗುತ್ತಿರುವವರ ಜೊತೆಗೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಳ್ಳಿ.

1011

ಚಲಿಸುವ ವಾಹನದಲ್ಲಿ ಓದೋದು, ಬರೆಯೋದು ಅಥವಾ ಟೈಪ್ ಮಾಡೋದು ಮುಂತಾದ ಚಟುವಟಿಕೆಗಳನ್ನು ತಪ್ಪಿಸಿ.
ವಿಶೇಷವಾಗಿ ಪ್ರಯಾಣದ ಮೊದಲು ಆಲ್ಕೋಹಾಲ್ (Alcohol) ಕುಡಿಯೋದನ್ನು ತಪ್ಪಿಸಿ.

1111

ತಾಜಾ ಗಾಳಿಯನ್ನು ಉಸಿರಾಡಿ. 
ಧೂಮಪಾನವನ್ನು(Smoke) ತ್ಯಜಿಸಿ.
ಈ ಟಿಪ್ಸ್ ಫಾಲೋ ಮಾಡೋ ಮೂಲಕ ಹ್ಯಾಪಿ ಟ್ರಾವೆಲ್ಲಿಂಗ್ ನಿಮ್ಮದಾಗುತ್ತೆ.  

Read more Photos on
click me!

Recommended Stories