ಫಟಾಫಟ್ ಆಗಿ ಫೇಮಸ್ ಆಗೋ ಹುಚ್ಚು, ಇದ್ರಿಂದ ಅಪಾಯ ಖಂಡಿತ!

Published : Nov 20, 2022, 05:20 PM ISTUpdated : Nov 20, 2022, 05:29 PM IST

ಸೆಲ್ಫಿಗಳ ಕ್ರೇಜ್ ಮತ್ತು ಶಾರ್ಟ್ ವೀಡಿಯೊಗಳು ಬೇಗನೆ ವೈರಲ್ ಆಗುತ್ತಿದ್ದು, ಈ ಕ್ರೇಜ್ ಇದೀಗ ಎಲ್ಲೆಡೆ ಹೆಚ್ಚುತ್ತಿದೆ. ಇದರ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದು 'ಫ್ಯಾಂಟಮ್ ಪಾಕೆಟ್ ವೈಬ್ರೇಷನ್ ಸಿಂಡ್ರೋಮ್' ನಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ. 

PREV
18
ಫಟಾಫಟ್ ಆಗಿ ಫೇಮಸ್ ಆಗೋ ಹುಚ್ಚು, ಇದ್ರಿಂದ ಅಪಾಯ ಖಂಡಿತ!

ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕ್ರೇಜ್(Mobile Craze) ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಎಲ್ಲರೂ ಮೊಬೈಲ್ ಫೋನ್ ಎಷ್ಟು ಕ್ರೇಜ್ ಆಗಿದ್ದಾರೆ ಎಂದರೆ, ಮೊಬೈಲ್ ಫೋನ್ ಬಿಟ್ಟು ಒಂದು ಕ್ಷಣವೂ ಇರಲಾರದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಇದನ್ನು ಫ್ಯಾಂಟಮ್ ಪಾಕೆಟ್ ವೈಬ್ರೇಷನ್ ಸಿಂಡ್ರೋಮ್ ಎನ್ನಲಾಗುತ್ತೆ. ಫ್ಯಾಂಟಮ್ ಪಾಕೆಟ್ ವೈಬ್ರೇಷನ್ ಸಿಂಡ್ರೋಮ್ ಒಬ್ಬ ವ್ಯಕ್ತಿ ತನ್ನ ಜೇಬಿನಲ್ಲಿ ಫೋನ್ ನ ವೈಬ್ರೆಷನ್ ಆಗುವಂತೆ ಅನುಭವಿಸುವ ಒಂದು ಕಾಯಿಲೆಯಾಗಿದೆ. ಈ ಸಿಂಡ್ರೋಮ್ ಎದುರಿಸಲು ಉತ್ತಮ ಮಾರ್ಗವೆಂದರೆ ಮೊಬೈಲ್ ಫೋನ್ ಗಳ ಬಳಕೆ ಕಡಿಮೆ ಮಾಡೋದು ಮತ್ತು ಕೆಲವೊಮ್ಮೆ ಫೋನ್ ನ ವೈಬ್ರೆಷನ್ ಆಫ್ ಮಾಡೋದು.

28

ಮೊಬೈಲ್ ಫೋನ್‌ಗಳು ಮತ್ತು ಸೋಶಿಯಲ್  ಮೀಡಿಯಾಗಳ(Social media) ಅತಿಯಾದ ಬಳಕೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಇದು ಖಿನ್ನತೆ, ಆತಂಕ, ಒಂಟಿತನ ಮತ್ತು ಆತ್ಮಹತ್ಯೆಯ ಆಲೋಚನೆಗಳಿಗೆ ಕಾರಣವಾಗಬಹುದು. ಸೋಶಿಯಲ್  ಮೀಡಿಯಾ ಕೆಲವೊಮ್ಮೆ ಒಬ್ಬರ ಬಗ್ಗೆ ತಪ್ಪು ಮತ್ತು ಅಸಮರ್ಪಕ ಮಾಹಿತಿ ನೀಡುವ ಮೂಲಕ ನೆಗಟಿವಿಟಿಗೆ ಕಾರಣವಾಗುತ್ತೆ. 

38

ಸೆಲ್ಫಿ (Selfie) ಕ್ರೇಜ್ ಮುಂಬರುವ ಪೀಳಿಗೆಯಿಂದ ಪ್ರಸ್ತುತ ಪೀಳಿಗೆಯನ್ನು ಪ್ರತ್ಯೇಕಿಸುತ್ತೆ ಎಂದು ತಜ್ಞರು ಹೇಳುತ್ತಾರೆ. ತಜ್ಞರು ಸೆಲ್ಫಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಮೊದಲನೆಯದು,  ಸ್ನೇಹಿತರೊಂದಿಗೆ ತೆಗೆದುಕೊಳ್ಳುವುದು, ಎರಡನೆಯದು, ಕೆಲವು ಚಟುವಟಿಕೆ ಅಥವಾ ಘಟನೆಗಳ ಸಮಯದಲ್ಲಿ ತೆಗೆದುಕೊಳ್ಳುವುದು ಮತ್ತು ಮೂರನೆಯದನ್ನು ಫಿಸಿಕಲ್  ಲುಕ್ ಮೇಲೆ ಕೇಂದ್ರೀಕರಿಸಲಾಗಿದೆ.

48

ಸೈಕಾಲಜಿ ಆಫ್ ಪಾಪ್ಯುಲರ್ ಮೀಡಿಯಾ ಕಲ್ಚರ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಹೆಚ್ಚು ಸೆಲ್ಫಿಗಳನ್ನು ಪೋಸ್ಟ್ ಮಾಡುವ ಜನರು ತಮ್ಮ ಆತ್ಮಗೌರವಕ್ಕೆ ತುಂಬಾ ಸಂವೇದನಾಶೀಲರಾಗಿರುತ್ತಾರೆ.ಮ ಕ್ಕಳ ಡಿಜಿಟಲ್ ಇಂಟರ್ಫೇಸ್ಗಳ(Digital interphace) ಸ್ವರೂಪ ಮತ್ತು ತೀವ್ರತೆಯ ಬಗ್ಗೆ ನಾವು ಕಾಳಜಿ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ.
 

58

ಅತಿಯಾದ ಸೆಲ್ಫ್ ಕ್ರೇಜ್ ಒಬ್ಬ ವ್ಯಕ್ತಿಯು ಜೀವನದಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಕಳೆದುಕೊಳ್ಳಲು ಕಾರಣವಾಗುತ್ತೆ. ಇದು ವ್ಯಕ್ತಿಯ ಸ್ವಂತಿಕೆಯನ್ನು ತೆಗೆದುಹಾಕುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ, ಹೆಚ್ಚು ಡಿಜಿಟಲ್ ಇಂಟರ್ಫೇಸ್  ಹೊಂದಿದ್ದರೆ,  ದೈಹಿಕ ಚಟುವಟಿಕೆ(Physical activities), ಸಾಮಾಜಿಕ ತೊಡಗಿಸಿಕೊಳ್ಳುವಿಕೆ, ಶಿಕ್ಷಣ, ಕ್ರೀಡೆ ಮತ್ತು ಸೃಜನಶೀಲತೆಯಿಂದ ದೂರ ಸರಿಯುವ ಸಾಧ್ಯತೆ ಹೆಚ್ಚು.

68

ಮನೆಯೊಳಗೆ ಹೆಚ್ಚು ಮೊಬೈಲ್ ಫೋನ್ಗಳನ್ನು ಬಳಸಿದರೆ, ಅದು  ಏಕಾಗ್ರತೆ(Concentration) ಮತ್ತು  ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ .ಹಾಗಾಗಿ ಬ್ಯಾಲೆನ್ಸ್  ಜೀವನ ನಡೆಸಲು ಮತ್ತು ದೈಹಿಕ ಚಟುವಟಿಕೆಗ ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಸ್ನೇಹಿತರನ್ನು ಭೇಟಿಯಾಗಲು ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

78

ಕೋವಿಡ್ ಪ್ರಾರಂಭವಾದಾಗಿನಿಂದ ಭಾರತದಲ್ಲಿ ಮೊಬೈಲ್ ಫೋನ್(Mobile phone) ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಅದಕ್ಕೂ ಮೊದಲು, ವಿಶೇಷವಾಗಿ ಅದರ ಗ್ರಾಹಕರಲ್ಲಿ, ಪ್ರತಿ ವರ್ಷ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಮಕ್ಕಳನ್ನು ಫೋನ್ ನಿಂದ ಆದಷ್ಟು ದೂರ ಇರುವಂತೆ ಮಾಡೋದೆ ಬೆಸ್ಟ್.

88

ಮಕ್ಕಳನ್ನು ಈ ಸಮಸ್ಯೆಯಿಂದ ಹೊರಬರುವಂತೆ ಮಾಡಲು ಉತ್ತಮ ಮಾರ್ಗವೆಂದರೆ ತಮ್ಮ ಮಕ್ಕಳ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ(Electronic Gadgets) ಬಳಕೆಯನ್ನು ಸೀಮಿತಗೊಳಿಸೋದು. ಆಟ ಆಡಲು ಅಥವಾ ವೀಡಿಯೊಗಳನ್ನು ವೀಕ್ಷಿಸಲು ಮಕ್ಕಳು ಅಥವಾ ನವಜಾತ ಶಿಶುಗಳಿಗೆ ಫೋನ್ ನೀಡೋದನ್ನು ತಪ್ಪಿಸಿ. ತಡರಾತ್ರಿ ಮೊಬೈಲ್ ಫೋನ್ ಬಳಕೆಯು ನಿದ್ರಾಹೀನತೆಗೆ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಮೊಬೈಲ್ ಫೋನ್ ಉಪಯೋಗಿಸಿ 

Read more Photos on
click me!

Recommended Stories