ಮುಟ್ಟಿನ ಸಮಯದಲ್ಲಿ (periods time) ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚು ಬ್ಲೀಡಿಂಗ್ ಆಗೋದು, ಕಿಬ್ಬೊಟ್ಟೆ ನೋವು, ಸೊಂಟದಲ್ಲಿ ಬಿಗಿತದ ಜೊತೆಗೆ, ಕೆಲವು ಮಹಿಳೆಯರಿಗೆ ಕಾಲುಗಳಲ್ಲಿ ಅಸಹನೀಯ ನೋವು ಸಹ ಕಂಡು ಬರುತ್ತೆ. ವಾಸ್ತವವಾಗಿ, ಈ ನೋವು ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುತ್ತದೆ, ಇದು ಸಾಮಾನ್ಯ. ಆದರೆ ಇದು ಹೆಚ್ಚು ಯಾತನೆಯನ್ನು ನೀಡುತ್ತದೆ.
ಮುಟ್ಟಿನ ಸಮಯದಲ್ಲಿ ನೀವು ಕಾಲು ನೋವನ್ನು ಅನುಭವಿಸಿದರೆ, ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು ನೋಡಿ. ಈ ಸಲಹೆಗಳು ಶೀಘ್ರವೇ ಕಾಲು ನೋವನ್ನು ನಿವಾರಿಸಿ. ಪಿರಿಯಡ್ಸ್ ಆರಾಮದಾಯಕವಾಗಿರಲು ಸಹಾಯ ಮಾಡುತ್ತೆ. ಇದನ್ನ ನೀವು ಟ್ರೈ ಮಾಡಬಹುದು.
ಹೀಟ್ ಪ್ಯಾಡ್ ಬಳಸಿ
ಮುಟ್ಟಿನ ಸಮಯದಲ್ಲಿ ಪಾದಗಳಲ್ಲಿ ನೋವು ಅಥವಾ ಸೆಳೆತವಿದ್ದರೆ, ಪಾದಗಳ ಮೇಲೆ ಹೀಟ್ ಪ್ಯಾಡ್ ನಿಂದ ಮಸಾಜ್ ಮಾಡಿ. ಇದು ನೋವಿಗೆ ಪರಿಹಾರ ನೀಡುತ್ತದೆ. ಹೀಟ್ ಪ್ಯಾಡ್ (heat pad) ರಕ್ತ ಪರಿಚಲನೆಯನ್ನು ಸರಿಪಡಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ.
ಮಸಾಜ್ (massage)
ಮುಟ್ಟಿನ ಸಮಯದಲ್ಲಿ ಪಾದದ ನೋವಿಗೆ ಮಸಾಜ್ ಅತ್ಯುತ್ತಮ ಚಿಕಿತ್ಸೆಗಳಲ್ಲಿ ಒಂದಾಗಿದೆ. ನೀವು ಲ್ಯಾವೆಂಡರ್ ಅಥವಾ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಪಾದಗಳನ್ನು ಮಸಾಜ್ ಮಾಡುವುದರಿಂದ ಆಯಾಸ ಕಡಿಮೆಯಾಗುತ್ತದೆ ಮತ್ತು ನಿಮಗೆ ವಿಶ್ರಾಂತಿ ಸಿಗುತ್ತದೆ.
ಯೋಗ ಅಥವಾ ವ್ಯಾಯಾಮ (yoga or exercise)
ದೈಹಿಕ ವ್ಯಾಯಾಮವು ಮುಟ್ಟಿನ ಸಮಯದಲ್ಲಿ ಕಾಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ದೈಹಿಕ ಚಟುವಟಿಕೆಯನ್ನು ಮಾಡಿದಾಗ, ಮೆದುಳು ಪೆನ್ ರಿಸೆಪ್ಟರ್ ಅನ್ನು ನಿರ್ಬಂಧಿಸುವ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ವ್ಯಾಯಾಮವು ರಕ್ತನಾಳಗಳಲ್ಲಿ ಸರಿಯಾದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಇದು ನೋವು ಮತ್ತು ಸೆಳೆತವನ್ನು ನಿವಾರಿಸುತ್ತದೆ. ಮುಟ್ಟಿನ ಸಮಯದಲ್ಲಿ ಯೋಗ ಸ್ಟ್ರೆಚಿಂಗ್ ಮತ್ತು ಲಘು ವ್ಯಾಯಾಮಗಳನ್ನು ಮಾಡಿ.
ಸಮತೋಲಿತ ಆಹಾರ (balanced food)
ಮುಟ್ಟಿನ ಸಮಯದಲ್ಲಿ ಪೋಷಕಾಂಶಗಳ ಕೊರತೆ ಕಾಲುಗಳಲ್ಲಿ ನೋವು ಮತ್ತು ಸೆಳೆತಕ್ಕೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಸರಿಯಾದ ಪ್ರಮಾಣದ ಪೌಷ್ಠಿಕಾಂಶವನ್ನು ತೆಗೆದುಕೊಳ್ಳಿ. ನಿಮ್ಮ ಆಹಾರದಲ್ಲಿ ವಿಟಮಿನ್ ಡಿ, ಸತು, ಮೆಗ್ನೀಸಿಯಮ್, ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರ ಸೇವಿಸಿ.
ಹೈಡ್ರೇಟ್ ಆಗಿರಿ (hydrate)
ಮುಟ್ಟಿನ ಸಮಯದಲ್ಲಿ ಹೈಡ್ರೇಟ್ ಆಗಿ ಉಳಿಯುವುದು ಸಹ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ಉರಿಯೂತ ಮತ್ತು ನೀರಿನ ಕೊರತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ದೇಹದಲ್ಲಿ ನೀರಿನ ಕೊರತೆ ಮುಟ್ಟಿನ ಕಾಲು ನೋವಿಗೆ ಕಾರಣವಾಗಬಹುದು. ಮುಟ್ಟಿನ ಸಮಯದಲ್ಲಿ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವ ಗುರಿ ಹೊಂದಿರಿ. ಸೌತೆಕಾಯಿ, ಕಲ್ಲಂಗಡಿಯಂತಹ ಹೈಡ್ರೇಟಿಂಗ್ ಆಹಾರಗಳನ್ನು ಆಹಾರದಲ್ಲಿ ಸೇರಿಸಿ.