Food For Winter: ಚಳೀಲಿ ಇದು ತಿನ್ನಿ, ಆರೋಗ್ಯದ ಚಿಂತಿ ಬಿಟ್ಹಾಕ್ಬಿಡಿ!

First Published Nov 2, 2023, 4:04 PM IST

ಹವಾಮಾನ ಬದಲಾವಣೆಯಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು, ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಕೆಲವು ಸೂಪರ್ ಫುಡ್ಸ್ ಸೇರಿಸಿ, ಇದು ಪ್ರತಿ ಋತುವಿನಲ್ಲಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.
 

ಚಳಿಗಾಲದಲ್ಲಿ (winter season) ಜ್ವರದ ಭಯ ಇನ್ನೂ ಹೆಚ್ಚಾಗುತ್ತದೆ. ಅಂದಹಾಗೆ, ಹವಾಮಾನ ಏನೇ ಇರಲಿ, ಪ್ರತಿ ಋತುವಿನಲ್ಲಿ ಕೆಲವು ರೋಗಗಳ ಭಯವಿರುತ್ತದೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಅವಶ್ಯಕ. ರೋಗನಿರೋಧಕ ಶಕ್ತಿಯನ್ನು (immunity power) ಬಲವಾಗಿಡುವುದು ಇನ್ಫ್ಲುಯೆನ್ಸ ಮತ್ತು ಇತರ ಸೋಂಕುಗಳಿಂದ (Infection) ರಕ್ಷಿಸಲು ಸಹಾಯ ಮಾಡುತ್ತದೆ. 

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡುವ ಸೂಪರ್‌ಫುಡ್ಸ್ (Superfoods) ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಇವುಗಳು ನಿಮಗೆ ಕಾಡಬಹುದಾದ ಎಲ್ಲಾ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತೆ.
 

ಸೋಂಪು (fennel seed)
ಶೀತ ಮತ್ತು ಕೆಮ್ಮನ್ನು ನಿವಾರಿಸುವಲ್ಲಿ ಸೋಂಪು ಸೇವನೆ ತುಂಬಾ ಪರಿಣಾಮಕಾರಿ. ಇದರ ಮ್ಯಾಜಿಕಲ್ ಪವರ್ ಗಂಟಲು ನೋವನ್ನು ಕಡಿಮೆ ಮಾಡಲು ಮತ್ತು ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ, ನೀವು ಸೋಂಪು ಚಹಾ ಅಥವಾ ಸೋಂಪು ನೀರನ್ನು ಕುಡಿಯಬಹುದು.

ಅರಿಶಿನ (turmeric)
ಅರಿಶಿನ ಲಕ್ಷಾಂತರ ಗುಣ ಲಕ್ಷಣಗಳಿಂದ ತುಂಬಿರುವ ಪ್ರಾಚೀನ ಔಷಧಿ. ಇದು ಉತ್ಕರ್ಷಣ ನಿರೋಧಕಗಳು, ಉರಿಯೂತದ ಆಂಟಿವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೇರಿ ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಅರಿಶಿನ ಸೇವನೆಯು ಕೆಮ್ಮು ಮತ್ತು ಶೀತದ ಚಿಕಿತ್ಸೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ರಾತ್ರಿ ಮಲಗುವಾಗ ಅರಿಶಿನ ಹಾಲನ್ನು ಕುಡಿಯಬಹುದು.
 

ಜೇನುತುಪ್ಪ (honey)
ಜೇನುತುಪ್ಪವು ವಾಸ್ತವವಾಗಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ನೈಸರ್ಗಿಕ ಆಹಾರ ಪದಾರ್ಥ. ಇದು ವಿವಿಧ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಮತ್ತು ರೋಗಗಳನ್ನು ತಡೆಗಟ್ಟಲು ಬಳಸಬಹುದು. ಬಿಸಿ ನೀರಿನಲ್ಲಿ ಜೇನುತುಪ್ಪ ಬೆರೆಸಿ ಪ್ರತಿದಿನ ಕುಡಿಯಿರಿ.

ದಾಲ್ಚಿನ್ನಿ (Cinnamon)
ದಾಲ್ಚಿನ್ನಿ ಪ್ರಮುಖ ಸಂಯುಕ್ತ ಗುಣವನ್ನು ಹೊಂದಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಧುಮೇಹವನ್ನು (Diabetes) ನಿಯಂತ್ರಿಸಲೂ ಸಹಾಯ ಮಾಡುತ್ತದೆ. ದಾಲ್ಚಿನ್ನಿಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ. ಇದಲ್ಲದೆ, ಇದು ಸಿನ್ನಮಾಲ್ಡಿಹೈಡ್, ಯೂಜೆನಾಲ್ ಮತ್ತು ಸಿನ್ನಮಿಕ್ ಆಮ್ಲದಂತಹ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ವೈರಸ್ ತಡೆಗಟ್ಟಲು ಸಹಾಯ ಮಾಡುತ್ತದೆ.

ಲವಂಗ (clove)
ಲವಂಗವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ಇದು ಯೂಜೆನಾಲ್ ಅನ್ನು ಹೊಂದಿರುತ್ತದೆ, ಇದು ಆಂಟಿ ಇಂಫ್ಲಮೆಟರಿ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೊಂದಿದೆ, ಇದು ದೇಹವನ್ನು ಫ್ರೀ ರಾಡಿಕಲ್ಸ್‌ನಿಂದ ರಕ್ಷಿಸುತ್ತದೆ.

ವಿಶೇಷ ಸೂಚನೆ : ಈ ಎಲ್ಲಾ ಸೂಪರ್ ಫುಡ್ಸ್ ಜ್ವರ ಬಾರದಂತೆ ರಕ್ಷಿಸುವಲ್ಲಿ ಮಾತ್ರ ಸಹಾಯ ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದರೆ ಜ್ವರದ ಸಂದರ್ಭದಲ್ಲಿ ಮನೆ ಚಿಕಿತ್ಸೆ ಮಾಡುತ್ತಾ ಕೂರಬೇಡಿ. ಕೆಮ್ಮು ಅಥವಾ ಶೀತವು ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಬೇಕು.
 

click me!