ನಿಮ್ಮ ಮುಖ ಅಂದವಾಗಿ ಕಾಣಲು ಯಾವುದೇ ಕ್ರೀಂ ಬೇಡ, ಈ 5 ತರಕಾರಿಗಳನ್ನು ತಿನ್ನಿ ಸಾಕು!

Published : Nov 20, 2026, 10:15 AM IST

Five vegetable for healthy skin: ಬಿಸಿಲು, ಧೂಳು, ಮಾಲೀನ್ಯ ಹೀಗೆ ಹಲವು ಕಾರಣಗಳಿಗಾಗಿ ಮುಖದ ಚರ್ಮದ ಹೊಳಪು ಕಳೆದುಕೊಳ್ಳುತ್ತೆ. ನಿಮ್ಮ ಮುಖದ ಚರ್ಮ ಹೊಳೆಯಲು ನೀವು ಯಾವುದೇ ಕ್ರೀಂ ಬಳಸಬೇಕಿಲ್ಲ. ದಿನನಿತ್ಯದ ಊಟದಲ್ಲಿ ಈ ಐದು ತರಕಾರಿ ಇರುವಂತೆ ನೋಡಿಕೊಳ್ಳು ಸಾಕು!

PREV
17
ಮುಖದ ಹೊಳಪು ಹೆಚ್ಚಿಸುವ 5 ತರಕಾರಿಗಳು

ಬಿಸಿಲಿನಲ್ಲಿ ತಿರುಗಾಡುವುದರಿಂದ, ವಾಹನಗಳ ಹೊಗೆ, ಧೂಳು, ಮಾಲೀನ್ಯ, ಹವಾಮಾನ ಬದಲಾವಣೆ, ಆಹಾರ, ವಿಟಮಿನ್‌ಗಳ ಕೊರತೆ ಹೀಗೆ ಹಲವು ಕಾರಣಗಳಿಂದ ನಮ್ಮ ಚರ್ಮದ ಹೊಳಪು ಕಳೆದುಕೊಳ್ಳುತ್ತದೆ. ಇದರಿಂದ ಮುಖ ಕಪ್ಪಾಗುವುದು, ಟ್ಯಾನಿಂಗ್, ಮೊಡವೆ, ಆಯಿಲ್ ಸ್ಕಿನ್ ನಂತಹ ಸಮಸ್ಯೆ ಎದುರಿಸಬೇಕಾಗುತ್ತೆ. ಈ ಸಮಸ್ಯೆ ನಿವಾರಣೆಗೆ ದುಬಾರಿ ಸ್ಕಿನ್ ಕೇರ್ ಕ್ರೀಂ ಗಳು ಮಾತ್ರ ಪರಿಹಾರ ಎಂದ ಬಹುತೇಕರು ನಂಬಿದ್ದಾರೆ ಅಷ್ಟೇ ಅಲ್ಲ, ಚರ್ಮ ಗ್ಲೋ ಆಗಲು ಇದಕ್ಕಾಗಿ ಸಾಕಷ್ಟು ದುಡ್ಡು ಖರ್ಚು ಮಾಡುತ್ತಾರೆ. ಇದು ಶಾಶ್ವತ ಪರಿಹಾರವಾ? ಇಲ್ಲ. ಪರಿಹಾರ ಒಳಗಿನಿಂದಲೇ ಆಗಬೇಕು ಅಂದರೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದೇ ನಿಜವಾದ ಪರಿಹಾರವಾಗಿದೆ. ಇದರಿಂದ ಮಾತ್ರ ಚರ್ಮ ಹೊಳಪು ಪಡೆದುಕೊಳ್ಳುತ್ತದೆ ಹೊರತು ಕ್ರೀಂಗಳಿಂದ ಸಿಗುವ ಹೊಳಪು ಸಂಜೆಯವರೆಗೆ ಮಾತ್ರ! ಹಾಗಾದರೆ ನಿಮ್ಮ ತ್ವೆಚ್ ಹೊಳೆಯಬೇಕೆಂದರೆ ಏನು ಮಾಡಬೇಕು?

27
ಮುಖದ ಅಂದ ಹೆಚ್ಚಿಸುವ ಐದು ತರಕಾರಿಗಳು

ಮೊದಲೇ ಹೇಳಿದಹಾಗೆ ಕಳೆದುಕೊಂಡಿರುವ ನಿಮ್ಮ ಚರ್ಮದ ಹೊಳಪು ಪಡೆಯಬೇಕೆಂದರೆ ಕ್ರೀಂ ಹಚ್ಚುವುದರಿಂದಲ್ಲ ಬದಲಾಗಿ ದೇಹದ ಒಳಗಿನಿಂದಲೇ ಶುರುವಾಗಬೇಕು ಅಂದರೆ ನಿಮ್ಮ ಡಯಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ದಿನಿನಿತ್ಯ ಅನ್ನ ಬೇಳೆಯ ಬದಲು ಕೆಲವು ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಅವುಗಳಲ್ಲಿ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಜೀವಸತ್ವಗಳು, antioxidants ಇರುತ್ತವೆ. ಇವುಗಳನ್ನು ನೀವು ದಿನನಿತ್ಯ ನಿಯಮಿತವಾಗಿ ತಿನ್ನುತ್ತಿದ್ದರೆ ನಿಮ್ಮ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆತು ಚರ್ಮವು ಮತ್ತೆ ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ. ಹಾಗಾದರೆ ತಿನ್ನಬೇಕಾದ ತರಕಾರಿಗಳು ಯಾವವು ಎಂಬುದನ್ನು ತಿಳಿಯೋಣ

37
ಕ್ಯಾರೆಟ್

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದನ್ನ ನಿಯಮಿತವಾಗಿ ತಿನ್ನುವುದರಿಂದ ದೇಹವು ಅದನ್ನು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ವಿಟಮಿನ್ ಎ ಚರ್ಮದ ಕೋಶಗಳ ಸಾಮಾನ್ಯ ಬೆಳವಣಿಗೆ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅವಶ್ಯಕವಾಗಿದೆ. ಅದಕ್ಕಾಗಿಯೇ ದಿನನಿತ್ಯದ ಊಟದಲ್ಲಿ ಕ್ಯಾರೆಟ್ ಅನ್ನು ಸೇರಿಸುವುದು ಒಳ್ಳೆಯದು. ಸಲಾಡ್, ತರಕಾರಿ, ಸೂಪ್ ಅಥವಾ ನೇರವಾಗಿಯೇ ತಿನ್ನಬಹುದು.

47
ಆಲೂಗಡ್ಡೆ

ಆಲೂಗಡ್ಡೆ ಸೇವನೆ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಆಲೂ ಸೇವನೆಯಿಂದ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ನಂಬಿದ್ದಾರೆ. ಆದರೆ ಆಲೂಗಡ್ಡೆಯ ನಿಯಮಿತ ಸೇವನೆಯಿಂದಲೂ ಆರೋಗ್ಯಕರ ಪ್ರಯೋಜನಗಳಿವೆ. ಅದರಲ್ಲೂ ಮುಖದ ಮೇಲಿನ ಕಪ್ಪು ಕಲೆಗಳು, ಕಂದುಬಣ್ಣ ಕಡಿಮೆ ಮಾಡಲು ಆಲೂಗಡ್ಡೆ ಜನಪ್ರಿಯ ಮನೆಮದ್ದು ಎಂಬುದು ನಿಮಗೆ ಗೊತ್ತೇ? ಹೌದು. ಆಲೂಗಡ್ಡೆ ರಸವನ್ನು ಹತ್ತಿ ಉಂಡೆಯಿಂದ ಮುಖಕ್ಕೆ ಹಚ್ಚಿ ತೆಳುವಾದ ಹೋಳುಗಳನ್ನು ಕಣ್ಣುಗಳ ಸುತ್ತಲೂ ಇಡಲಾಗುತ್ತದೆ. ಕೆಲವರು ಆಲೂಗಡ್ಡೆ ರಸವನ್ನು ಅಕ್ಕಿ ಹಿಟ್ಟು ಮತ್ತು ಅಲೋವೆರಾ ಜೆಲ್ ನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಹೋಗಿ ಚರ್ಮ್ ಹೊಳೆಯುವಂತೆ ಆಗುತ್ತದೆ.

57
ಟೊಮೆಟೊ

ಇನ್ನು ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ಸಮೃದ್ದವಾಗಿವೆ. ವಿಶೇಷವಾಗಿ ಲೈಕೋಪೀನ್ ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಸೂರ್ಯನ ಬೆಳಕಿನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಲೈಕೋಪೀನ್ ತುಂಬಾ ಮುಖ್ಯ. ಇತ್ತೀಚಿನ ಸಂಶೋಧನೆ ಹೇಳಿದೆ. ಹೀಗಾಗಿ ದಿನನಿತ್ಯದ ಊಟದಲ್ಲಿ ಟೊಮೆಟೊ ಇರುವಂತೆ ನೋಡಿಕೊಳ್ಳಿ. ಟೊಮೆಟೋ ಸೂಪ್, ಸಾರು ಅಥವಾ ಸಲಾಡ್ ರೂಪದಲ್ಲಿ ತಿನ್ನಬಹುದು. ಕೆಲವರು ಟೊಮೆಟೊ ತಿರುಳನ್ನು ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ.

67
ಸೌತೆಕಾಯಿ

ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಇದನ್ನು ಸೇವಿಸುವುದರಿಂದ ದೇಹವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗ ಚರ್ಮವು ಆರೋಗ್ಯಕರವಾಗಿರುತ್ತದೆ.. ಬಿಸಿಲಿನಿಂದ ಮನೆಗೆ ಬಂದಾಗ, ತಣ್ಣನೆಯ ಸೌತೆಕಾಯಿ ಕತ್ತರಿಸಿ ಸಣ್ಣ ಸಣ್ಣ ಓಳುಗಳನ್ನಾಗಿ ಮಾಡಿ ತಿನ್ನಿ, ಊಟದಲ್ಲಿ ಒಂದು ಸೌತೆಕಾರಿ ಇರುವಂತೆ ನೋಡಿಕೊಳ್ಳಿ. ದಿನನಿತ್ಯ ನಿಯಮಿತವಾಗಿ ತಿನ್ನುವುದರಿಂದಾಗಿ ನಿಮ್ಮ ದೇಹ ತಂಪಾಗುತ್ತೆ. ಬಿಸಿಲಿನಲ್ಲಿ ಸುತ್ತಾಡಿ ಆಯಾಸವಾಗಿ ಮನೆಗೆ ಬಂದಾಗ ತಿನ್ನುವುದರಿಂದ ತಣ್ಣನೆಯ ಸೌತೆಕಾಯಿ ಚೂರುಗಳು ಕಣ್ಣುಗಳ ಸುತ್ತಲಿನ ಊತವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

77
ಬೀಟ್‌ರೂಟ್

ಬೀಟ್‌ರೂಟ್‌ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನನಿತ್ಯ ನಿಯಮಿತವಾಗಿ ತಿನ್ನುವುದರಿಂದ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಇವು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತವೆ. ಇನ್ನು ಇದನ್ನು ಆಹಾರದಲ್ಲಿ ಪಲ್ಯವೂ ಮಾಡಬಹುದು. ಸಲಾಡ್, ಜ್ಯೂಸ್ ರೂಪದಲ್ಲಿ ಸೇವಿಸಬಹುದು.

ಮುನ್ನೆಚ್ಚರಿಕೆಗಳು

ಕೇವಲ ತರಕಾರಿಗಳನ್ನು ತಿನ್ನುವುದರಿಂದ ಅಥವಾ ಫೇಸ್‌ಪ್ಯಾಕ್ ಹಚ್ಚುವುದರಿಂದ ಎಲ್ಲ ರೀತಿಯ ಚರ್ಮದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಆದರೆ ಈಟ್ ಕ್ಲೀನ್ ತಂತ್ರ ಅನುಸರಿಸುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಈ ರೀತಿ ತರಕಾರಿಯಿಂದ ಮುಖಕ್ಕೆ ಪೇಸ್ಟ್ ಹಚ್ಚುವುದು ಮೊದಲ ಬಾರಿ ಆಗಿದ್ದರೆ ಹಚ್ಚುವ ಮೊದಲು, ಪ್ಯಾಚ್ ಪರೀಕ್ಷೆಯನ್ನು ಮಾಡಲು ಮರೆಯದಿರಿ. ಅದೇ ರೀತಿ ನೀವು ಬಿಸಿಲಿನಲ್ಲಿ ಹೊರಗೆ ಹೋಗುವ ಅನಿವಾರ್ಯತೆ ಇದ್ದರೆ SPF 30 ಅಥವಾ ಅದಕ್ಕಿಂತ ಹೆಚ್ಚಿನ ಸನ್‌ಸ್ಕ್ರೀನ್ ಬಳಸಿ. ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ. ತರಕಾರಿಗಳ ಜೊತೆಗೆ, ಹಣ್ಣುಗಳು, ಬೀಜಗಳು ಮತ್ತು ಪ್ರೋಟೀನ್‌ ಭರಿತ ಆಹಾರ ಸೇವಿಸಿ ಏಕೆಂದರೆ ಇವು ನಿಮ್ಮ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories