Cow Milk vs Buffalo Milk: ಪ್ರತಿದಿನ ಹಾಲು ಕುಡಿಯುವವರಲ್ಲಿ ಹಸುವಿನ ಹಾಲು ಒಳ್ಳೆಯದಾ ಅಥವಾ ಎಮ್ಮೆ ಹಾಲು ಉತ್ತಮವಾ ಎಂಬ ಗೊಂದಲ ಇದ್ದೇ ಇರುತ್ತದೆ. ಇವೆರಡರಲ್ಲಿ ಯಾವುದರಲ್ಲಿ ಪೋಷಕಾಂಶ ಹೆಚ್ಚು, ಯಾವುದು ಬೇಗ ಜೀರ್ಣವಾಗುತ್ತೆ ಹಾಗೂ ಯಾರಿಗೆ ಯಾವ ಹಾಲು ಬೆಸ್ಟ್ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದು ಹೆಚ್ಚು ಪೌಷ್ಟಿಕ? ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಹಾಲು ಕುಡಿಯುವುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕರ ದಿನಚರಿಯ ಭಾಗವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಸುವಿನ ಹಾಲು ಮತ್ತು ಎಮ್ಮೆ ಹಾಲಿನಲ್ಲಿ ಯಾವುದು ಹೆಚ್ಚು ಪೌಷ್ಟಿಕ? ಯಾವುದು ಕುಡಿದರೆ ಹೊಟ್ಟೆಗೆ ಹಗುರವಾಗಿರುತ್ತದೆ? ಎಂಬ ಗೊಂದಲ ಬಹುತೇಕರಿಗೆ ಇರುತ್ತದೆ. ನಿಜ ಹೇಳಬೇಕೆಂದರೆ, ಎರಡೂ ಹಾಲುಗಳಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳಿವೆ. ಆದರೆ ಅವುಗಳಲ್ಲಿರುವ ಕೊಬ್ಬು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕ್ಯಾಲೋರಿ ಪ್ರಮಾಣದಲ್ಲಿ ವ್ಯತ್ಯಾಸವಿರುವುದರಿಂದ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತವೆ.
26
ಹಸುವಿನ ಹಾಲು: ಹಗುರ ಮತ್ತು ತೂಕ ನಿಯಂತ್ರಣಕ್ಕೆ ಸೂಕ್ತ
ಹಸುವಿನ ಹಾಲು: ಹಗುರ ಮತ್ತು ತೂಕ ನಿಯಂತ್ರಣಕ್ಕೆ ಸೂಕ್ತ ಎಮ್ಮೆ ಹಾಲಿಗೆ ಹೋಲಿಸಿದರೆ ಹಸುವಿನ ಹಾಲಿನಲ್ಲಿ ಕೊಬ್ಬಿನಾಂಶ ಮತ್ತು ಕ್ಯಾಲೋರಿ ಕಡಿಮೆ ಇರುತ್ತದೆ. ಹೀಗಾಗಿ ಇದು ಕುಡಿಯಲು ಹಗುರವಾಗಿರುತ್ತದೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ಪೊಟ್ಯಾಶಿಯಂನಂತಹ ಪ್ರಮುಖ ಪೋಷಕಾಂಶಗಳು ಸಿಗುತ್ತವೆ. ತೂಕ ಇಳಿಸಿಕೊಳ್ಳಲು ಅಥವಾ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವವರಿಗೆ ಹಸುವಿನ ಹಾಲು ಉತ್ತಮ ಆಯ್ಕೆಯಾಗಿದೆ.
36
ಎಮ್ಮೆ ಹಾಲು: ಕೊಬ್ಬು, ಪ್ರೋಟೀನ್ ಮತ್ತು ಶಕ್ತಿ ಹೆಚ್ಚು
ಎಮ್ಮೆ ಹಾಲು: ಕೊಬ್ಬು, ಪ್ರೋಟೀನ್ ಮತ್ತು ಶಕ್ತಿ ಹೆಚ್ಚು ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದರಿಂದ ಅದು ಗಟ್ಟಿಯಾಗಿ ಹಾಗೂ ಕ್ರೀಮಿಯಾಗಿರುತ್ತದೆ. ಹಸುವಿನ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕ್ಯಾಲೋರಿಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ. ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಪೋಷಕಾಂಶ ಬೇಕೆನ್ನುವವರು ಮಿತ ಪ್ರಮಾಣದಲ್ಲಿ ಎಮ್ಮೆ ಹಾಲು ಸೇವಿಸಬಹುದು. ಮೊಸರು, ಪನೀರ್ ಮತ್ತು ತುಪ್ಪ ತಯಾರಿಸಲು ಎಮ್ಮೆ ಹಾಲನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಯಾವ ಹಾಲು ಬೇಗ ಜೀರ್ಣವಾಗುತ್ತದೆ? ಜೀರ್ಣಕ್ರಿಯೆಯ ವಿಷಯಕ್ಕೆ ಬಂದರೆ, ಕೊಬ್ಬು ಕಡಿಮೆ ಇರುವ ಕಾರಣ ಹಸುವಿನ ಹಾಲು ಸುಲಭವಾಗಿ ಹಾಗೂ ಬೇಗ ಜೀರ್ಣವಾಗುತ್ತದೆ. ಎಮ್ಮೆ ಹಾಲಿನಲ್ಲಿ ಕೊಬ್ಬು ಮತ್ತು ಪ್ರೋಟೀನ್ ಹೆಚ್ಚಿರುವುದರಿಂದ ಜೀರ್ಣವಾಗಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಪ್ರತಿಯೊಬ್ಬರ ಜೀರ್ಣಶಕ್ತಿ ಒಂದೇ ರೀತಿ ಇರುವುದಿಲ್ಲ. ಹಾಲು ಕುಡಿದ ನಂತರ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ಅದು 'ಲ್ಯಾಕ್ಟೋಸ್ ಅಸಹಿಷ್ಣುತೆ'ಯ (Lactose Intolerance) ಲಕ್ಷಣವೂ ಆಗಿರಬಹುದು.
56
ಮಕ್ಕಳಿಗೆ ಯಾವ ಹಾಲು ಒಳ್ಳೆಯದು?
ಮಕ್ಕಳಿಗೆ ಯಾವ ಹಾಲು ಒಳ್ಳೆಯದು? ಮಕ್ಕಳಿಗೆ ಹಾಲು ನೀಡುವಾಗ ಪೋಷಕಾಂಶಗಳ ಜೊತೆಗೆ ಅವರ ವಯಸ್ಸು ಮತ್ತು ಜೀರ್ಣಶಕ್ತಿಯನ್ನೂ ಪೋಷಕರು ಗಮನಿಸಬೇಕು. ಮುಖ್ಯವಾಗಿ, ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಅಥವಾ ಎಮ್ಮೆಯ ಸಾಮಾನ್ಯ ಹಾಲನ್ನು ಪ್ರಮುಖ ಪಾನೀಯವಾಗಿ ನೀಡಬಾರದು. ಈ ವಯಸ್ಸಿನಲ್ಲಿ ತಾಯಿಯ ಹಾಲು ಅಥವಾ ವೈದ್ಯರ ಸಲಹೆಯ ಮೇರೆಗೆ ಫಾರ್ಮುಲಾ ಹಾಲನ್ನು ಮಾತ್ರ ನೀಡಬೇಕು.
66
ಯಾವುದು ಬೆಸ್ಟ್? ಸಲಹೆ ಏನು?
ಯಾವುದು ಬೆಸ್ಟ್? ತೂಕ ನಿಯಂತ್ರಿಸಬೇಕಾದವರು ಮತ್ತು ಹಗುರ ಆಹಾರ ಬಯಸುವವರು ಹಸುವಿನ ಹಾಲನ್ನು, ಹೆಚ್ಚು ಶಕ್ತಿ ಹಾಗೂ ಕ್ಯಾಲೋರಿ ಬೇಕಿರುವವರು ಮಿತವಾಗಿ ಎಮ್ಮೆ ಹಾಲನ್ನು ಆಯ್ಕೆ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಎರಡೂ ಹಾಲುಗಳು ಪೌಷ್ಟಿಕವಾಗಿದ್ದು, ಶುದ್ಧ ಮತ್ತು ಸುರಕ್ಷಿತವಾಗಿ ಸಂಸ್ಕರಿಸಿದ ಹಾಲನ್ನೇ ಸೇವಿಸಬೇಕು.
(ಗಮನಿಸಿ: ಪ್ರಾಣಿಗಳ ತಳಿ ಹಾಗೂ ಅವುಗಳ ಆಹಾರಕ್ಕೆ ಅನುಗುಣವಾಗಿ ಹಾಲಿನ ಪೋಷಕಾಂಶಗಳು ಬದಲಾಗುತ್ತವೆ. ಹಾಲಿನ ಅಲರ್ಜಿ ಅಥವಾ ಜೀರ್ಣ ಸಮಸ್ಯೆ ಇದ್ದವರು ವೈದ್ಯರ ಸಲಹೆ ಪಡೆಯುವುದು ಉತ್ತಮ).
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.