ಈ ಸಂಶೋಧನೆಯಲ್ಲಿ, ಜೀವನಪೂರ್ತಿ ಒಂದೇ ತೂಕವನ್ನು ಹೊಂದಿರುವ ಮಹಿಳೆಯರು 90, 95 ಮತ್ತು 100 ವರ್ಷ ವಯಸ್ಸಿನವರೆಗೆ ಆರೋಗ್ಯವಾಗಿರೋದು ಕಂಡು ಬಂದಿದೆ. ಸ್ಥಿರ ತೂಕ ನಿರ್ವಹಣೆ ಮಾಡುವ ಮಹಿಳೆಯ ತೂಕವು 5 ಕೆಜಿ ಕಡಿಮೆಯಾದರೆ, ಅವರನ್ನು ತೂಕ ನಷ್ಟದ ವರ್ಗದಲ್ಲಿ ಇಡಲಾಗುತ್ತದೆ, ತೂಕವು 5 ಕೆಜಿ ಹೆಚ್ಚಾದರೆ, ಅವರನ್ನು ತೂಕ ಹೆಚ್ಚಳದ ವರ್ಗದಲ್ಲಿ ಇರಿಸಲಾಗುತ್ತದೆ, ಆದರೆ ತೂಕವು 5 ಕೆಜಿಯೊಳಗೆ ಕಡಿಮೆಯಾದರೆ, ಅದನ್ನು ಸ್ಥಿರ ತೂಕದ (balanced weight) ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಈ ರೀತಿಯಾಗಿ, ಯಾರ ತೂಕವು ಒಂದೇ ಆಗಿರುತ್ತದೆಯೋ, ಅವರ ಜೀವಿತಾವಧಿಯು ದೀರ್ಘವಾಗಿರುತ್ತದೆ ಎಂದು ಸಂಶೋಧನೆ ತಿಳಿಸಿದೆ.