17 ವೈದ್ಯರು ಕಂಡುಹಿಡಿಯಲಾಗದ 3 ವರ್ಷದ ನೋವನ್ನು ಕೆಲ ಹೊತ್ತಲ್ಲೇ ಪತ್ತೆಹಚ್ಚಿದ ಚಾಟ್‌ಜಿಪಿಟಿ!

First Published | Sep 12, 2023, 5:47 PM IST

3 ವರ್ಷಗಳ ಕಾಲ 17 ವೈದ್ಯರು ಪತ್ತೆಹಚ್ಚಲಾಗದ್ದನ್ನು ಚಾಟ್‌ಜಿಪಿಟಿ ಪಟ್‌ ಅಂತ ಕೆಲ ಹೊತ್ತಲ್ಲೇ ಪತ್ತೆಹಚ್ಚಿದೆ. ಇದರಿಂದ 3 ವರ್ಷ ಕಾಲ ಪರದಾಡಿದ ತಾಯಿಯ ಮೊಗದಲ್ಲಿ ಮಂದಹಾಸ ಮೂಡಿದೆ. 

ಈಗ ಎಲ್ಲಿ ನೋಡಿದ್ರೂ ಎಐ ಅಥವಾ ಕೃತಕ ಬುದ್ಧಿಮತ್ತೆಯದ್ದೇ ಚರ್ಚೆ. ಅದ್ರಲ್ಲೂ, ಚಾಟ್‌ಜಿಪಿಟಿ ಹೆಚ್ಚು ಜನಪ್ರಿಯವಾಗಿದೆ. ಇನ್ನು, ಇದರ ಪ್ರಯೋಜನ, ಉಪಯೋಗ ಹಾಗೂ ಇದರಿಂದಾಗೋ ತೊಂದರೆಗಳ ಬಗ್ಗೆಯೂ ಸಾಕಷ್ಟು ಚರ್ಚೆ ನಡೀತಿದೆ. ಇಲ್ಲೊಂದು ಪ್ರಕರಣದಲ್ಲಿ 3 ವರ್ಷಗಳ ಕಾಲ 17 ವೈದ್ಯರು ಪತ್ತೆಹಚ್ಚಲಾಗದ್ದನ್ನು ಚಾಟ್‌ಜಿಪಿಟಿ ಪಟ್‌ ಅಂತ ಕೆಲ ಹೊತ್ತಲ್ಲೇ ಪತ್ತೆಹಚ್ಚಿದೆ. ಅಮೆರಿಕದಲ್ಲಿ ತನ್ನ ಮಗ 3 ವರ್ಷಗಳ ಕಾಲ ಅನುಭವಿಸಿದ ನೋವಿಗೆ ಕಾರಣವೇನು ಅಂತ ತಿಳಿದುಕೊಳ್ಳೋಕೆ ತಾಯಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.  

ಮಗುವಿನ ದೀರ್ಘಕಾಲದ ನೋವಿನ ರೋಗನಿರ್ಣಯ ಕಂಡುಕೊಳ್ಳೋಕೆ ಪರದಾಡಿದ ತಾಯಿ
COVID-19 ಲಾಕ್‌ಡೌನ್ ಸಮಯದಲ್ಲಿ, 4 ವರ್ಷದ ಮಗ ಅಲೆಕ್ಸ್‌ ನೋವು ಅನುಭವಿಸ್ತಿರೋದನ್ನು ಎರಡು ಮಕ್ಕಳ ತಾಯಿ ಕರ್ಟ್ನಿ ತಿಳಿದುಕೊಂಡಿದ್ದಾರೆ. ನಂತರ,  ಚಿಕ್ಕ ಹುಡುಗನ ಹೆಚ್ಚುತ್ತಿರುವ ನೋವು ಮತ್ತು ಇತರ ತೊಂದರೆಯ ಲಕ್ಷಣಗಳ ಕಾರಣ ತಿಳಿದುಕೊಳ್ಳಲು ಆಕೆ ಮೂರು ವರ್ಷಗಳ ಕಾಲ ಹುಡುಕಾಟ ನಡೆಸಿದ್ದಾರೆ.  

Tap to resize

ಹಲ್ಲುಗಳ ತೊಂದರೆ ಅಂದ್ಕೊಂಡ್ರು
ಅಲೆಕ್ಸ್‌ ಅಗಿಯಲು ಪ್ರಾರಂಭಿಸಿದ ನಂತರ ಮೋಲಾರ್‌ ಹಲ್ಲುಗಳು ಬರುತ್ತಿವೆಯೇ ಅಥವಾ ಕುಳಿ ಆಗಿದೆಯೇ ಎಂದು ಅವನ ಹೆತ್ತವರು ಆಶ್ಚರ್ಯಪಟ್ಟರು. ನಂತರ, ಅವನನ್ನು ದಂತವೈದ್ಯರ ಬಳಿಗೆ ಕರೆದೊಯ್ದರು. 

ಆದರೆ, ದಂತವೈದ್ಯರಿಗೆ ಗೊತ್ತಾಗದೆ ವಾಯುಮಾರ್ಗದ ಅಡಚಣೆಯಲ್ಲಿ ಪರಿಣತಿ ಹೊಂದಿರುವ ಆರ್ಥೊಡಾಂಟಿಸ್ಟ್ ಸಹಾಯ ಮಾಡಬಹುದು ಎಂದು ಹೇಳಿದರು. ಆರ್ಥೊಡಾಂಟಿಸ್ಟ್ ಅಲೆಕ್ಸ್‌ನ ಅಂಗುಳವು ಅವನ ಬಾಯಿ ಮತ್ತು ಹಲ್ಲುಗಳಿಗೆ ತುಂಬಾ ಚಿಕ್ಕದಾಗಿದೆ ಎಂದು ಹೇಳಿದ್ದು, ಇದರಿಂದ ಅವನಿಗೆ ರಾತ್ರಿಯಲ್ಲಿ ಉಸಿರಾಡಲು ಕಷ್ಟವಾಗುತ್ತದೆ ಎಂದರು. ಹಾಗೂ, ಅಲೆಕ್ಸ್‌ನ ಅಂಗುಳಿನಲ್ಲಿ ಎಕ್ಸ್‌ಪಾಂಡರ್ ಅನ್ನು ಮಹಿಳಾ ವೈದ್ಯರು ಇರಿಸಿದ ನಂತರ ವಿಷಯಗಳು ಸುಧಾರಿಸುತ್ತಿರುವಂತೆ ತೋರುತ್ತಿತ್ತು.

ನಿಧಾನ ಬೆಳವಣಿಗೆ ಮತ್ತು ಅಸಮತೋಲನ
ಆದರೆ, ಅಲೆಕ್ಸ್ ಬೆಳವಣಿಗೆ ನಿಲ್ಲಿಸಿರುವುದನ್ನು ತಾಯಿ ಗಮನಿಸಿದರು. ನಂತರ ಅವರು ಮಕ್ಕಳ ವೈದ್ಯರನ್ನು ಭೇಟಿ ಮಾಡಿದರು. ಬಳಿಕ ಅವರು ದೈಹಿಕ ಚಿಕಿತ್ಸೆಗೆ ಸೂಚಿಸಿದರು. ಹಾಗೂ, ಬಾಲಕ ತನ್ನ ಎಡ ಮತ್ತು ಬಲ ಬದಿಗಳ ನಡುವೆ ಕೆಲವು ಅಸಮತೋಲನವನ್ನು ಹೊಂದಿರುವಂತೆ ತೋರುತ್ತಿದೆ ಎಂದು ಹೇಳಿದರು.

ಆದರೆ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು, ಅಲೆಕ್ಸ್ ತೀವ್ರತರವಾದ ತಲೆನೋವುಗ ಅನುಭವಿಸುತ್ತಿದ್ದು, ಆ ನೋವು ಹೆಚ್ಚಾಗಿತ್ತು. ಬಳಿಕ ತಾಯಿ ಬಾಲಕನನ್ನು ನ್ಯೂರಾಲಜಿಸ್ಟ್‌ ಬಳಿಕ ಕರೆದುಕೊಂಡು ಹೋದರು.  ಅವರು ಅಲೆಕ್ಕ್ಸ್‌ಗೆ ಮೈಗ್ರೇನ್ ಇದೆ ಎಂದರು. ಇನ್ನು, ಸೈನಸ್ ಕ್ಯಾವಿಟೀಸ್ ಅಥವಾ ಶ್ವಾಸನಾಳದ ಕಾರಣದಿಂದ ನಿದ್ರೆಯ ಸಮಸ್ಯೆ ಇದೆಯೇ ಎಂದು ಪರಿಶೀಲಿಸಲು ಕಿವಿ, ಮೂಗು ಮತ್ತು ಗಂಟಲಿನ ವೈದ್ಯರ ಬಳಿಗೂ ಕರೆದೊಯ್ಯಲಾಯಿತು. ಒಟ್ಟಾರೆಯಾಗಿ, ಅವರು ಮೂರು ವರ್ಷಗಳಲ್ಲಿ 17 ವಿವಿಧ ವೈದ್ಯರನ್ನು ಭೇಟಿ ಮಾಡಿದರೂ ಅವನ ರೋಗಲಕ್ಷಣಗಳನ್ನು ವಿವರಿಸುವ ಸ್ಪಷ್ಟ ರೋಗನಿರ್ಣಯ ಸಿಕ್ಕಿರಲಿಲ್ಲ.

ಚಾಟ್‌ಜಿಪಿಟಿಯಿಂದ ಬಚಾವ್‌
ಸುಸ್ತಾದ ಮತ್ತು ನಿರಾಶೆಗೊಂಡ ತಾಯಿ ಕರ್ಟ್ನಿ ಚಾಟ್‌ಜಿಪಿಟಿಯಲ್ಲಿ ತನ್ನ ಮಗನ ವೈದ್ಯಕೀಯ ಮಾಹಿತಿಯನ್ನು ನಮೂದಿಸುವ ಮೂಲಕ ರೋಗನಿರ್ಣಯವನ್ನು ಪತ್ತೆಹಚ್ಚಲು AI ಉಪಕರಣವನ್ನು ಬಳಸಿದರು. ಅಂತಿಮವಾಗಿ ಟೆಥರ್ಡ್ ಕಾರ್ಡ್ ಸಿಂಡ್ರೋಮ್ ಎಂದು ಕಂಡುಕೊಂಡರು. ನಂತರ, ಬೇರೆ ನರಶಸ್ತ್ರಚಿಕಿತ್ಸರನ್ನುಭೇಟಿ ಮಾಡಿ ಅಲೆಕ್ಸ್‌ಗೆ ಟೆಥರ್ಡ್ ಸಿಂಡ್ರೋಮ್ ಇರಬಹುದು ಎಂದು ಅವರು ವೈದ್ಯರಿಗೆ ತಿಳಿಸಿದರು. ವೈದ್ಯರು MRI ಸ್ಕ್ಯಾನಿಂಗ್ ಮಾಡಿದ ಬಳಿಕ ಬಾಲಕನ ತಾಯಿಯ ರೋಗನಿರ್ಣಯವು ಸರಿಯಾಗಿದೆ ಎಂದು ದೃಢಪಡಿಸಿದರು.

ಬಳಿಕ, ಅಲೆಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾನೆ ಮತ್ತು ಅವನ ತಾಯಿಯ ಮುಖದಲ್ಲಿ ಸಂತೋಷವನ್ನು ನೋಡಬಹುದಾಗಿದೆ. 

Latest Videos

click me!