ಕೀಲು ನೋವಿದ್ದರೆ ಏನೇನೋ ಔಷಧಿ ಮಾಡೋ ಮುನ್ನ ಈ ಮನೆ ಮದ್ದು ಟ್ರೈ ಮಾಡಿ

First Published | Oct 7, 2022, 3:51 PM IST

ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಸಣ್ಣ ಕೆಲಸಗಳು ನಮಗೆ ಆರೋಗ್ಯದ ನಿಧಿಯಾಗಬಹುದು. ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ನಾವು ತುಂಬಾ ಕಷ್ಟ ಪಡುತ್ತೇವೆ, ಆದರೆ ಲೈಫ್ ಸ್ಟೈಲ್ ಎಷ್ಟು ಬದಲಾಗಿದೆಯೆಂದರೆ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದರೆ ಔಷಧಗಳ ಬದಲು ಸಣ್ಣ ಉಪಾಯಗಳ ಸಹಾಯದಿಂದ, ಈ ಸಮಸ್ಯೆಗಳನ್ನು ನಿವಾರಿಸಬಹುದು, ಅವುಗಳಲ್ಲಿ ಒಂದು ಪ್ರತಿದಿನ ಒಂದು ಲೋಟ ಹಾಲನ್ನು ಕುಡಿಯೋದು.

ಪ್ರತಿದಿನ ಒಂದು ಲೋಟ ಹಾಲು(Milk) ಕುಡಿಯೋದು ಒಳ್ಳೇದು ಎಂದು ಹಿರಿಯರು ಯಾವಾಗಲು ಹೇಳುತ್ತಾರೆ. ಇದಲ್ಲದೆ, ನೀವು ಅರಿಶಿನದೊಂದಿಗೆ ಹಾಲಿನ ಕಾಂಬಿನೇಶನ್ ಸಹ ಕುಡಿದಿರಬಹುದು, ಆದರೆ ತುಪ್ಪದೊಂದಿಗೆ ಹಾಲು ಕುಡಿಯೋದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇಲ್ಲಿದೆ ಕೇಳಿ ಹೆಚ್ಚಿನ ಮಾಹಿತಿ. 

ಹಾಲಿನೊಂದಿಗೆ ಬೆರೆಸಿದ ತುಪ್ಪವನ್ನು ಕುಡಿಯುವ ಪ್ರಯೋಜನಗಳು

ಜೀರ್ಣಕ್ರಿಯೆ(Digestion) ಸುಧಾರಿಸುತ್ತೆ 
ಹಾಲಿನಲ್ಲಿ ಒಂದು ಟೀಸ್ಪೂನ್ ದೇಸಿ ತುಪ್ಪ ಬೆರೆಸಿ ಕುಡಿಯೋದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡೋದಿಲ್ಲ. ಇದು ತೂಕ (Weight) ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತೆ. ನಿಮಗೆ ಮಲಬದ್ಧತೆಯ (Constipation) ಸಮಸ್ಯೆಯಿದ್ದರೆ, ಹಸುವಿನ ಹಾಲಿನೊಂದಿಗೆ ತುಪ್ಪ ಸೇರಿಸಿ ಕುಡಿಯಿರಿ.
 

Tap to resize

ಕೀಲು ನೋವಿನಲ್ಲಿ (Pain) ಪರಿಹಾರ

ಕೀಲುಗಳಲ್ಲಿ ನೋವಿದ್ದರೆ, ಹಾಲಿನಲ್ಲಿ ದೇಸಿ ತುಪ್ಪ ಬೆರೆಸಿ ಕುಡಿಯಿರಿ. ತುಪ್ಪವು ಕೀಲುಗಳ ನಯಗೊಳಿಸುವಿಕೆಯನ್ನು ಹೆಚ್ಚಿಸುತ್ತೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತೆ. ಇದು ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತೆ. ಇದು ಪಾದಗಳ ಬಿಗಿತವನ್ನು ಸಹ ತೆಗೆದುಹಾಕುತ್ತೆ.

ಇಮ್ಮ್ಯೂನಿಟಿ ಬೂಸ್ಟರ್ ಮತ್ತು ಅಸಿಡಿಟಿಯನ್ನು(Acidity) ತೆಗೆದುಹಾಕುತ್ತೆ

ಹಾಲಿನಲ್ಲಿ ದೇಸಿ ತುಪ್ಪ ಬೆರೆಸಿ ಕುಡಿಯೋದರಿಂದ ಹುಣ್ಣು ಮತ್ತು ಅಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತೆ. ಜೊತೆಗೆ, ಕಿರಿಕಿರಿಯ ಸಮಸ್ಯೆಯೂ ಇದರಿಂದ ಉಂಟಾಗೋದಿಲ್ಲ. ಇದಲ್ಲದೆ, ರೋಗ ನಿರೋಧಕ ಶಕ್ತಿಯನ್ನು (Immunity) ಸಹ ಹೆಚ್ಚಿಸುತ್ತೆ. ತುಪ್ಪ ಕರುಳುಗಳಿಗೆ ಪ್ರಯೋಜನಕಾರಿ ಮತ್ತು ಹಾಲಿನೊಂದಿಗೆ ಅದರ ಕಾಂಬಿನೇಶನ್ ಆರೋಗ್ಯಕ್ಕೆ ಒಳ್ಳೆಯದು.
 

ಬಲ(Strength) ಹೆಚ್ಚಾಗುತ್ತೆ

ಹಾಲಿನೊಂದಿಗೆ ದೇಸಿ ತುಪ್ಪ ಬೆರೆಸಿ ಕುಡಿಯೋದರಿಂದ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತೆ. ಇದರಿಂದ ನೀವು ದೀರ್ಘಕಾಲದವರೆಗೆ ಕೆಲಸ ಮಾಡಲು ಸಾಧ್ಯವಾಗುತ್ತೆ. ಸ್ನಾಯುಗಳು ಸಹ ಬಲಗೊಳ್ಳುತ್ತವೆ. ಹಾಲು ಕುಡಿಯುವ ಮೂಲಕ, ಮೂಳೆ ಮತ್ತು ಹಲ್ಲುಗಳು ಸಹ ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಉಳಿಯುತ್ತೆ. 

ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕೆ (Skin)

ಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ, ಚರ್ಮಕ್ಕೆ ಸಾಕಷ್ಟು ಹಾನಿಯಾಗುತ್ತೆ. ಇದು ಶುಷ್ಕತೆ ಮತ್ತು ಹೊಳಪನ್ನು ತೆಗೆದುಹಾಕುತ್ತೆ. ಇದನ್ನು ತಪ್ಪಿಸಲು, ತುಪ್ಪ ಬೆರೆಸಿದ ಹಾಲು ಕುಡಿಯೋದರಿಂದ ಪ್ರಯೋಜನ ಪಡೆಯಬಹುದು. ಬೇಕಾದರೆ ನೀವೂ ಕೂಡ ಟ್ರೈ ಮಾಡಿ ನೋಡಿ.

ಹಾಲಿನೊಂದಿಗೆ ಬೆರೆಸಿದ ಒಂದು ಟೀಸ್ಪೂನ್ ದೇಸಿ ತುಪ್ಪವನ್ನು(Ghee) ಕುಡಿಯೋದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಸಿಗುತ್ತವೆ. ಅದರ ಪ್ರಯೋಜನಗಳನ್ನು ಪಡೆಯಲು ನೀವು ಹಾಲಿನೊಂದಿಗೆ ಬೆರೆಸಿದ ದೇಸಿ ತುಪ್ಪವನ್ನು ಇಂದಿನಿಂದಲೇ ಕುಡಿಯಲು ಪ್ರಾರಂಭಿಸಿ. ಉತ್ತಮ ಆರೋಗ್ಯದ ಜೊತೆಗೆ, ಉತ್ತಮ ತ್ವಚೆಯನ್ನು ಸಹ ನೀವು ಪಡೆಯಬಹುದು.

Latest Videos

click me!