ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್, ಅಷ್ಟಕ್ಕೂ ಈ ಅನಾರೋಗ್ಯಕ್ಕೇನು ಕಾರಣ?

Published : Oct 05, 2022, 05:21 PM IST

ಹೆಚ್ಚಿನ ಪೋಷಕರು ತಮ್ಮ ಮಗು ತುಂಬಾ ವೀಕ್ ಆಗಿದೆ ಎಂದು ದೂರುತ್ತಾರೆ. ಮಕ್ಕಳಲ್ಲಿನ ದೌರ್ಬಲ್ಯದ ನಿಜವಾದ ಕಾರಣ ಪೋಷಕರಿಗೆ ಸರಿಯಾಗಿ ತಿಳಿದಿಲ್ಲ. ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್ ಸಮಸ್ಯೆ ಇದಕ್ಕೆ ಒಂದು ಮುಖ್ಯ ಕಾರಣವಾಗಿರಬಹುದು. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಏನಿದು ಈಟಿಂಗ್ ಡಿಸಾರ್ಡರ್ ಇದರಿಂದ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತೆ, ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದರ ಬಗ್ಗೆ ತಿಳಿಯೋಣ. 

PREV
17
ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್, ಅಷ್ಟಕ್ಕೂ ಈ ಅನಾರೋಗ್ಯಕ್ಕೇನು ಕಾರಣ?

ಈಟಿಂಗ್ ಡಿಸಾರ್ಡರ್ (Eating disorder) ಯಾವುದೇ ವಯಸ್ಸಿನ ಮಕ್ಕಳಿಗೆ ಸಂಭವಿಸಬಹುದಾದ ಒಂದು ಸಮಸ್ಯೆ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯ. ಮಗುವಿನ ವಯಸ್ಸಿಗೆ ತಕ್ಕಂತೆ, ಅವನ ಉತ್ತಮ ಬೆಳವಣಿಗೆಗೆ ಉತ್ತಮ ಆಹಾರ ಅತ್ಯಂತ ಮುಖ್ಯ. ಆಹಾರದಲ್ಲಿ ಪೋಷಕಾಂಶಗಳನ್ನು ಸೇರಿಸೋದು ಸಹ ಮುಖ್ಯ. ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್‌ಗೆ ಕಾರಣವೇನೆಂದು ಎಲ್ಲಾ ಪೋಷಕರು ತಿಳಿದುಕೊಳ್ಳೋದು ಬಹಳ ಮುಖ್ಯ.

27
ಈಟಿಂಗ್ ಡಿಸಾರ್ಡರ್ಗೆ ಕಾರಣ ಹೀಗಿದೆ

ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್ಗೆ ಕಾರಣವೇನು ಎಂಬುದರ ಬಗ್ಗೆ ಹೇಳೋದು ಸ್ವಲ್ಪ ಕಷ್ಟ. ಆದರೆ ಈ ಕಾರಣದಿಂದಾಗಿ, ಅವರ ಮಾನಸಿಕ ಆರೋಗ್ಯ (Mental health) ಮತ್ತು ಲುಕ್ಸ್ ಬಗ್ಗೆ ಕಾಳಜಿಯನ್ನು ಕಾಣಬಹುದು. ಈಟಿಂಗ್ ಡಿಸಾರ್ಡರ್ ನಿಂದ ಏನೆಲ್ಲಾ ಸಮಸ್ಯೆ ಉಂಟಾಗಬಹುದು ಅನ್ನೋದರ ಬಗ್ಗೆ ತಿಳಿಯೋಣ.
 

37

ಮಕ್ಕಳಲ್ಲಿ ಈಟಿಂಗ್ ಡಿಸಾರ್ಡರ್ ಗೆ ಆತಂಕ ಮತ್ತು ಖಿನ್ನತೆ ಸಹ ಕಾರಣವಾಗಬಹುದು. ಆಂತರಿಕ ಅನಾರೋಗ್ಯ (Disease), ರುಚಿಯಲ್ಲಿನ ಸಮಸ್ಯೆ ಅಥವಾ ಆಹಾರ ತಿನ್ನಬೇಕೆಂಬ ಭಾವನೆ ಮೂಡದೇ ಇರೋದು ಕಾರಣವಾಗಬಹುದು. ಈ ಸಮಸ್ಯೆಯ ಲಕ್ಷಣಗಳು ಸಹ ಹಲವಿದೆ, ಅವುಗಳ ಬಗ್ಗೆ ತಿಳಿಯೋಣ. 

47
ರೋಗಲಕ್ಷಣಗಳು ಯಾವುವು?

- ತನ್ನ ಬಗ್ಗೆ ತಾನೇ ಕೆಟ್ಟದಾಗಿ ಭಾವಿಸೋದು.
- ಅತಿಯಾದ ತೂಕದ ಭಯ.
- ಆತ್ಮವಿಶ್ವಾಸದ ಕೊರತೆ 
- ಇತರರಿಗೆ ಹೋಲಿಸಿದರೆ ತನ್ನನ್ನು ತಾನೇ ಕಡಿಮೆ ಅಂದಾಜು ಮಾಡೋದು.
- ಖಿನ್ನತೆ(Depression)
ಇವೆಲ್ಲವೂ ಈಟಿಂಗ್ ಡಿಸಾರ್ಡರ್ ನ ಕೆಲವು ಪ್ರಮುಖ ಲಕ್ಷಣಗಳಾಗಿವೆ. 

57
ಈಟಿಂಗ್ ಡಿಸಾರ್ಡರ್ ತಡೆಗಟ್ಟುವುದು ಹೇಗೆ?

ಪೋಷಕರು(Parents) ತಮ್ಮ ಮಗು ಈಟಿಂಗ್ ಡಿಸಾರ್ಡರ್ನಂತಹ ಸಮಸ್ಯೆಯಿಂದ ಬಲಳೋದು ಬೇಡವೆಂದು ಬಯಸಿದ್ರೆ ಅವರೊಂದಿಗೆ ಮಾತನಾಡಿ. ಈಟಿಂಗ್ ಡಿಸಾರ್ಡರರಿಂದ  ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಮಕ್ಕಳಿಗೆ ಮುಕ್ತವಾಗಿ ವಿವರಿಸಿ.

67

ಸಾಧ್ಯವಾದಷ್ಟು ದೇಹದ ಚಿತ್ರಣ, ಬಣ್ಣ ಮತ್ತು ನಕಾರಾತ್ಮಕ(Negativity) ವಿಷಯಗಳಿಂದ ಮಕ್ಕಳನ್ನು ದೂರವಿಡಿ. ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ಆಹಾರ ಮತ್ತು ಪೋಷಣೆಯ ಅಗತ್ಯದ ಬಗ್ಗೆ ಪೋಷಕರು ಮಕ್ಕಳಿಗೆ ಹೇಳಿದರೆ, ಆಗ ಮಗು ಈಟಿಂಗ್ ಡಿಸಾರ್ಡರ್ ಸಮಸ್ಯೆಗೆ ಬಲಿಯಾಗೋದು ತಪ್ಪುತ್ತದೆ. 

77

ಮಗು ಅಥವಾ ಹದಿಹರೆಯದವರು ಈಟಿಂಗ್ ಡಿಸಾರ್ಡರ್ ಹೊಂದಿದ್ದರೂ, ಅವರ ರೋಗಲಕ್ಷಣಗಳನ್ನು ಗುರುತಿಸಿ ನುರಿತ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ನೀಡಬಹುದು. ಹಾಗೆ ಮಾಡೋದ್ರಿಂದ ಮಕ್ಕಳ ಬೆಳವಣಿಗೆಗೆ(Child development) ಹಾನಿಯುಂಟಾಗೋದಿಲ್ಲ. ಅವರು ಮಾನಸಿಕವಾಗಿ, ದೈಹಿಕವಾಗಿಯೂ ಆರೋಗ್ಯದಿಂದ ಬೆಳೆಯುತ್ತಾರೆ. 

Read more Photos on
click me!

Recommended Stories