ಚಿಕ್ಕ ಶುಂಠಿ ಬರೀ ಮಸಾಲೆಯಲ್ಲ ಔಷಧಿಗಳ ಗಣಿ, ಒಂದು ತಿಂಗಳು ಪ್ರತಿ ದಿನ ತಿಂದ್ರೆ ಏನಾಗುತ್ತೆ ಗೊತ್ತಾ?

Published : Dec 26, 2025, 03:34 PM IST

ginger health benefits : ಅಡುಗೆ ಮನೆಯಲ್ಲಿ ಶುಂಠಿ ಇದ್ದೇ ಇರುತ್ತೆ. ಆದ್ರೆ ಅದನ್ನು ಪ್ರತಿ ದಿನ ಬಳಸುವವರ ಸಂಖ್ಯೆ ಕಡಿಮೆ ಇದೆ. ನೀವು ಒಂದು ತಿಂಗಳ ಪ್ರತಿ ದಿನ ಶುಂಠಿ ತಿಂದ್ರೆ ಏನಾಗುತ್ತೆ ಗೊತ್ತಾ?

PREV
111
ಔಷಧಿಗಳ ನಿಧಿ ಶುಂಠಿ

ಆಯುರ್ವೇದದಲ್ಲಿ ಶುಂಠಿಯನ್ನು ಉತ್ತಮ ಔಷಧ ಎಂದು ನಂಬಲಾಗಿದೆ. ಶುಂಠಿ ಕೇವಲ ಮಸಾಲೆ ಪದಾರ್ಥವಲ್ಲ. ಔಷಧಿಗಳ ನಿಧಿಯಾಗಿದೆ. ಪ್ರತಿದಿನ ಒಂದು ಸಣ್ಣ ತುಂಡು ಶುಂಠಿ ತಿಂತಾ ಬಂದ್ರೆ ಅದು ಆರೋಗ್ಯ ವೃದ್ಧಿಸುತ್ತದೆ. ಶುಂಠಿಯು ಜಿಂಜರಾಲ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

211
ಒಂದು ತಿಂಗಳು ಪ್ರತಿ ದಿನ ಶುಂಠಿ ತಿಂದ್ರೆ ಏನಾಗುತ್ತೆ?

ಶುಂಠಿಯನ್ನು ಅನೇಕರು ಮಸಾಲೆ ಎಂದೇ ನಂಬ್ತಾರೆ. ಅದನ್ನು ಅಡುಗೆಗೆ ಬಳಸೋದು ಬಿಟ್ರೆ ಅದನ್ನು ಹಾಗೆ ತಿನ್ನುವವರ ಸಂಖ್ಯೆ ಬಹಳ ಕಡಿಮೆ. ನೀವು ಪ್ರತಿ ದಿನ ಶುಂಠಿಯ ಸಣ್ಣ ಫೀಸ್ ತಿಂತಾ ಬಂದ್ರೆ ಅದ್ರಿಂದ ಸಾಕಷ್ಟು ಪ್ರಯೋಜನವಿದೆ.

311
ಜೀರ್ಣಾಂಗ ವ್ಯವಸ್ಥೆಗೆ ಬಲ

ಶುಂಠಿ ಸೇವನೆಯು ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕಾಪಾಡಲು ಪ್ರಯೋಜನಕಾರಿ. ಹೊಟ್ಟೆಯ ಎಲ್ಲ ಸಮಸ್ಯೆಗೆ ಈ ಶುಂಠಿಯೇ ಮದ್ದು.

411
ಉರಿಯೂತ ಮತ್ತು ನೋವಿಗೆ ಪರಿಹಾರ

ಶುಂಠಿಯು ದೇಹದಲ್ಲಿ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉರಿಯೂತದ ಗುಣಗಳನ್ನು ಹೊಂದಿದೆ. ಕೀಲು ನೋವು, ಸ್ನಾಯು ಸೆಳೆತ ಮತ್ತು ಸಂಧಿವಾತದ ಲಕ್ಷಣಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ.

511
ರೋಗನಿರೋಧಕ ಶಕ್ತಿ

ಪ್ರತಿದಿನ ಒಂದು ತುಂಡು ಶುಂಠಿ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

611
ತೂಕ ಇಳಿಕೆ

ಶುಂಠಿ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ದೇಹದಲ್ಲಿ ಕೊಬ್ಬನ್ನು ಸುಡುತ್ತದೆ. ಇದು ತೂಕ ನಷ್ಟಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ನಂಬಲಾಗಿದೆ.

711
ಶೀತ ಮತ್ತು ಕೆಮ್ಮುಗೆ ಔಷಧಿ

ಶುಂಠಿ ಗಂಟಲು ನೋವು, ಶೀತ ಮತ್ತು ಕೆಮ್ಮಿಗೆ ಪರಿಹಾರವಾಗಿದೆ. ಇದು ಕಫವನ್ನು ತೆಳುಗೊಳಿಸುತ್ತದೆ. ಲೋಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ.

811
ರಕ್ತ ಪರಿಚಲನೆ ಸುಧಾರಣೆ

ಶುಂಠಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

911
ಚರ್ಮ ಮತ್ತು ಕೂದಲಿಗೆ ಪ್ರಯೋಜನ

ಶುಂಠಿ ಚರ್ಮವನ್ನು ಹೊಳಪುಗೊಳಿಸುತ್ತದೆ. ಕೂದಲನ್ನು ಬಲಪಡಿಸುತ್ತದೆ. ಇದರ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

1011
ಶುಂಠಿ ಸೇವನೆ ಹೇಗೆ ?

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಜಾ ಶುಂಠಿಯ ಸಣ್ಣ ತುಂಡನ್ನು ಅಗೆದು ತಿನ್ನುವುದು ಉತ್ತಮ. ಶುಂಠಿ ತಿಂದ ಮೇಲೆ ನೀರು ಕುಡಿಯಬಹುದು. ಇದು ಕಷ್ಟ ಎನ್ನುವವರು ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಜೇನುತುಪ್ಪದೊಂದಿಗೆ ಶುಂಠಿಯನ್ನು ಬೆರೆಸಿ ತಿನ್ನುವುದರಿಂದ ಅದರ ರುಚಿ ಮತ್ತು ಪ್ರಯೋಜನಗಳು ಡಬಲ್ ಆಗುತ್ತವೆ.

1111
ಎಚ್ಚರಿಕೆ

ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಪ್ರತಿದಿನ ಸೇವಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ತುಂಬಾ ದೊಡ್ಡ ತುಂಡನ್ನು ಪ್ರತಿ ದಿನ ತಿಂತಾ ಬಂದ್ರೆ ತೊಂದ್ರೆ ಆಗ್ಬಹುದು. ಇದು ಬಾಯಿ ಉರಿ, ಆಮ್ಲ ಹಿಮ್ಮುಖ ಹರಿವು ಮತ್ತು ಎದೆಯುರಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಶುಂಠಿಯು ರಕ್ತ ತೆಳುಗೊಳಿಸುವ ಗುಣಗಳನ್ನು ಹೊಂದಿದೆ. ಆದ್ದರಿಂದ, ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಜನರು ಅಥವಾ ಆಮ್ಲ ಹಿಮ್ಮುಖ ಹರಿವು, ಜಠರದುರಿತ ಅಥವಾ ಹುಣ್ಣುಗಳಂತಹ ಸಮಸ್ಯೆ ಹೊಂದಿರುವವರು ಶುಂಠಿ ತಿನ್ನುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories