ಸೀಸನಲ್ ರೋಗಗಳನ್ನು ದೂರ ಮಾಡಲು ಸೇವಿಸಿ ಬೇವಿನ ಚಹಾ

Published : Jul 25, 2022, 05:17 PM IST

ಭಾರತದಲ್ಲಿ, ಬೇವು ಶತಮಾನಗಳಿಂದ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಭಾಗವಾಗಿದೆ. ಇದು ಆಂಟಿಸೆಪ್ಟಿಕ್ ಮತ್ತು ಆಂಟಿ-ವೈರಲ್ ಗುಣ ಲಕ್ಷಣಗಳಿಂದ ಸಮೃದ್ಧವಾಗಿವೆ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ರಕ್ತದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. 

PREV
17
ಸೀಸನಲ್ ರೋಗಗಳನ್ನು ದೂರ ಮಾಡಲು ಸೇವಿಸಿ ಬೇವಿನ ಚಹಾ

ಮಾನ್ಸೂನ್ ಸೀಸನ್ ಸಹಜವಾಗಿ ಆಹ್ಲಾದಕರವಾಗಿರುತ್ತದೆ. ಅದರ ಜೊತೆ ಜೊತೆಗೆ ಅನೇಕ ರೋಗಗಳನ್ನೂ ತರುತ್ತದೆ. ಈ ಸೀಸನ್‌ನಲ್ಲಿ ಶೀತ,  ಜ್ವರ(Fever), ಕರುಳಿನ ಸೋಂಕಿನಂತಹ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸೀಸನಲ್ ಫ್ರುಟ್ಸ್ ಮತ್ತು ತರಕಾರಿ ಸೇವಿಸುವುದು ಅಗತ್ಯ. ಆದಾಗ್ಯೂ, ಕೆಲವು ಮನೆಮದ್ದು ಮೂಲಕ ನೀವು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಬಹುದು. ಈ ಸೀಸನ್‌ನಲ್ಲಿ ನೀವು ಬೇವಿನ ಎಲೆಗಳನ್ನು ಸಹ ಬಳಸಬಹುದು.

27

ಭಾರತದಲ್ಲಿ, ಬೇವು ಶತಮಾನಗಳಿಂದ ಸಾಂಪ್ರದಾಯಿಕ ವೈದ್ಯ ಪದ್ಧತಿ ಭಾಗ. ಇದು ಆಂಟಿಸೆಪ್ಟಿಕ್ (Antiseptic )ಮತ್ತು ಆಂಟಿ-ವೈರಲ್ ಗುಣಲಕ್ಷಣಗಳಿಂದ ತುಂಬಿವೆ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ರಕ್ತದಿಂದ ವಿಷ ಹೊರಹಾಕಲು ಸಹಾಯ ಮಾಡುತ್ತದೆ. ಈ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರು ನೀಮ್ ಟೀ ಬಗ್ಗೆ ಮಾಹಿತಿ ನೀಡಿದ್ದಾರೆ, ಇದು ಮಳೆಗಾಲದಲ್ಲಿ ಅನೇಕ ಸೀಸನಲ್ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

37
ರೋಗ ನಿರೋಧಕ ಶಕ್ತಿಯನ್ನು(Immunity power) ಹೆಚ್ಚಿಸಲು ಸಹಾಯ ಮಾಡುತ್ತದೆ

ಬೇವಿನ ಎಲೆಗಳು ಆಂಟಿ ಆಕ್ಸಿಡೆಂಟ್, ಆಂಟಿ ಇಂಪ್ಲಿಮೆಟರಿ, ಆಂಟಿ-ವೈರಲ್ ಮತ್ತು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿವೆ. ಈ ಅಂಶಗಳು ದೇಹದಲ್ಲಿ ಫ್ರೀ ರಾಡಿಕಲ್ ಹಾನಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

47
ಕರುಳಿನ ಆರೋಗ್ಯವನ್ನು ಸುಧಾರಿಸುತ್ತೆ

ಬೇವು ನಾರಿನ ಸಮೃದ್ಧ ಮೂಲ. ಬೇವಿನ ನಿಯಮಿತ ಸೇವನೆಯು ಜೀರ್ಣಕ್ರಿಯೆ (Digestion) ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕರುಳನ್ನು ಮತ್ತಷ್ಟು ಶುದ್ಧೀಕರಿಸುತ್ತದೆ ಮತ್ತು ಕರುಳುಗಳಲ್ಲಿನ ಹೆಚ್ಚುವರಿ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.

57
ಬೇವಿನ ಚಹಾದ ಪ್ರಯೋಜನಗಳು

ಬೇವಿನ ಚಹಾವು ಉತ್ತಮ ಪ್ರಮಾಣದ ಫ್ಲೇವನಾಯ್ಡ್ ಗಳು, ಆಂಟಿ ಆಕ್ಸಿಡೆಂಟ್, ಆಂಟಿ ಇಂಪ್ಲಿಮೆಟರಿ,ಆಂಟಿ-ವೈರಲ್ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಗ್ಲೂಕೋಸ್(Glucose) ಮಟ್ಟವನ್ನು ಕಡಿಮೆ ಮಾಡುತ್ತದೆ. ಬೇವು ನಾನ್ ಇನ್ಸುಲಿನ್ ಅವಲಂಬಿತ ಶುಗರ್ ಪೇಷಂಟ್ ಗಳ ರೋಗಗಳನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತೆ.

67
ಹೃದಯದ(Heart) ಆರೋಗ್ಯ.

ಬೇವಿನ ಎಲೆಗಳ ನಿಯಮಿತ ಸೇವನೆಯು ದೇಹದಲ್ಲಿನ ಕೊಲೆಸ್ಟ್ರಾಲ್ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದಲ್ಲದೆ ಈ ಘಟಕವು ರಕ್ತದೊತ್ತಡ ಇಳಿಸುವ ಮೂಲಕ ಉತ್ತಮ ಅರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

77
ಯಕೃತ್ತು ಬಲಗೊಳ್ಳುವಂತೆ ಮಾಡುತ್ತೆ

ಬೇವಿನ ಚಹಾವು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಬೇವಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಲಕ್ಷಣಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ
 

Read more Photos on
click me!

Recommended Stories