ಮಳೆಗಾಲದಲ್ಲಿ ಯಾವ ಆಹಾರ ಸೇವಿಸಿದ್ರೆ ಏನಾಗುತ್ತೆ?

First Published | Jul 24, 2022, 4:21 PM IST

ಇದು ಮಳೆಗಾಲ ಮತ್ತು ಈ ಸಮಯದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಸ್ವಲ್ಪಮಟ್ಟಿಗೆ ದುರ್ಬಲವಾಗಿರುತ್ತದೆ. ಇದರಿಂದಾಗಿ, ಅನಾರೋಗ್ಯಕ್ಕೆ ಒಳಗಾಗುವ ಅಪಾಯವೂ ಹೆಚ್ಚಾಗಿರುತ್ತದೆ, ಆದ್ದರಿಂದ ಆಹಾರದಲ್ಲಿ ಸಾಕಷ್ಟು ಕಾಳಜಿ ವಹಿಸಬೇಕಾಗಿರೋದು ನಮ್ಮ ಕರ್ತವ್ಯ. ಆಹಾರದಲ್ಲಿ ಯಾವುದನ್ನು ಸೇರಿಸಬೇಕು ಮತ್ತು ಯಾವುದನ್ನು ಸೇರಿಸಬಾರದು ಎಂಬುದರ ಬಗ್ಗೆ ಯಾವಾಗಲೂ ಗೊಂದಲವಿರುತ್ತದೆ. ಈ ಸೀಸನ್ ನಲ್ಲಿ ಏನು ತಿನ್ನಬೇಕು? ಏನು ತಿನ್ನಬಾರದು ಅನ್ನೋ ಬಗ್ಗೆ ನೀವು ಸರಿಯಾಗಿ ತಿಳಿದಿರಬೇಕು. ಇಲ್ಲಿ ನಾವಿಂದು ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು? ಯಾವುದನ್ನು ಅವಾಯ್ಡ್ ಮಾಡಬೇಕೆನ್ನುವ ಬಗ್ಗೆ ಮಾಹಿತಿ ನೀಡುತ್ತೇವೆ. 

ಈ ಸೀಸನ್ ನಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ಸಹ ತಪ್ಪಿಸಬೇಕು. ಹೆಚ್ಚು ಕರಿದ ಮತ್ತು ಉಪ್ಪುಯುಕ್ತ ಆಹಾರವು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಗ್ಯಾಸ್ (gastric) ಮತ್ತು ಹೊಟ್ಟೆಯಲ್ಲಿ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. 

ಈ ಋತುವಿನಲ್ಲಿ ತಂಪು ಪಾನೀಯಗಳ (cold drinks) ಸೇವನೆಯನ್ನು ಸಹ ತಪ್ಪಿಸಬೇಕು. ಯಾಕೆಂದರೆ ಈ ಸೀಸನ್ ನಲ್ಲಿ ಜೀರ್ಣಾಂಗ ವ್ಯವಸ್ಥೆಯು ತುಂಬಾನೆ ದುರ್ಬಲವಾಗಿದೆ, ಹಾಗಿರುವಾಗ ನೀವು ತಂಪು ಪಾನೀಯ ಸೇವನೆ ಮಾಡಿದ್ರೆ, ಅವು ಆರೋಗ್ಯಕ್ಕೆ  ಹೆಚ್ಚು ಅಪಾಯಕಾರಿಯಾಗಬಹುದು. ಆದುದರಿಂದ ಎಚ್ಚರಿಕೆಯಿಂದ ಇರಿ.

Tap to resize

ಮಳೆಗಾಲದಲ್ಲಿ ಸಾಧ್ಯವಾದಷ್ಟು ಹೂಕೋಸು, ಎಲೆಕೋಸು ಮತ್ತು ಇತರ ಹಸಿರು ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಿ. ಮಳೆಗಾಲದಲ್ಲಿ ಅವುಗಳನ್ನು ತಿನ್ನೋದ್ರಿಂದ ಹೊಟ್ಟೆಯಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತೆ, ಆದ್ದರಿಂದ ಈ ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಡಿ. 
 

ಮಳೆಗಾಲದಲ್ಲಿ ಸೊಪ್ಪು ತರಕಾರಿಗಳನ್ನು (green vegetables) ತಿನ್ನಬಾರದು. ಈ ಋತುವಿನಲ್ಲಿ ಸೋಂಕಿನ ಅಪಾಯವು ಹೆಚ್ಚಾಗುವುದರಿಂದ ನೀವು ಸೊಪ್ಪು ತರಕಾರಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಅವುಗಳಲ್ಲಿ ಕೀಟಗಳ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.  
 

ಈ ಋತುವಿನಲ್ಲಿ ತೇವಾಂಶದಿಂದಾಗಿ, ಮಾಂಸಕ್ಕೆ ಸಂಬಂಧಿಸಿದ ವಸ್ತುಗಳು ಬೇಗನೆ ಹಾಳಾಗುತ್ತವೆ. ಹಾಗಾಗಿ, ನೀವು ಮಾಂಸ ಮತ್ತು ಮೀನು ತಿನ್ನುವುದನ್ನು ತಪ್ಪಿಸಬೇಕು. ಹೇಗಾದರೂ ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಸಮಯವಾಗಿದೆ, ಆದ್ದರಿಂದ ಇವುಗಳನ್ನು ತಿನ್ನಬಾರದು. ಅಥವಾ ತಿನ್ನೋದನ್ನು ಆದಷ್ಟು ಅವಾಯ್ಡ್ ಮಾಡಿ.

ಮಳೆಗಾಲದಲ್ಲಿ ಮಾವು, ಪಪ್ಪಾಯಿ, ಸೇಬು, ದಾಳಿಂಬೆ, ಜಾಮೂನ್, ಪಿಯರ್ಸ್, ಪೇರಳೆ ಮುಂತಾದ ಸೀಸನಲ್ ಹಣ್ಣುಗಳನ್ನು (seasonal fruits) ತಿನ್ನುವುದು ಉತ್ತಮ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿರಿಸುತ್ತದೆ. ಸೀಸನಲ್ ಹಣ್ಣುಗಳು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ.

ಈ ಸೀಸನ್ ನಲ್ಲಿ ತರಕಾರಿಗಳಿಗಾಗಿ ಹಾಗಲಕಾಯಿ, ಸೋರೆಕಾಯಿ, ಹೀರೆಕಾಯಿ ಮೊದಲಾದ ತರಕಾರಿಗಳನ್ನು ಅಡುಗೆಯಲ್ಲಿ ಬಳಸೋದು ಒಳ್ಳೆಯದು. ಇವು ಮಳೆಗಾಲಕ್ಕೆ ಸೂಕ್ತವಾದ ತರಕಾರಿಗಳಾಗಿವೆ. ಇವು ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ. 

ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿ, ಶುಂಠಿ ಮತ್ತು ಅರಿಶಿನವನ್ನು ಯಥೇಚ್ಛವಾಗಿ ಬಳಸಿ. ಅವು ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿವೆ. ಈ ಸೀಸನ್ ನಲ್ಲಿ ಉಂಟಾಗುವ ಶೀತ-ಕೆಮ್ಮಿನ ವಿರುದ್ಧ ಹೋರಾಡಲು ಪರಿಣಾಮಕಾರಿ ಆಹಾರ ಪದಾರ್ಥಗಳಿವೆ. ಆದುದರಿಂದ ಪ್ರತಿದಿನ ಇವುಗಳನ್ನು ಅಡುಗೆಯಲ್ಲಿ ಬಳಸಲು ಮರೆಯಬೇಡಿ.

ಮಳೆಗಾಲದಲ್ಲಿ ನಿಂಬೆ, ಜಲಜೀರಾದಂತಹ ಪಾನೀಯಗಳ ಸೇವನೆಯು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಶುಂಠಿ ಚಹಾ, ಕಷಾಯ ಮತ್ತು ಸೀಸನಲ್ ಹಣ್ಣಿನ ರಸಗಳನ್ನು ಸೇವಿಸುವುದು ಸಹ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇಮ್ಯೂನಿಟಿ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ. 

ಈ ಸೀಸನ್ ನಲ್ಲಿ ಡ್ರೈ ಫ್ರುಟ್ಸ್ ತಿನ್ನೋದು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿಯಾಗಿದೆ. ಬಾದಾಮಿಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಾಲ್ನಟ್ಗಳು ವಿವಿಧ ರೋಗಗಳ ವಿರುದ್ಧ ಹೋರಾಡುತ್ತವೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಗೋಡಂಬಿ ಮತ್ತು ಪಿಸ್ತಾಗಳು ಸಹ ಈ ಸೀಸನ್ ನಲ್ಲಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತವೆ. 

Latest Videos

click me!