ಅನೇಕ ಜನರು ಟೊಮೆಟೊ ಜ್ಯೂಸ್ (Tomato Juice) ಸೇವಿಸ್ತಾರೆ. ಯಾಕಂದ್ರೆ ಅದರಲ್ಲಿ ಕಂಡು ಬರುವ ಲೈಕೋಪೀನ್. ಲೈಕೋಪೀನ್ ಎಂಬ ಆ್ಯಂಟಿ ಆ್ಯಕ್ಸಿಡೆಂಟ್ ಕೆಂಪು ಆಹಾರಗಳಲ್ಲಿ ಕಂಡುಬರುತ್ತೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತೆ. ಆದರೆ ಇದು ಪುರುಷರಿಗೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದುಕೊಳ್ಳೋಣ..
ಹೆಚ್ಚಿನ ಮಟ್ಟದ ವಿಟಮಿನ್ ಸಿ(Vitamin C)
ವಿಟಮಿನ್ ಸಿ ಹುಳಿ ಆಹಾರಗಳಲ್ಲಿ ಕಂಡುಬರುವ ಪೋಷಕಾಂಶ. ವಿಟಮಿನ್-ಸಿ ರೋಗ ನಿರೋಧಕ ಆರೋಗ್ಯವನ್ನು ಸುಧಾರಿಸುತ್ತೆ. ಇದು ರಕ್ತ ನಾಳಗಳನ್ನು ಬಲ ಪಡಿಸುವ ಸಂಯೋಜಕ ಅಂಗಾಂಶ ಮತ್ತು ಕಾಲಜನ್ ರಚನೆಗೆ ಸಹಾಯ ಮಾಡುತ್ತೆ, ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಮತ್ತು ಗಾಯಗಳನ್ನು ಗುಣಪಡಿಸಬಲ್ಲದು.
ಅನೇಕ ಪೋಷಕಾಂಶಗಳಿಂದ ಸಮೃದ್ಧ
ಟೊಮೆಟೊ ಜ್ಯೂಸ್ ಕುಡಿಯುವ ಮೂಲಕ, ನೀವು ಏಕಕಾಲದಲ್ಲಿ ಅನೇಕ ಪೋಷಕಾಂಶಗಳನ್ನು ಪಡೆಯುತ್ತೀರಿ. ಇದಕ್ಕಾಗಿ, ನೀವು ಮನೆಯಲ್ಲಿ ಟೊಮೆಟೊ ಜ್ಯೂಸ್ ತಯಾರಿಸೋದು ಉತ್ತಮ. ಮನೆಯಲ್ಲಿಯೇ ಟೋಮ್ಯಾಟೋ ಜ್ಯೂಸ್ ತಯಾರಿಸಿದ್ರೆ ಅದಕ್ಕೆ ಯಾವುದೇ ದೇಹಕ್ಕೆ ಅನಾರೋಗ್ಯ ಉಂಟು ಮಾಡುವ ಆಹಾರ ಸೇರಿಸೋದಿಲ್ಲ. ಇದರಿಂದ ಉತ್ತಮ ಆರೋಗ್ಯ(Health) ಕಾಪಾಡಿಕೊಳ್ಳಬಹುದು.
ಪ್ರಾಸ್ಟೇಟ್ (Prostate)ಆರೋಗ್ಯವನ್ನು ಸುಧಾರಿಸುತ್ತೆ
ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟಿನ 2017-2019 ರ ಪ್ರಕಾರ, ಲೈಕೋಪೀನ್ ಸೇವನೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಬಹುದು. ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕ ಕಲ್ಲಂಗಡಿ, ಪೇರಳೆ ಮತ್ತು ದ್ರಾಕ್ಷಿಗಳಲ್ಲಿಯೂ ಕಂಡುಬರುತ್ತೆ. ಟೊಮೆಟೊ ಜ್ಯೂಸ್ ಕುಡಿಯೋದ್ರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು ಪ್ರಾಸ್ಟೇಟ್ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತೆ .
ಅಧಿಕ ಪ್ರಮಾಣದ ಸೋಡಿಯಂ(Sodium)
ಟೊಮೆಟೊ ಜ್ಯೂಸ್ ಅತ್ಯಂತ ಹೆಚ್ಚಿನ ಪ್ರಮಾಣದ ಸೋಡಿಯಂ ಸಹ ಹೊಂದಿರುತ್ತೆ. ಇದರಲ್ಲಿ 200 ಗ್ರಾಂ ಟೊಮೆಟೊ ಜ್ಯೂಸ್ 630 ಮಿಗ್ರಾಂ ಸೋಡಿಯಂ ಹೊಂದಿರುತ್ತೆ, ಇದು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿದೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತೆ.
ಎದೆಯುರಿ ಅಪಾಯ ಹೆಚ್ಚಾಗುವುದು
ನೀವು ಪ್ರತಿದಿನ ಟೊಮೆಟೊ ಜ್ಯೂಸ್ ಕುಡಿದರೆ, ಅದು ಆಸಿಡ್ ರಿಫ್ಲಕ್ಸ್ ಅಪಾಯವನ್ನು ಹೆಚ್ಚಿಸುತ್ತೆ. ಅಂದರೆ ಎದೆಯುರಿ. ಹೊಟ್ಟೆಯ ಆಮ್ಲವು(Acid) ಅನ್ನನಾಳಕ್ಕೆ ಹಿಂತಿರುಗುವಾಗ ಇದು ಸಂಭವಿಸುತ್ತೆ . ಟೊಮೆಟೊ ಜ್ಯೂಸ್ ಕುಡಿಯೋದರಿಂದ ಪರಿಸ್ಥಿತಿ ಇನ್ನೂ ಹದಗೆಡಬಹುದು. ಆದುದರಿಂದ ಇದನ್ನು ಪ್ರತಿದಿನ ಸೇವಿಸುವ ತಪ್ಪು ಮಾಡ್ಬೇಡಿ.