ಬೆಳ್ಳುಳ್ಳಿಯಲ್ಲಿ ಅಲರ್ಜಿ ನಿರೋಧಕ, ಉತ್ಕರ್ಷಣ ನಿರೋಧಕ, ಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ. ಅಲ್ಲಿಸಿನ್ ಎಂಬ ಸಂಯುಕ್ತವು ಊತ, ನೋವು ಕಡಿಮೆ ಮಾಡುತ್ತದೆ. ರಕ್ತ ಸಂಚಾರವನ್ನು ಸುಧಾರಿಸುತ್ತದೆ.
ಬೆಳ್ಳುಳ್ಳಿ ಎಣ್ಣೆಯಿಂದ ಮಸಾಜ್ ಮಾಡಿದರೆ ಸ್ನಾಯುಗಳು ಸಡಿಲಗೊಂಡು, ಆಯಾಸ ಕಡಿಮೆಯಾಗುತ್ತದೆ. ಹೆಚ್ಚು ಹೊತ್ತು ನಿಂತಾಗ ಇದನ್ನು ಬಳಸಬಹುದು.
ಬೆಳ್ಳುಳ್ಳಿಯ ಸೂಕ್ಷ್ಮಜೀವಿ ನಿರೋಧಕ ಗುಣಗಳು ಶಿಲೀಂಧ್ರ, ಬ್ಯಾಕ್ಟೀರಿಯಾದ ಸೋಂಕಿನಿಂದ ರಕ್ಷಿಸುತ್ತದೆ. ಮಳೆಗಾಲದಲ್ಲಿ ಬೆಳ್ಳುಳ್ಳಿ ಎಣ್ಣೆ ಬಳಸುವುದು ಒಳ್ಳೆಯದು.