40ರ ನಂತರವೂ ನೀವೂ ಹೆಲ್ತಿಯಾಗಿ, ಫಿಟ್ ಆಗಿ ಇರಬೇಕೆ? ಹಾಗಿದ್ರೆ ನಿಮ್ಮ ದಿನಚರಿ ಹೀಗಿರಲಿ

Published : Feb 08, 2025, 06:54 PM ISTUpdated : Feb 09, 2025, 09:26 AM IST

ಜನರಿಗೆ ವಯಸ್ಸಾದಂತೆ, ಅವರ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ, 40 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಆಹಾರ ಕ್ರಮವು ಹೇಗಿರಬೇಕು ಅನ್ನೋದನ್ನು ತಿಳಿಯೋದು ಅಗತ್ಯ.   

PREV
18
40ರ ನಂತರವೂ ನೀವೂ ಹೆಲ್ತಿಯಾಗಿ, ಫಿಟ್ ಆಗಿ ಇರಬೇಕೆ? ಹಾಗಿದ್ರೆ ನಿಮ್ಮ ದಿನಚರಿ ಹೀಗಿರಲಿ

ವಯಸ್ಸಾಗೋದು ಸಾಮಾನ್ಯ ಪ್ರಕ್ರಿಯೆ. ಜನರಿಗೆ ವಯಸ್ಸಾದಂತೆ, ಅವರ ದೇಹದಲ್ಲಿ ವಿವಿಧ ಬದಲಾವಣೆಗಳು ಉಂಟಾಗಲು ಪ್ರಾರಂಭಿಸುತ್ತವೆ. ನೀವು ಆರೋಗ್ಯವಂತರಾಗಿರಬೇಕು ಅಂದ್ರೆ ನಿಮ್ಮ ಆಹಾರಕ್ರಮದ ಬಗ್ಗೆ ಜಾಗರೂಕರಾಗಿರಬೇಕು. ಅದರಲ್ಲೂ 40 ವರ್ಷಕ್ಕಿಂತ (After 40) ಮೇಲ್ಪಟ್ಟವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.
 

28

ವಯಸ್ಸಾದಂತೆ ಉಂಟಾಗುವ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ (High Blood Pressure), ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಬೊಜ್ಜನ್ನು ತಪ್ಪಿಸಲು 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಕೆಲವು ಜೀವನಶೈಲಿ ಬದಲಾವಣೆಗಳನ್ನು ಮಾಡಬೇಕು. 
 

38

ನೀವು ಕೂಡ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ನೀವು ತಮ್ಮ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ ಅನ್ನೋದನ್ನು ಮೊದಲು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿ. ಅಷ್ಟೇ ಆಲ್ಲ ಎಣ್ಣೆ ಮತ್ತು ಉಪ್ಪಿನ ಅತಿಯಾದ ಸೇವನೆಯನ್ನು ತಪ್ಪಿಸಬೇಕು.
 

48

40 ವರ್ಷಕ್ಕಿಂತ ಮೇಲ್ಪಟ್ಟವರು ಉತ್ತಮ ಪ್ರಮಾಣದ ಫೈಬರ್ ಆಹಾರ ಸೇವಿಸಬೇಕು ಮತ್ತು ಸಾಕಷ್ಟು ನೀರು ಕುಡಿಯಬೇಕು. ದಿನದಲ್ಲಿ ಕಡಿಮೆ ಅಂದ್ರೆ 2 .5 ಲೀಟರ್ ನೀರು ಕುಡಿಯೋದಕ್ಕೆ ಪ್ರಯತ್ನಿಸಿ, ಇದರಿಂದ ಆರೋಗ್ಯ ಚೆನ್ನಾಗಿರುತ್ತೆ. 
 

58

ಅಷ್ಟೇ ಅಲ್ಲ ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ರೆ ನಿಯಮಿತವಾಗಿ ವ್ಯಾಯಾಮ (Exercise) ಮಾಡಬೇಕು.  ಇದರಿಂದ ಅವರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗೋದಿಲ್ಲ. ಸಾಧ್ಯವಾದರೆ ವಾಕಿಂಗ್ ಮಾಡೊದನ್ನು ಅಭ್ಯಾಸ ಮಾಡಿಕೊಳ್ಳೋದು ಉತ್ತಮ. 
 

68

40 ವರ್ಷಕ್ಕಿಂತ ಮೇಲ್ಪಟ್ಟ ಜನರು ತಮ್ಮ ಎತ್ತರ ಮತ್ತು ತೂಕದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.  ಅಷ್ಟೇ ಅಲ್ಲ ಈ ಜನರು ಕನಿಷ್ಠ ಆರರಿಂದ ಏಳು ಗಂಟೆಗಳ ನಿದ್ರೆ (Good Sleep) ಪಡೆಯಲೇಬೇಕು. ಸರಿಯಾಗಿ ನಿದ್ರೆ ಮಾಡಿದರೆ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ.
 

78

ನಿಮಗೆ 40 ವರ್ಷ ದಾಟಿದ್ರೆ ನಂತರ ಸ್ತನ ಕ್ಯಾನ್ಸರ್ (Breast cancer) ಅನ್ನು ಪತ್ತೆಹಚ್ಚಲು ಮಹಿಳೆಯರು ಸ್ತನ ಅಲ್ಟ್ರಾಸೌಂಡ್ ಗೆ ಒಳಗಾಗಬೇಕು. ಅಷ್ಟೇ ಅಲ್ಲ ನೀವು ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ದಂತ ತಪಾಸಣೆ ಮತ್ತು ಯಕೃತ್ತಿನ ಕಾರ್ಯನಿರ್ವಹಣೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
 

88

ಕೊನೆಯದಾಗಿ ಹೇಳೋದಾದರೆ 40 ರ ವಯಸ್ಸಿನಲ್ಲಿ ಹೊರಗೆ ತಿನ್ನುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ನಿಮ್ಮ ತೂಕವನ್ನು ಕಾಪಾಡಿಕೊಳ್ಳಿ ಮತ್ತು ನೀವು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆಗಳನ್ನು ಸಹ ಪಡೆಯಬೇಕು. ಇದರಿಂದ ನೀವು ಯಾವಾಗಲೂ ಫಿಟ್ ಆಗಿರಲು ಸಾಧ್ಯ ಆಗುತ್ತೆ. 

click me!

Recommended Stories