ಹಸಿ ಮೀನು vs. ಒಣ ಮೀನು: ಇವೆರಡರಲ್ಲಿ ಯಾವುದು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?

Published : Sep 26, 2026, 11:20 PM IST

Difference between fresh fish and dry fish: ಹಸಿ ಮೀನು ಮತ್ತು ಒಣ ಮೀನು ಎರಡರಲ್ಲೂ ಪೋಷಕಾಂಶಗಳು ಇರುತ್ತವೆ. ಆದರೆ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಹಾಗಾದರೆ ಇವೆರಡರಲ್ಲಿ ಯಾವುದನ್ನು ತಿಂದರೆ ನಮ್ಮ ದೇಹಕ್ಕೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ.

PREV
13
ಹಸಿ ಮೀನು ತಿಂದರೆ ಒಳ್ಳೆಯದಾ?

ಮಾರುಕಟ್ಟೆಯಲ್ಲಿ ಸಿಗುವ ಹಸಿ ಮೀನಿನಲ್ಲಿ ಪೋಷಕಾಂಶಗಳು ಮತ್ತು ತೇವಾಂಶ ಹೆಚ್ಚಾಗಿರುತ್ತದೆ. ಇದನ್ನು ತಿನ್ನುವುದರಿಂದ ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್ ಡಿ ಮತ್ತು ಲೀನ್ ಪ್ರೋಟೀನ್ ನಮ್ಮ ದೇಹಕ್ಕೆ ಸಿಗುತ್ತದೆ.

ಹಸಿ ಮೀನು ನಮ್ಮ ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೆದುಳು ಚುರುಕಾಗಿ ಕೆಲಸ ಮಾಡಲು ಮತ್ತು ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಸಿ ಮೀನಿನಲ್ಲಿ ಉಪ್ಪಿನ ಅಂಶ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಹೈ ಬಿಪಿ ಅಥವಾ ಹೃದಯದ ಸಮಸ್ಯೆ ಇರುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ಇದನ್ನು ತಾಜಾವಾಗಿ ಬೇಯಿಸಿ ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಯಾವುದೇ ಜೀರ್ಣಕ್ರಿಯೆ ಸಮಸ್ಯೆಗಳು ಬರುವುದಿಲ್ಲ.

23
ಒಣ ಮೀನು ತಿನ್ನುವುದು ಒಳ್ಳೆಯದಲ್ಲವೇ?

ಮೀನನ್ನು ಒಣಗಿಸುವ ಪ್ರಕ್ರಿಯೆಯಲ್ಲಿ ಅದರಲ್ಲಿರುವ ನೀರಿನ ಅಂಶ ಆವಿಯಾಗುತ್ತದೆ. ಇದರಿಂದ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಪ್ರೋಟೀನ್ ಪ್ರಮಾಣ ಹೆಚ್ಚಾಗುತ್ತದೆ. ವಿಶೇಷವಾಗಿ ಒಣ ಮೀನನ್ನು ಮುಳ್ಳುಗಳ ಸಮೇತ ತಿಂದರೆ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಸಿಗುತ್ತದೆ. ಹಸಿ ಮೀನಿಗೆ ಹೋಲಿಸಿದರೆ ಒಣ ಮೀನನ್ನು ಬಹಳ ದಿನಗಳವರೆಗೆ ಕೆಡದಂತೆ ಇಡಬಹುದು. ಆದರೆ, ಒಣ ಮೀನು ಕೆಡದಿರಲಿ ಎಂದು ಅದಕ್ಕೆ ವಿಪರೀತ ಉಪ್ಪು ಸೇರಿಸುತ್ತಾರೆ. ಆದ್ದರಿಂದ ರಕ್ತದೊತ್ತಡ, ಕಿಡ್ನಿ ಸಮಸ್ಯೆ ಇರುವವರು ಅಥವಾ ಉಪ್ಪು ಕಡಿಮೆ ತಿನ್ನಲು ವೈದ್ಯರು ಸೂಚಿಸಿದವರು ಒಣ ಮೀನಿನಿಂದ ದೂರವಿರುವುದು ಒಳ್ಳೆಯದು. ಒಣ ಮೀನು ಗಟ್ಟಿಯಾಗಿರುವುದರಿಂದ ಜೀರ್ಣಶಕ್ತಿ ಕಡಿಮೆ ಇರುವವರಿಗೆ ಇದು ಬೇಗನೆ ಜೀರ್ಣವಾಗುವುದಿಲ್ಲ.

33
ಇವೆರಡರಲ್ಲಿ ಯಾವುದು ಬೆಸ್ಟ್?

ನಮ್ಮ ದೈನಂದಿನ ಆರೋಗ್ಯ, ಹೃದಯ ಮತ್ತು ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಹಸಿ ಮೀನು ಅತ್ಯುತ್ತಮ ಆಯ್ಕೆಯಾಗಿದೆ. ಆದರೆ, ನಿಮಗೆ ಇಷ್ಟವಿದ್ದರೆ ಒಮ್ಮೊಮ್ಮೆ ಒಣ ಮೀನನ್ನು ಕೂಡ ತಿನ್ನಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories