Unhealthy Foods: ಹೆಲ್ದಿ ಎಂದು ಭಾವಿಸಿ ಪ್ರತಿದಿನ ಸೇವಿಸುವ ಕೆಲವು ಪ್ಯಾಕೆಟ್ ಆಹಾರಗಳು ನಿಜಕ್ಕೂ ಅಷ್ಟೊಂದು ಆರೋಗ್ಯಕರವಾಗಿರದಿರಬಹುದು. ಫ್ಲೇವರ್ಡ್ ಯೋಗರ್ಟ್‌ನಿಂದ ಮಲ್ಟಿಗ್ರೇನ್ ಬ್ರೆಡ್‌ವರೆಗೆ ಯಾವ ಆಹಾರಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂಬುದನ್ನು ತಿಳಿಯೋಣ.
100% ನ್ಯಾಚುರಲ್ ಎನ್ನುತ್ತಾ ಖರೀಸಿದುವ ವಸ್ತುವಿನ ಬಗ್ಗೆ ಮೋಸ ಹೋಗದಿರಿ
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ಹೆಚ್ಚಾಗಿದೆ. ಆದರೆ ಇದರ ಜೊತೆಯಲ್ಲೇ ಮಾರುಕಟ್ಟೆಯಲ್ಲಿ ಹೆಲ್ದಿ ಎಂಬ ಹೆಸರಿನಲ್ಲಿ ಪ್ರೊಸೆಸ್‌ಡ್ ಫುಡ್ಸ್ ಮಾರಾಟ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಇಂದು ಇಂತಹ ಹಲವು ಆಹಾರ ಪದಾರ್ಥಗಳು ಲಭ್ಯವಿದ್ದು, ಅವುಗಳನ್ನು ನಾವು ಆರೋಗ್ಯಕರವೆಂದು ಭಾವಿಸುತ್ತೇವೆ. ಆದರೆ ಅವುಗಳಲ್ಲಿ ಸಕ್ಕರೆ, ಉಪ್ಪು, ಪ್ರಿಸರ್ವೇಟಿವ್ಸ್ ಮತ್ತು ಪಾಮ್ ಆಯಿಲ್ ಅಡಗಿರುತ್ತವೆ. ಈ ಆಹಾರಗಳನ್ನು ಆರೋಗ್ಯಕರವೆಂದು ಭಾವಿಸಿ ನಾವು ನಮ್ಮ ದೈನಂದಿನ ಡಯಟ್‌ನಲ್ಲಿ ಸೇರಿಸಿಕೊಳ್ಳುತ್ತೇವೆ. ಆದರೆ ಇವು ಆರೋಗ್ಯಕ್ಕೆ ಪ್ರಯೋಜನ ನೀಡುವ ಬದಲು ಹಾನಿಯನ್ನೇ ಉಂಟುಮಾಡಬಹುದು. ಹಾಗಾದರೆ ನಿಮ್ಮ ಕಿಚನ್‌ನಲ್ಲಿ ನೀವು ಹೆಲ್ದಿ ಎಂದುಕೊಂಡಿರುವ, ಆದರೆ ವಾಸ್ತವದಲ್ಲಿ ಅನಾರೋಗ್ಯಕರವಾಗಿರಬಹುದಾದ ಆಹಾರಗಳು ಯಾವುವು ನೋಡೋಣ.
26
ಫ್ಲೇವರ್ಡ್ ಯೋಗರ್ಟ್
ಮೊಸರು ಜೀರ್ಣಕ್ರಿಯೆಗೆ ಸಾಕಷ್ಟು ಪ್ರಯೋಜನಕಾರಿ ಹೌದು. ಆದರೆ ಫ್ಲೇವರ್ಡ್ ಯೋಗರ್ಟ್ ಅಷ್ಟೊಂದು ಪ್ರಯೋಜನಕಾರಿಯಲ್ಲ. ಇದಕ್ಕೆ ರುಚಿ ನೀಡಲು ಸಕ್ಕರೆ ಮತ್ತು ಕೃತಕ ಫ್ಲೇವರ್‌ಗಳನ್ನು ಸೇರಿಸಲಾಗುತ್ತದೆ. ಇದರಿಂದ ತೂಕ ಹೆಚ್ಚಾಗಬಹುದು ಮತ್ತು ಬ್ಲಡ್ ಶುಗರ್ ಮಟ್ಟವೂ ವೇಗವಾಗಿ ಏರಬಹುದು. ಜೊತೆಗೆ, ಇದರಿಂದ ಗಟ್ ಹೆಲ್ತ್‌ಗೂ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ.
36
ವೇಜಿಟೆಬಲ್ ಚಿಪ್ಸ್
ಆಲೂಗಡ್ಡೆ ಚಿಪ್ಸ್‌ಗೆ ಹೆಲ್ದಿ ಪರ್ಯಾಯ ಎಂದು ಭಾವಿಸಿ ಜನರು ವೇಜಿಟೆಬಲ್ ಚಿಪ್ಸ್ ಖರೀದಿಸುತ್ತಾರೆ. ಇದೇ ರೀತಿ ಮಾರುಕಟ್ಟೆಯಲ್ಲಿ ರಾಗಿ ಚಿಪ್ಸ್‌ನಂತಹ ಆಯ್ಕೆಗಳೂ ಲಭ್ಯವಿವೆ. ಆದರೆ ಇವುಗಳನ್ನೂ ಡೀಪ್ ಫ್ರೈ ಮಾಡಲಾಗುತ್ತದೆ ಮತ್ತು ಅತಿ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ನಷ್ಟವಾಗಬಹುದು. ಜೊತೆಗೆ, ಇವುಗಳಲ್ಲಿ ಉಪ್ಪು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣವೂ ಹೆಚ್ಚಿರುತ್ತದೆ.
ಎನರ್ಜಿ ಬಾರ್‌ಗಳನ್ನು ಜನರು ಹೆಲ್ದಿ ಸ್ನ್ಯಾಕ್‌ನಂತೆ ಸೇವಿಸುತ್ತಾರೆ. ಎನರ್ಜಿ ಬಾರ್‌ಗಳನ್ನು ಸಾಮಾನ್ಯವಾಗಿ ಡ್ರೈ ಫ್ರೂಟ್ಸ್ ಮತ್ತು ಓಟ್ಸ್‌ನಿಂದ ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇವುಗಳಿಗೆ ರುಚಿ ನೀಡಲು ಕಾರ್ನ್ ಸಿರಪ್, ಸಕ್ಕರೆ, ವೆಜಿಟೆಬಲ್ ಆಯಿಲ್ ಮತ್ತು ಹಲವು ರೀತಿಯ ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗುತ್ತದೆ. ಹಾಗಾಗಿ ನೀವು ಎನರ್ಜಿ ಬಾರ್‌ಗಳನ್ನು ಎಷ್ಟು ಆರೋಗ್ಯಕರವೆಂದು ಭಾವಿಸುತ್ತೀರೋ, ಅವು ಅಷ್ಟೊಂದು ಪ್ರಯೋಜನಕಾರಿಯಾಗಿರುವುದಿಲ್ಲ.
56
ಪ್ಯಾಕೆಟ್ ಜ್ಯೂಸ್
ಪ್ಯಾಕೆಟ್ ಜ್ಯೂಸ್ ಮಾರಾಟ ಮಾಡುವ ಕಂಪನಿಗಳು ಸಾಮಾನ್ಯವಾಗಿ ‘100% ನ್ಯಾಚುರಲ್’ ಅಥವಾ ‘ನೋ ಆಡೆಡ್ ಶುಗರ್’ ಎಂಬ ಹೇಳಿಕೆಗಳನ್ನು ನೀಡುತ್ತವೆ. ಆದರೆ ಇವು ತಾಜಾ ಹಣ್ಣುಗಳಿಗೆ ಎಂದಿಗೂ ಪರ್ಯಾಯವಾಗುವುದಿಲ್ಲ. ಪ್ಯಾಕ್ ಮಾಡುವ ಸಂದರ್ಭದಲ್ಲಿ ಹಣ್ಣುಗಳಲ್ಲಿರುವ ಫೈಬರ್ ಸಂಪೂರ್ಣವಾಗಿ ಹೊರಹೋಗುತ್ತದೆ. ಇದರಿಂದ ಫ್ರಕ್ಟೋಸ್ ಮಾತ್ರ ಉಳಿಯುತ್ತದೆ. ಇದರಿಂದ ಬ್ಲಡ್ ಶುಗರ್ ಮಟ್ಟ ವೇಗವಾಗಿ ಏರಬಹುದು. ಹಾಗಾಗಿ ‘100% ನ್ಯಾಚುರಲ್’ ಎಂಬ ಲೇಬಲ್ ಹೊಂದಿರುವ ಫ್ರೂಟ್ ಜ್ಯೂಸ್‌ಗಳೂ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರಬೇಕೆಂದಿಲ್ಲ.
66
ಮಲ್ಟಿಗ್ರೇನ್ ಬ್ರೆಡ್
ವೈಟ್ ಬ್ರೆಡ್‌ಗೆ ಹೆಲ್ದಿ ಪರ್ಯಾಯವಾಗಿ ಮಲ್ಟಿಗ್ರೇನ್ ಬ್ರೆಡ್ ಅನ್ನು ಸಾಕಷ್ಟು ಪ್ರಚಾರ ಮಾಡಲಾಗುತ್ತದೆ. ಆದರೆ ಮಲ್ಟಿಗ್ರೇನ್ ಎಂದು ಬರೆದಿರುವುದರಿಂದ ಅದು ಹೋಲ್ ವೀಟ್‌ನಿಂದ ತಯಾರಿಸಲಾಗಿದೆ ಎಂದರ್ಥವಲ್ಲ. ಹೆಚ್ಚಿನ ಬ್ರೆಡ್‌ಗಳಲ್ಲಿ ಮೈದಾ ಇರುತ್ತದೆ. ಅದಕ್ಕೆ ಮೇಲೆ ಸ್ವಲ್ಪ ಸೀಡ್ಸ್ ಅಥವಾ ಇತರ ಧಾನ್ಯಗಳನ್ನು ಮಾತ್ರ ಸೇರಿಸಲಾಗುತ್ತದೆ. ಕಂದು ಬಣ್ಣ ನೀಡಲು ಇವುಗಳಲ್ಲಿ ಬಣ್ಣವನ್ನೂ ಸೇರಿಸಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.