Foot health signs: ಕಾಲಿನಲ್ಲಿ ಕಂಡುಬರುವ ಪ್ರತಿಯೊಂದು ಸಮಸ್ಯೆಯೂ ಸಾಮಾನ್ಯವಲ್ಲ. ಪಾದಗಳ ಊತ, ತಣ್ಣಗಾಗುವುದು ಅಥವಾ ಹಿಮ್ಮಡಿ ಒಡೆಯುವುದು ನಿಮ್ಮ ದೇಹದ ಪ್ರಮುಖ ಅಂಗಗಳ ವೈಫಲ್ಯದ ಮುನ್ಸೂಚನೆಯಾಗಿರಬಹುದು. ಆ ಲಕ್ಷಣಗಳ ಬಗ್ಗೆ ವೈದ್ಯರು ನೀಡಿರುವ ಎಚ್ಚರಿಕೆ ಇಲ್ಲಿದೆ.
ಕಾಲು ನೀಡುವ ಎಚ್ಚರಿಕೆ! ಕಾಲಿನಲ್ಲಿ ಉಂಟಾಗುವ ಪ್ರತಿಯೊಂದು ಬದಲಾವಣೆಯೂ ಸಾಮಾನ್ಯವಲ್ಲ. ಪಾದ ಅಥವಾ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ನಿಮ್ಮ ದೇಹದ ಒಳಗೆ ಅಡಗಿರುವ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ಡಾ. ಶಾಲಿನಿ ಸಿಂಗ್ ಸಾಲುಂಕೆ ಎಚ್ಚರಿಸಿದ್ದಾರೆ.
26
ಊತ (Swelling)
ಊತ (Swelling) ನಿಮ್ಮ ಕಾಲಿನಲ್ಲಿ ಪದೇ ಪದೇ ಊತ ಅಥವಾ ಬಾವು ಕಾಣಿಸಿಕೊಳ್ಳುತ್ತಿದ್ದರೆ, ಅದು ಲಿವರ್ (ಯಕೃತ್ತು), ಕಿಡ್ನಿ ಅಥವಾ ಹೃದಯದ ಸಮಸ್ಯೆಯ ಸೂಚನೆಯಾಗಿರಬಹುದು. ದೇಹದಿಂದ ನೀರು ಮತ್ತು ಕಶ್ಮಲಗಳು ಸರಿಯಾಗಿ ಹೊರಹೋಗದಿದ್ದಾಗ ಈ ರೀತಿ ಆಗುತ್ತದೆ.
36
ಪಾದಗಳು ಅತಿಯಾಗಿ ತಣ್ಣಗಾಗುವುದು (Cold Soles)
ಪಾದಗಳು ಅತಿಯಾಗಿ ತಣ್ಣಗಾಗುವುದು (Cold Soles) ಕಾಲಿನ ತಳಭಾಗ ಯಾವಾಗಲೂ ಅತಿಯಾಗಿ ತಣ್ಣಗಿರುತ್ತಿದ್ದರೆ, ಅದು ರಕ್ತನಾಳಗಳಲ್ಲಿನ ಬ್ಲಾಕೇಜ್ (Blockage) ಅಥವಾ ರಕ್ತ ಸಂಚಾರದ ಕೊರತೆಯನ್ನು ಸೂಚಿಸುತ್ತದೆ. ನರಗಳಲ್ಲಿ ಕೊಬ್ಬು ಶೇಖರಣೆಯಾದಾಗ ರಕ್ತ ಸಂಚಾರ ಕುಂಠಿತಗೊಂಡು ಪಾದಗಳು ತಣ್ಣಗಾಗುತ್ತವೆ.
ಉಬ್ಬಿದ ನರಗಳು (Bulging Veins) ಕಾಲಿನ ನರಗಳು ಊದಿಕೊಂಡಂತೆ ಅಥವಾ ಹೊರಗೆ ಉಬ್ಬಿದಂತೆ ಕಾಣಿಸುತ್ತಿದ್ದರೆ ಅದು 'ವೇರಿಕೋಸ್ ವೇಯ್ನ್ಸ್' (Varicose Veins) ಸಮಸ್ಯೆಯಿರಬಹುದು. ಹೃದಯದ ಕಡೆಗೆ ಹರಿಯಬೇಕಾದ ರಕ್ತ ನರಗಳಲ್ಲೇ ಸಂಗ್ರಹವಾಗುವುದರಿಂದ ಈ ರೀತಿ ಆಗುತ್ತದೆ.
56
ಹಿಮ್ಮಡಿಗಳು ಅತಿಯಾಗಿ ಒಡೆಯುವುದು (Cracked Heels)
ಹಿಮ್ಮಡಿಗಳು ಅತಿಯಾಗಿ ಒಡೆಯುವುದು (Cracked Heels) ಹಿಮ್ಮಡಿಗಳು ಅತಿಯಾಗಿ ಒಡೆದು ಹೋಗುತ್ತಿದ್ದರೆ ಅದನ್ನು ಕೇವಲ ಚರ್ಮದ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಇದು ಫ್ಯಾಟಿ ಲಿವರ್, ಥೈರಾಯ್ಡ್ ಅಥವಾ ಡಯಾಬಿಟಿಸ್ (ಮಧುಮೇಹ) ಕಾಯಿಲೆಯ ಲಕ್ಷಣವೂ ಆಗಿರಬಹುದು.
66
ತಜ್ಞರ ಸಲಹೆ ಪಡೆಯಿರಿ
ತಜ್ಞರ ಸಲಹೆ ಪಡೆಯಿರಿ ಇಂತಹ ಲಕ್ಷಣಗಳು ದೀರ್ಘಕಾಲ ಕಂಡುಬರುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಗಂಭೀರ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.