ಬೇರೆಯವರಿಗಿಂತ ನಿಮಗೆ ಯಾವಾಗಲೂ ಹೆಚ್ಚು ಚಳಿ ಅನಿಸುತ್ತಾ? ಸ್ನಾನ ಮಾಡುವಾಗ ಅಥವಾ ತಲೆ ಬಾಚುವಾಗ ವಿಪರೀತ ಕೂದಲು ಉದುರುತ್ತಿದೆಯಾ? ಹಾಗಿದ್ದರೆ ಇದು ನಿಮ್ಮ ದೇಹದಲ್ಲಿ ಐರನ್ (ಕಬ್ಬಿಣಾಂಶ) ಕೊರತೆಯ ಲಕ್ಷಣ ಆಗಿರಬಹುದು. ಈ ಐದು ಪ್ರಮುಖ ಲಕ್ಷಣಗಳನ್ನು ನೀವು ನಿರ್ಲಕ್ಷ್ಯ ಮಾಡಲೇಬೇಡಿ.
ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಬೆಳಗ್ಗೆ ಎದ್ದರೂ ನಿಮಗೆ ವಿಪರೀತ ಸುಸ್ತು ಅನಿಸುತ್ತಾ? ದೇಹದಲ್ಲಿ ಐರನ್ ಕೊರತೆಯಿಂದ ಉಂಟಾಗುವ ರಕ್ತಹೀನತೆಗೆ ಇದು ಒಂದು ಪ್ರಮುಖ ಲಕ್ಷಣವಾಗಿದೆ.
26
ಯಾವಾಗಲೂ ವಿಪರೀತ ಚಳಿ ಅನಿಸುವುದು
ಬೇರೆಯವರಿಗೆ ವಾತಾವರಣ ಸಾಮಾನ್ಯವಾಗಿ ಕಂಡರೂ, ನಿಮಗೆ ಮಾತ್ರ ವಿಪರೀತ ಚಳಿ ಅನಿಸುತ್ತಾ? ದೇಹದಲ್ಲಿ ಉಷ್ಣಾಂಶ ಉತ್ಪಾದಿಸುವ ಮತ್ತು ಕಾಪಾಡುವ ಸಾಮರ್ಥ್ಯವನ್ನು ಐರನ್ ಕೊರತೆ ಕಡಿಮೆ ಮಾಡುತ್ತದೆ.
36
ಸಣ್ಣಪುಟ್ಟ ಕೆಲಸಕ್ಕೂ ಉಸಿರಾಟದ ತೊಂದರೆ
ಸ್ವಲ್ಪ ದೂರ ನಡೆದಾಗ ಅಥವಾ ಭಾರವಾದ ವಸ್ತುಗಳನ್ನು ಎತ್ತಿದಾಗ ನಿಮಗೆ ಉಸಿರು ಕಟ್ಟಿದ ಹಾಗೆ ಆಗುತ್ತಾ? ನಿಮ್ಮ ದೇಹದ ಜೀವಕೋಶಗಳಿಗೆ ಸಾಕಷ್ಟು ಆಮ್ಲಜನಕ ತಲುಪುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಐರನ್ ಕೊರತೆಯಿಂದಾಗಿ ಹಿಮೋಗ್ಲೋಬಿನ್ ಕಡಿಮೆಯಾಗಿ ಚರ್ಮದ ನೈಸರ್ಗಿಕ ಬಣ್ಣ ಮಾಸುತ್ತದೆ. ಕಣ್ಣಿನ ರೆಪ್ಪೆಯ ಒಳಭಾಗ ಸಾಮಾನ್ಯ ಕೆಂಪು ಬಣ್ಣದ ಬದಲಾಗಿ ಬಿಳಿ ಬಣ್ಣಕ್ಕೆ ತಿರುಗುವುದು ಕೂಡ ಇದರ ಲಕ್ಷಣವಾಗಿದೆ.
56
ವಿಪರೀತ ಕೂದಲು ಉದುರುವಿಕೆ
ಸ್ನಾನ ಮಾಡುವಾಗ ಅಥವಾ ತಲೆ ಬಾಚುವಾಗ ಮೊದಲಿಗಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ದೇಹದಲ್ಲಿ ಐರನ್ ಅಂಶ ಕಡಿಮೆಯಾದಾಗ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.
66
ಈ ಸಲಹೆ ಪಾಲಿಸಿ, ಆರೋಗ್ಯವಾಗಿರಿ
ಐರನ್ ಕೊರತೆಯ 5 ಲಕ್ಷಣಗಳಿವು, ಎಚ್ಚರ! ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆ ಆಗದಂತೆ ತಡೆಯಿರಿ. ಜೊತೆಗೆ, ಈ ಸಲಹೆ ಪಾಲಿಸಿ, ಆರೋಗ್ಯವಾಗಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.