ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು? ಜಾಸ್ತಿ ತಿಂದರೆ ಏನು ಸಮಸ್ಯೆ ಆಗುತ್ತೆ ಗೊತ್ತಾ?

Published : Sep 28, 2026, 12:22 PM IST

ಮಿತವಾಗಿ ಮೊಟ್ಟೆ ತಿಂದರೆ ಸ್ನಾಯುಗಳ ಬೆಳವಣಿಗೆಗೆ ಒಳ್ಳೆಯದು. ಹೊಟ್ಟೆ ತುಂಬಿದ ಅನುಭವ ನೀಡಿ, ತೂಕ ಕಂಟ್ರೋಲ್ ಮಾಡಲೂ ಇದು ಸಹಾಯ ಮಾಡುತ್ತದೆ. ಆದರೆ, ಮಿತಿಮೀರಿ ಮೊಟ್ಟೆ ತಿಂದರೆ ಕೆಲವು ಆರೋಗ್ಯ ಸಮಸ್ಯೆಗಳು ಗ್ಯಾರಂಟಿ. ಆ ಸಮಸ್ಯೆಗಳು ಯಾವುವು ಅಂತ ಇಲ್ಲಿ ತಿಳಿಯಿರಿ.

PREV
17
ಜೀರ್ಣಕ್ರಿಯೆ ಸಮಸ್ಯೆ

ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವವರು ಜಾಸ್ತಿ ಮೊಟ್ಟೆ ತಿಂದರೆ ಹೊಟ್ಟೆ ಉಬ್ಬರ ಶುರುವಾಗುತ್ತದೆ. ಇದು ಹೊಟ್ಟೆಯಲ್ಲಿ ವಿಪರೀತ ಕಿರಿಕಿರಿ ಉಂಟುಮಾಡುತ್ತದೆ.

27
ಅಲರ್ಜಿ ಸಮಸ್ಯೆಗಳು

ಕೆಲವರಿಗೆ ಅತಿಯಾಗಿ ಮೊಟ್ಟೆ ತಿನ್ನುವುದರಿಂದ ವಾಕರಿಕೆ ಬರಬಹುದು. ಇದರ ಜೊತೆಗೆ ಸಣ್ಣಪುಟ್ಟ ಚರ್ಮದ ಅಲರ್ಜಿಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

37
ಪೋಷಕಾಂಶಗಳ ಅಸಮತೋಲನ

ಪ್ರೋಟೀನ್ ಬೇಕು ಅಂತ ಬರೀ ಮೊಟ್ಟೆಯನ್ನೇ ಜಾಸ್ತಿ ತಿಂದರೆ ಬೇರೆ ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವುದು ಬಹಳ ಮುಖ್ಯ.

47
ಕೊಲೆಸ್ಟ್ರಾಲ್ ಮತ್ತು ಹೃದಯದ ಆರೋಗ್ಯ

ಹೈ ಕೊಲೆಸ್ಟ್ರಾಲ್ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರು ಮೊಟ್ಟೆ ತಿನ್ನುವುದನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

57
ಅಡುಗೆ ಮಾಡುವ ವಿಧಾನ

ಬೆಣ್ಣೆ, ಚೀಸ್ ಅಥವಾ ಸಂಸ್ಕರಿಸಿದ ಮಾಂಸದ ಜೊತೆ ಮೊಟ್ಟೆಯನ್ನು ಬೇಯಿಸಿ ತಿಂದರೆ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

67
ಎಚ್ಚರವಿರಲಿ

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ, ನಿಮ್ಮ ದೇಹದ ಸ್ಥಿತಿಗೆ ತಕ್ಕಂತೆ ಮಿತವಾಗಿ ತಿಂದರೆ ಮಾತ್ರ ಅದರ ಸಂಪೂರ್ಣ ಲಾಭ ಸಿಗುತ್ತದೆ.

77
ಮೊಟ್ಟೆ ಹೆಚ್ಚು ತಿಂದರೆ ಹೆಚ್ಚು ಲಾಭವಲ್ಲ

ಹಲವರು ಅಂದುಕೊಂಡಂತೆ, ಹೆಚ್ಚು ಹೆಚ್ಚು ಮೊಟ್ಟೆ ತಿಂದರೆ, ದೇಹಕ್ಕೆ ಹೆಚ್ಚು ಹೆಚ್ಚು ಲಾಭ ಅಂತೇನಿಲ್ಲ. ಹಿತಮಿತವಾಗಿ ತಿಂದರಷ್ಟೇ ಜೀರ್ಣವಾಗಿ ದೇಹಕ್ಕೆ ಪೋಷಕಾಂಶ ದೊರೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories