ಕಿಡ್ನಿ ಸ್ಟೋನ್:
ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರು ಕಲೋಂಜಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬಹುದು. ಈ ಮಿಶ್ರಣಕ್ಕೆ ಎರಡು ಟೀ ಚಮಚ ಕಲೋಂಜಿ ಎಣ್ಣೆ ಮತ್ತು ಬಿಸಿ ನೀರು ಸೇರಿಸಿ ಪ್ರತಿದಿನ ಬೆಳಿಗ್ಗೆ ಆಹಾರ ಸೇವನೆಗೆ ಮೊದಲು ಕುಡಿಯಬೇಕು.
ಹೃದ್ರೋಗ ಮತ್ತು ರಕ್ತದೊತ್ತಡ:
ವಿವಿಧ ಕಾರಣಗಳಿಂದ ಬರುವ ಹೃದ್ರೋಗ ಮತ್ತು ರಕ್ತದೊತ್ತಡ ಸಮಸ್ಯೆಗಳನ್ನು ಕಾಳು ಜೀರಿಗೆ ಎಣ್ಣೆ ಕಡಿಮೆ ಮಾಡುತ್ತದೆ. ಈ ಎಣ್ಣೆ ಹೃದಯದ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಟೀ, ಕಾಫಿ ಅಥವಾ ಸೂಪ್ ನಂತಹ ಯಾವುದೇ ಬಿಸಿ ಪಾನೀಯದಲ್ಲಿ ಒಂದು ಟೀ ಚಮಚ ಕಲೋಂಜಿ ಎಣ್ಣೆಯನ್ನು ಬೆರೆಸುವುದು ಒಳ್ಳೆಯದು. ಈ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ದೇಹ ಹಗುರವಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ರಕ್ತದೊತ್ತಡ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.