ವಿಭಿನ್ನ ದಾಸವಾಳ ಟೀ ಪಾಕವಿಧಾನಗಳು:
ದಾಸವಾಳ ಮಸಾಲ ಟೀ: ದಾಸವಾಳ ಹೂಗಳು, ಟೀ ಪುಡಿ, ಚಕ್ಕೆ, ಶುಂಠಿ, ಏಲಕ್ಕಿ ಹಾಕಿ ಟೀ ತಯಾರಿಸಿ ಕುಡಿಯಬಹುದು.
ದಾಸವಾಳ ಅನಾನಸ್ ಟೀ: ದಾಸವಾಳ ಹೂಗಳು, ಟೀ ಪುಡಿ, ಅನಾನಸ್ ಹಣ್ಣು ಇತ್ಯಾದಿಗಳನ್ನು ಸೇರಿಸಿ ಕುದಿಸಿ ಇಳಿಸಿದ ನಂತರ ತೆಂಗಿನಕಾಯಿ ತುರಿ ಹಾಕಿ ಕುಡಿಯಬಹುದು.
ದಾಸವಾಳ ನಿಂಬೆ ಟೀ: ದಾಸವಾಳ ಹೂಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಅದರ ಬಣ್ಣ ಕಡು ನೇರಳೆ ಬಣ್ಣಕ್ಕೆ ತಿರುಗಿದ ನಂತರ ಇಳಿಸಿ ಅದಕ್ಕೆ ನಿಂಬೆ ರಸವನ್ನು ಬೆರೆಸಬೇಕು. ಈಗ ಅದರ ಬಣ್ಣ ದಾಸವಾಳ ಹೂವಿನ ಬಣ್ಣದ್ದಾಗಿರುತ್ತದೆ. ಅದನ್ನು ಕುಡಿಯಬಹುದು.
ಯಾರು ಈ ದಾಸವಾಳ ಟೀ ಕುಡಿಯಬಾರದು?
ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಆರೋಗ್ಯ ತಜ್ಞರನ್ನು ಸಂಪರ್ಕಿಸಿದ ನಂತರ ಕುಡಿಯಬಹುದು. ಅಧಿಕ ರಕ್ತದೊತ್ತಡ ಇರುವವರು ಸೂಕ್ತ ಸಲಹೆಯಿಲ್ಲದೆ ಸೇವಿಸಬಾರದು. ಅಲರ್ಜಿ ಸಮಸ್ಯೆ ಇರುವವರು ಮೊದಲು ಸ್ವಲ್ಪ ಪ್ರಮಾಣದಲ್ಲಿ ಕುಡಿಯಲು ಪ್ರಾರಂಭಿಸಬಹುದು.