ಬಿಸಿಲಿನ ಶಾಖಕ್ಕೆ ತಲೆ ತಿರುಗುತ್ತಿದೆಯೇ? ಕಾರಣ ತಿಳಿಯಿರಿ…

First Published | May 13, 2022, 11:04 AM IST

ಬಿಸಿಲು ಮತ್ತು ಶಾಖದಿಂದಾಗಿ ನಿಮಗೆ ತಲೆತಿರುಗುತ್ತಿದೆಯೇ? ಅಥವಾ ಬೇಸಿಗೆಯಲ್ಲಿ ವ್ಯಾಯಾಮ ಮಾಡಿದ ನಂತರ ನಿಮ್ಮ ತಲೆ ತಿರುಗಲು ಪ್ರಾರಂಭಿಸುತ್ತದೆಯೇ?  ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವು ಹೌದು ಎಂದಾದಲ್ಲಿ, ಚಿಂತಿಸಬೇಡಿ ಏಕೆಂದರೆ ನಿಮ್ಮಂತಹ ಲಕ್ಷಾಂತರ ಜನರು ಈ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಈ ಸಮಸ್ಯೆ ಯಾಕೆ ಕಾಡುತ್ತದೆ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ದರೆ, ಚಿಂತೆ ಬಿಡಿ ನಿಮ್ಮ ಸಂಶಯಕ್ಕೆ ಇಲ್ಲಿದೆ ಉತ್ತರ. 
 

ಬೇಸಿಗೆಯಲ್ಲಿ ತಲೆತಿರುಗುವ(Dizziness) ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ, ಈ ಸಮಸ್ಯೆಯಿಂದ ಹೊರಬರಲು ನಾವು ಕೆಲವು ಪರಿಣಾಮಕಾರಿ ಸಲಹೆಗಳನ್ನು ಇಲ್ಲಿಗೆ ತಂದಿದ್ದೇವೆ. ನಿಮ್ಮ ಈ ಸಮಸ್ಯೆಗಳಿಗೆ ಕಾರಣಗಳು ಮತ್ತು ಪರಿಹಾರಗಳು ಯಾವುವು ಎಂಬುದು ಇಲ್ಲಿವೆ...

ಹೆಚ್ಚು ಬೆವರುವುದು(Sweating)
ಬೇಸಿಗೆ ಕಾಲದಲ್ಲಿ, ತಲೆತಿರುಗುವಿಕೆ ಸಮಸ್ಯೆಯು ಸಾಮಾನ್ಯವಾಗಿ ಹೆಚ್ಚು ಬೆವರುವ ಜನರಲ್ಲಿ ಕಂಡುಬರುತ್ತದೆ. ಈ ಜನರು ಪ್ರಕಾಶಮಾನವಾದ ಬಿಸಿಲಿನಲ್ಲಿ ಹೊರಗೆ ಹೋಗುವಾಗಲೂ ತಲೆಯಲ್ಲಿ ಭಾರದ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದರಿಂದ ತಲೆತಿರುಗುವ ಸಮಸ್ಯೆ ಉಂಟಾಗುತ್ತದೆ. 

Tap to resize

ನಿಮ್ಮ ಈ ಸಮಸ್ಯೆಗಳಿಗೆ ಕಾರಣ ಅತಿಯಾದ ಬೆವರು. ಏಕೆಂದರೆ ಬೆವರುವಿಕೆಯೊಂದಿಗೆ, ಉಪ್ಪು ಮತ್ತು ತೇವಾಂಶವನ್ನು ದೇಹದಿಂದ ತೆಗೆದುಹಾಕಲಾಗುತ್ತದೆ. ಆದ್ದರಿಂದ, ನೀವು ಗರಿಷ್ಠ ಪ್ರಮಾಣದ ನೀರನ್ನು ಕುಡಿಯಬೇಕು ಮತ್ತು ನಿಂಬೆ ನೀರು(Lemon water), ಎಲೆಕ್ಟ್ರೋಪಲ್ ದ್ರಾವಣ, ಎಳನೀರು ಪ್ರಮಾಣವನ್ನು ಹೆಚ್ಚು ಹೆಚ್ಚು ಸೇವಿಸಬೇಕು.
 


ಬಿಪಿ ಕಡಿಮೆ(Low BP) ಇರುವುದು
ಬೇಸಿಗೆಯಲ್ಲಿ ತಲೆತಿರುಗುವಿಕೆಗೆ ಒಂದು ಕಾರಣವೆಂದರೆ ಕಡಿಮೆ ರಕ್ತದೊತ್ತಡ. ಅತಿಯಾದ ಶಾಖದಿಂದಾಗಿ ನೀವು ತಲೆತಿರುಗುವಿಕೆಯನ್ನು ಅನುಭವಿಸುತ್ತಿರುವಾಗ, ನೀವು ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಬೇಕು. ಯಾಕೆಂದರೆ ಬಿಪಿ ಕಡಿಮೆಯಾದಾಗ ತಲೆತಿರುಗುವ ಅನುಭವ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಬಿಪಿ ಚೆಕ್ ಮಾಡಬೇಕು.

 ಬಿಪಿ ಕಡಿಮೆಯಾದಾಗ, ನೀವು ಒಂದು ಲೋಟ ಸಕ್ಕರೆ-ಉಪ್ಪಿನ ದ್ರಾವಣವನ್ನು ಕುಡಿಯಬೇಕು. ಇದಕ್ಕಾಗಿ, ಒಂದು ಲೋಟ ತಾಜಾ ನೀರಿನಲ್ಲಿ ಮೂರು ಟೀಸ್ಪೂನ್ ಸಕ್ಕರೆ(Sugar) ಮತ್ತು ಕಾಲು ಟೀಸ್ಪೂನ್ ಉಪ್ಪನ್ನು ಮಿಶ್ರಣ ಮಾಡಿ. ಸೇವಿಸಬೇಕು. ಅಥವಾ ನಿಂಬೆ ರಸಕ್ಕೆ ನೀರು, ಸಕ್ಕರೆ, ಉಪ್ಪನ್ನು ಬೆರೆಸಿ ಸಹ ಸೇವಿಸಬೇಕು. 

ಹೀಟ್ ಸ್ಟ್ರೋಕ್ (Heat stroke)ಸಹ ಒಂದು ಕಾರಣವಾಗಿರಬಹುದು  
ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ನಿಂದ ತಲೆತಿರುಗುವಿಕೆಯ ಸಮಸ್ಯೆಯೂ ಇದೆ. ನೀವು ತಲೆನೋವು, ಹಸಿವಾಗದಿರುವುದು, ಹೆಚ್ಚು ಬೆವರುವುದು, ದುರ್ಬಲ ಭಾವನೆಯಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಇವು ಹೀಟ್ ಸ್ಟ್ರೋಕ್ ನ ಲಕ್ಷಣಗಳಾಗಿರಬಹುದು. ಈ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಬೇಸಿಗೆಯಲ್ಲಿ ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬಂದರೂ ಸಹ ನೀವು ಅವುಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯ. ಬೇಸಿಗೆಯಲ್ಲಿ ಮುಖ್ಯವಾಗಿ ಹೆಚ್ಚು ದ್ರವ ಆಹರಾ ಸೇವನೆ ಮಾಡುವತ್ತ ಗಮನ ಹರಿಸಬೇಕು. ಇದರಿಂದ ನೀವು ದಿನಪೂರ್ತಿ ಹೈಡ್ರೇಟ್(Hydrate) ಆಗಿರುತ್ತೀರಿ. 

Latest Videos

click me!