1. ಜೇನುತುಪ್ಪ ಮತ್ತು ನಿಂಬೆ ರಸ:
ಸ್ವಲ್ಪ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿ ಸುಮಾರು 10 ನಿಮಿಷ ಬಿಟ್ಟು ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ವಿಧಾನವನ್ನು ನೀವು ವಾರಕ್ಕೆ 2-3 ಬಾರಿ ಮಾಡಿದರೆ ಮೂಗಿನ ಮೇಲಿನ ಕಪ್ಪು ಚುಕ್ಕೆಗಳು ಇದ್ದ ಜಾಗ ಗೊತ್ತಾಗುವುದಿಲ್ಲ.
2. ಅಕ್ಕಿ ಹಿಟ್ಟು ಮತ್ತುಅಲೋವೆರಾ ಜೆಲ್
ಮೂಗಿನ ಮೇಲಿನ ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ಒಂದು ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಅಲೋವೆರಾ ಜೆಲ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಆ ಪೇಸ್ಟ್ ಅನ್ನು ಮೂಗಿಗೆ ಹಚ್ಚಿ ಚೆನ್ನಾಗಿ ಒಣಗಲು ಬಿಡಿ. ನಂತರ ನಿಧಾನವಾಗಿ ಆ ಭಾಗವನ್ನು ಉಜ್ಜಿ ತೆಗೆದುಹಾಕಿ. ಅಕ್ಕಿ ಹಿಟ್ಟು ಚರ್ಮದ ಸಿಪ್ಪೆ ತೆಗೆಯುತ್ತದೆ. ಆದ್ದರಿಂದ ಕಪ್ಪು ಚುಕ್ಕೆಗಳು ಸುಲಭವಾಗಿ ಹೋಗುತ್ತವೆ.