ವ್ಯಾಯಾಮ ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಖಿನ್ನತೆಗೆ ಒಳಗಾದವರು ವ್ಯಾಯಾಮ ಮಾಡುವಾಗ ಬದುಕಿನ ಮೇಲಿನ ನಂಬಿಕೆ ಹೆಚ್ಚಾಗುತ್ತದೆ; ಮನಸ್ಥಿತಿ ಸುಧಾರಿಸುತ್ತದೆ. ಆದರೆ ಚಳಿಗಾಲದಲ್ಲಿ ಬೆಳಿಗ್ಗೆ ವ್ಯಾಯಾಮ ಮಾಡುವುದು ಅನೇಕರಿಗೆ ಕಷ್ಟ. ಕೆಲಸ, ಶಿಕ್ಷಣ ಮುಂತಾದ ಕಾರಣಗಳಿಂದ ಬೆಳಿಗ್ಗೆ ವ್ಯಾಯಾಮಕ್ಕೆ ಸಮಯ ಸಿಗದೆ ಕೆಲವರು ಪರದಾಡುತ್ತಾರೆ. ಬೆಳಿಗ್ಗೆ ವ್ಯಾಯಾಮ ಮಾಡಲು ಸಾಧ್ಯವಾಗದವರು ಸಂಜೆ, ರಾತ್ರಿ ವ್ಯಾಯಾಮ ಮುಂದುವರಿಸುತ್ತಾರೆ. ಇದರಿಂದ ದೇಹಕ್ಕೆ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದನ್ನು ಇಲ್ಲಿ ನೋಡಬಹುದು.