Published : Jan 23, 2025, 10:58 AM ISTUpdated : Jan 23, 2025, 11:40 AM IST
O+ ರಕ್ತದ ಗುಂಪು ಹೊಂದಿರುವ ಜನರು ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ. ಅವರ ಆ ಗುಣವೇ ಅವರನ್ನು ಇತರರಿಗಿಂತ ವಿಭಿನ್ನವಾಗಿ ಕಾಡುವಂತೆ ಮಾಡುತ್ತೆ. ಹಾಗಿದ್ರೆ ಆ ವಿಶೇಷ ಗುಣಗಳು ಯಾವುವು ನೋಡೋಣ ಬನ್ನಿ.
ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ರಕ್ತದ ಗುಂಪು (blood group) ವಿಭಿನ್ನವಾಗಿರುತ್ತದೆ. ವಿಭಿನ್ನ ರಕ್ತದ ಗುಂಪುಗಳಿಗೆ ಅನುಗುಣವಾಗಿ ಜನರಲ್ಲಿ ವಿಭಿನ್ನ ಗುಣಗಳು ಕಂಡುಬರುತ್ತವೆ. ಇವತ್ತು ನಾವು ನಿಮಗೆ O+ ಬ್ಲಡ್ ಗ್ರೂಪ್ ಜನರ ಗುಣ ಸ್ವಭಾವ ಹೇಗಿರುತ್ತೆ ಅನ್ನೋದನ್ನು ಹೇಳ್ತೀವಿ. O+ ಬ್ಲಡ್ ಗ್ರೂಪ್ ಜನರು ಯಾವಾಗಲೂ ಇತರರಿಗಿಂತ ವಿಭಿನ್ನವಾಗಿರುತ್ತಾರೆ.
27
O+ ರಕ್ತದ ಗುಂಪು ಹೊಂದಿರುವ ಜನರ ಜೀರ್ಣಕ್ರಿಯೆ (strong digestion) ತುಂಬಾ ಬಲವಾಗಿರುತ್ತದೆ, ಅವರು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತಾರೆ. ಹಾಗಾಗಿ ಇವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರೋದು ತುಂಬಾನೆ ಕಡಿಮೆ. ಉತ್ತಮ ಆರೋಗ್ಯವನ್ನು ಹೊಂದಿರುವ ಜನರು ಕೂಡ ಆಗಿರ್ತಾರೆ ಇವರು.
37
O+ ರಕ್ತದ ಗುಂಪು (O+ blood group) ಹೊಂದಿರುವ ಜನರು ತುಂಬಾ ಆಕ್ಟೀವ್ ಆಗಿರುತ್ತಾರೆ ಮತ್ತು ಶಕ್ತಿಯುತವಾಗಿರುತ್ತಾರೆ. ಈ ಜನರು ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿರುತ್ತಾರೆ. ಎಂತಹುದೇ ಸಂದರ್ಭ ಬಂದರೂ ಸಹ ಅದನ್ನು ಎದುರಿಸಿ ನಿಲ್ಲೋದಕ್ಕೆ ಇವರು ಸಿದ್ಧರಾಗಿರುತ್ತಾರೆ. ಯಾವುದಕ್ಕೂ ಕುಗ್ಗದ ಜನರು ಇವರು.
47
ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು (cortisol hormone level) ಹೆಚ್ಚಿಸುತ್ತದೆ. ಟೈಪ್-ಎ ರಕ್ತ ಹೊಂದಿರುವ ಜನರು ಹೆಚ್ಚಿನ ಕಾರ್ಟಿಸೋಲ್ ಹೊಂದಿರಬಹುದು. ಆದ್ದರಿಂದ ಒತ್ತಡದ ಸಂದರ್ಭಗಳನ್ನು ಎದುರಿಸಲು ಕಷ್ಟವಾಗುತ್ತೆ.. ಆದರೆ O+ ಹೊಂದಿರುವ ಜನರಲ್ಲಿ ಇದರ ಅಪಾಯ ಕಡಿಮೆ, ಇವರ ಇಮೋಷನಲ್ ಬ್ಯಾಲೆನ್ಸ್ ಚೆನ್ನಾಗಿರುತ್ತೆ, ಇವರು ಬೇಗನೆ ಟೆನ್ಶನ್ ತೆಗೆದುಕೊಳ್ಳೋದಿಲ್ಲ.
57
O+ ರಕ್ತದ ಗುಂಪು ಹೊಂದಿರುವ ಜನರಲ್ಲಿ ನಾಯಕತ್ವ ಗುಣ (leadership quality) ಎದ್ದು ಕಾಣುತ್ತದೆ. ಇವರು ಅಪರಿಮಿತ ಆತ್ಮವಿಶ್ವಾಸ ಹೊಂದಿದ್ದಾರೆ, ಅವರು ತಮ್ಮನ್ನು ತಾವು ನಂಬುತ್ತಾರೆ. ಈ ಕಾರಣದಿಂದಾಗಿ ಅವರು ಯಾವುದೇ ವಿಷಯವನ್ನು ಬೇಗನೆ ಬಿಟ್ಟುಕೊಡುವುದಿಲ್ಲ.
67
Heart Problems in Men
ಇತರ ಬ್ಲಡ್ ಗ್ರೂಪ್ ಜನರಿಗೆ ಹೋಲಿಕೆ ಮಾಡಿದರೆ ರಕ್ತದ ಗುಂಪು O+ ಹೊಂದಿರುವ ಜನರು ಹೃದ್ರೋಗ, ಕೆಲವು ರೀತಿಯ ಕ್ಯಾನ್ಸರ್, ಮಲೇರಿಯಾ ಇತ್ಯಾದಿಗಳ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ, ಆದ್ದರಿಂದ ಅಂತಹ ಜನರ ಜೀವಿತಾವಧಿ ಹೆಚ್ಚಾಗಿರುತ್ತದೆ. ತುಂಬಾನೆ ಆರೋಗ್ಯಕರವಾಗಿರುತ್ತಾರೆ ಇವರು.
77
O+ ರಕ್ತದ ಗುಂಪು ಹೊಂದಿರುವ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಈ ಕಾರಣದಿಂದಾಗಿ ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ. ಅಷ್ಟೇ ಅಲ್ಲ O+ ರಕ್ತದ ಗುಂಪು ಅಂದ್ರೆ ಅವರು ಯೂನಿವರ್ಸಲ್ ಡೋನರ್ (universal donor). ಅಂದ್ರೆ, ಇವರ ರಕ್ತವನ್ನು ಇತರ ಯಾವುದೇ ಬ್ಲಡ್ ಗ್ರೂಪ್ ಜನರಿಗೂ ನೀಡಬಹುದು.