Throat cancer symptoms: ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ವಿಡಿಯೋ ಶೇರ್ ಮಾಡಿರುವ ಡಾ. ಅಮಿತ್ ಚಕ್ರವರ್ತಿ, ಈ ಎರಡು ಗಂಟಲು ಸಂಬಂಧಿತ ಸಮಸ್ಯೆಗಳನ್ನು ನೀವು ಮೂರು ತಿಂಗಳಿಗಿಂತ ಹೆಚ್ಚು ಕಾಲ ಅನುಭವಿಸಿದರೆ ಅದು ಗಂಟಲು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಎಂದು ತಿಳಿಸಿದ್ದಾರೆ.
ಗಂಟಲು ಕ್ಯಾನ್ಸರ್‌ನಲ್ಲಿ ಗಂಟಲಿನಿಂದ ಕ್ಯಾನ್ಸರ್ ಕೋಶಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದರಲ್ಲಿ ಗಂಟಲಿನ ಒಳಗೆ, ಮೂಗಿನ ಹಿಂದೆ ಮತ್ತು ಗಂಟಲಿನ ಹಿಂಭಾಗದಲ್ಲಿ ಅಸಹಜ ಕ್ಯಾನ್ಸರ್ ಕೋಶಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಕ್ಯಾನ್ಸರ್‌ನಲ್ಲಿ ಗಂಟಲು ಅಥವಾ ಗಂಟಲಿನ ಧ್ವನಿಪೆಟ್ಟಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹಲವು ಬಾರಿ ಗಂಟಲು ಕ್ಯಾನ್ಸರ್‌ನ ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅದು ಪತ್ತೆಯಾಗುವ ಹೊತ್ತಿಗೆ ಕ್ಯಾನ್ಸರ್ ವಿವಿಧ ಅಂಗಗಳಿಗೆ ಹರಡಿರುತ್ತದೆ. ಆದ್ದರಿಂದ ಗಂಟಲು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ಅಂದಹಾಗೆ ಕೆಳಕಂಡ ಈ ಎರಡು ಸಮಸ್ಯೆಗಳು ನಿಮ್ಮನ್ನು 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಡುತ್ತಿದ್ದರೆ ಅದು ಗಂಟಲು ಕ್ಯಾನ್ಸರ್ ನ ದೊಡ್ಡ ಸಂಕೇತವಾಗಿರಬಹುದು ಎಂದು ಹೇಳಿದ್ದಾರೆ ತಜ್ಞವೈದ್ಯ ಡಾ.ಅಮಿತ್ ಚಕ್ರವರ್ತಿ.
26
ಡಾ.ಅಮಿತ್ ಚಕ್ರವರ್ತಿ ಹೇಳಿದ್ದೇನು?
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ವಿಡಿಯೋ ಶೇರ್ ಮಾಡಿರುವ ಡಾ. ಅಮಿತ್ ಚಕ್ರವರ್ತಿ, ಈ ಎರಡು ಗಂಟಲು ಸಂಬಂಧಿತ ಸಮಸ್ಯೆಗಳನ್ನು ನೀವು ಮೂರು ತಿಂಗಳಿಗಿಂತ ಹೆಚ್ಚು ಕಾಲ ಅನುಭವಿಸಿದರೆ ಅದು ಗಂಟಲು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಎಂದು ತಿಳಿಸಿದ್ದಾರೆ. ಆದ್ದರಿಂದ ನೀವು ತಕ್ಷಣ ವೈದ್ಯರ ಬಳಿ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ವಿವರಿಸಿದ್ದಾರೆ.
36
ಇವೇ ನೋಡಿ ಆ ಎರಡು ಲಕ್ಷಣಗಳು
1.ಗಂಟಲು ನೋವು ಗಂಟಲಿನಲ್ಲಿ ನೋವು ಇರುತ್ತದೆ. ಇದು ಎಷ್ಟರ ಮಟ್ಟಿಗೆ ಇರುತ್ತದೆಯೆಂದರೆ ಇದರಿಂದ ಆ ವ್ಯಕ್ತಿ ಯಾವಾಗಲೂ ಕಿರಿಕಿರಿ ಅನುಭವಿಸುತ್ತಾನೆ.
2. ನುಂಗಲು ತೊಂದರೆ ಗಂಟಲು ಕ್ಯಾನ್ಸರ್ ಇದ್ದರೆ ಆಹಾರ ನುಂಗಲು ಸಹ ತೊಂದರೆಯಾಗಬಹುದು. ಆಹಾರವನ್ನು ಅಗಿಯುವಾಗ ಮತ್ತು ನುಂಗುವಾಗ ನೋವಿನಿಂದ ಕೂಡಿರುತ್ತದೆ ಮತ್ತು ಅನಾನುಕೂಲಕರವೆನಿಸುತ್ತದೆ.
ಗಂಟಲಿನಲ್ಲಿ ಗಡ್ಡೆ ಗಂಟಲಿನಲ್ಲಿ ಗಡ್ಡೆ ಇರುವಂತೆ ಭಾಸವಾಗುವುದು ಮತ್ತು ಏನೋ ಸಿಲುಕಿಕೊಂಡಂತೆ ಭಾಸವಾಗುವುದು.
ತೂಕ ಇಳಿಕೆ ಯಾವುದೇ ಕಾರಣವಿಲ್ಲದೆ ತೂಕ ಇಳಿಕೆ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
ಕಿವಿ ನೋವು ಗಂಟಲು ಕ್ಯಾನ್ಸರ್ ಕಿವಿ ನೋವಿಗೆ ಕಾರಣವಾಗಬಹುದು. ಕಿವಿಯ ಒಳಭಾಗವು ನೋಯಲು ಪ್ರಾರಂಭಿಸುತ್ತದೆ.
56
ಹೀಗೆಲ್ಲಾ ಆಗುತ್ತೆ
ಗಂಟಲು ಕ್ಯಾನ್ಸರ್ ಬಾಯಿ ತೆರೆಯಲು ತೊಂದರೆ ಉಂಟುಮಾಡಬಹುದು. ನಾಲಿಗೆಯನ್ನು ಚಲಿಸುವಲ್ಲಿ ತೊಂದರೆ ಉಂಟಾಗಬಹುದು. ನಾಲಿಗೆಯ ಮೇಲೆ ಬಿಳಿ ಗುರುತುಗಳು ಕಾಣಿಸಿಕೊಳ್ಳಬಹುದು. ಮೂಗಿನ ರಕ್ತಸ್ರಾವ ಸಂಭವಿಸಬಹುದು. ಗಂಟಲು ನೋವಿನ ಜೊತೆಗೆ ತಲೆನೋವು ಕೂಡ ಉಂಟಾಗಬಹುದು. ಕುತ್ತಿಗೆ ತಿರುಗಿಸುವಲ್ಲಿ ತೊಂದರೆ ಉಂಟಾಗಬಹುದು. ಕತ್ತಿನ ಚರ್ಮ ಬಿಗಿಯಾಗಬಹುದು.
66
ಗುರುತಿಸುವುದು ಹೇಗೆ?
ಗಂಟಲು ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ರಕ್ತ ಪರೀಕ್ಷೆಯನ್ನು ಮಾಡಬಹುದು. ಬಯಾಪ್ಸಿ ನಡೆಸಲಾಗುತ್ತದೆ. ಎಂಡೋಸ್ಕೋಪಿ ನಡೆಸಲಾಗುತ್ತದೆ. ಅಲ್ಟ್ರಾಸೌಂಡ್, ಎಕ್ಸ್-ರೇ, ಎಂಆರ್‌ಐ ಅಥವಾ ಸಿಟಿ ಸ್ಕ್ಯಾನ್ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.