ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿದ್ದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಹಾಗೆ ಊಟ ಮಾಡಿದ ಬಳಿಕವೂ ಎಂದಿಗೂ ಕೆಲವು ಕೆಲಸಗಳನ್ನು ಮಾಡಬಾರದು. ಈ ಅಭ್ಯಾಸಗಳನ್ನು ನೀವು ರೂಢಿಸಿಕೊಂಡಿದ್ದರೆ ಇಂದೇ ಬದಲಿಸಿಕೊಳ್ಳುವುದು ಉತ್ತಮ. ಇಲ್ಲವಾದ್ರೆ ಸಮಸ್ಯೆ ಉಲ್ಭಣಗೊಂಡ್ರೆ ಆಸ್ಪತ್ರೆ ದಾಖಲಾಗೋದು ಗ್ಯಾರಂಟಿ.
26
ಜೀವನಕ್ಕೆ ಊಟ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಕರ ಅಭ್ಯಾಸಗಳನ್ನು ಸಹ ರೂಢಿಸಿಕೊಳ್ಳುವುದು ಪ್ರಮುಖವಾಗುತ್ತದೆ. ಒಳ್ಳೆಯ ಆರೋಗ್ಯಕರ ಅಭ್ಯಾಸಗಳು ನಿಮ್ಮನ್ನು ಸದಾ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತವೆ. ಊಟ ಮಾಡಿದ ನಂತರ ಈ ಮೂರು ಕೆಲಸಗಳನ್ನು ಎಂದಿಗೂ ಮಾಡಬೇಡಿ. ಈ ಅಭ್ಯಾಸಗಳಿಂದ ದೂರವಿದ್ದಷ್ಟು ನೀವು ಆರೋಗ್ಯವಾಗಿರುತ್ತೀರಿ.
36
1.ಊಟದ ನಂತರ ನಿದ್ದೆ ಮಾಡುವುದು
ಕೆಲವರು ಊಟ ಮಾಡಿದ ಮರುಕ್ಷಣವೇ ವಿಶ್ರಾಂತಿ ಹೆಸರಿನಲ್ಲಿ ನಿದ್ದೆಗೆ ಜಾರುತ್ತಾರೆ. ವಿಶೇಷವಾಗಿ ರಾತ್ರಿ ಊಟದ ಬಳಿಕ ಈ ಅಭ್ಯಾಸವನ್ನು ಬಹುತೇಕರು ರೂಢಿಸಿಕೊಂಡಿರುತ್ತಾರೆ. ಹೀಗೆ ಮಾಡೋದರಿಂದ ದೇಹದಲ್ಲಿ ಆಮ್ಲೀಯತೆ ಹಿಮ್ಮುಖವಾಗಿ ಚಲಿಸಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದನ್ನೇ ಅಸಿಡಿಟಿ, ಗ್ಯಾಸ್ಟ್ರಿಕ್ ಎಂದು ಕರೆಯಲಾಗುತ್ತದೆ.
46
ಆಹಾರ ಸೇವನೆ ಮಾಡಿದ ಬಳಿಕ ಮಲಗಿದ್ರೆ ಸೇವಿಸಿರುವ ಆಹಾರ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತದೆ. ಆಹಾರ ಜೀರ್ಣವಾಗದೇ ಫುಡ್ ಪಾಯ್ಸನ್ ಸಹ ಉಂಟಾಗಬಹುದು. ಊಟದ ಬಳಿಕ ಸಣ್ಣ ವಾಕ್ ಮಾಡೋದನ್ನು ರೂಢಿಸಿಕೊಳ್ಳಬೇಕು. ನಿದ್ದೆ ಮತ್ತು ಊಟದ ನಡುವೆ ಕನಿಷ್ಠ ಎರಡು ಗಂಟೆ ಅಂತರ ಇರುವಂತೆ ನೋಡಿಕೊಳ್ಳಬೇಕು.
ಸ್ನಾನದ ಬಳಿಕ ಆಹಾರ ಸೇವನೆ ಮಾಡಬೇಕು. ಕೆಲವರು ಹಸಿವು ಅಂತ ಹೊಟ್ಟೆ ತುಂಬಾ ಊಟ ಮಾಡಿ, ನಂತರ ಸ್ನಾನ ಮಾಡುತ್ತಾರೆ. ವೈದ್ಯರ ಪ್ರಕಾರ, ಹೀಗೆ ಮಾಡೋದರಿಂದ ರಕ್ತಪರಿಚಲನೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ತಿಂದ ಆಹಾರ ಜೀರ್ಣವಾಗಬೇಕಾದ್ರೆ ರಕ್ತಪರಿಚಲನೆ ಸರಿಯಾಗಿರಬೇಕು. ಸ್ನಾನ ಮಾಡೋದರಿಂದ ದೇಹದಲ್ಲಿನ ತಾಪಮಾನ ವ್ಯತ್ಯಾಸ ಉಂಟಾಗಿ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕೆಲವರು ಊಟದ ಬಳಿಕ ಅಧಿಕವಾಗಿ ನೀರು ಕುಡಿಯುತ್ತಾರೆ. ಈ ಅಭ್ಯಾಸವನ್ನು ಸಹ ತಪ್ಪಿಸಬೇಕು. ಊಟದ ಬಳಿಕ ಹೆಚ್ಚು ನೀರು ಕುಡಿಯೋದರಿಂದ ಹೊಟ್ಟೆ ನೋವು, ಸೆಳೆತದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆಹಾರ ಸೇವಿಸಿದ ನಂತರ ನೀರು ಕುಡಿಯೋದರಿಂದ ಟಾಕ್ಸಿನ್ ಜೊತೆಯಲ್ಲಿ ಇನ್ಸುಲಿನ್ ಪ್ರಮಾಣ ಸಹ ಹೆಚ್ಚಳವಾಗುತ್ತದೆ. ಈ ಬೆಳವಣಿಗೆ ತುಂಬಾ ಅಪಾಯಕಾರಿಯಾಗಿರುತ್ತದೆ.