ನಿದ್ರೆ ನರವೈಜ್ಞಾನಿಕ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಡಾ ಚಂದನಾ ಆರ್. ಗೌಡ ಒಂದು ಖಾಸಗಿ ವಾಹಿನಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ದೀರ್ಘಕಾಲದ ನಿದ್ದೆಯ ಕೊರತೆಯಿಂದಾಗಿ ಹಾರ್ಮೋನುಗಳ ಮಟ್ಟ ಹೆಚ್ಚಿಸಲು ಕಾರಣವಾಗುತ್ತದೆ, ಇದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ, ಉರಿಯೂತವನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ಚಯಾಪಚಯ ಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಎಲ್ಲವುಗಳಿಂದ ಕೊನೆಗೆ ಮಿನಿ-ಸ್ಟ್ರೋಕ್‌ಗಳು ಅನಂತರದ ಸ್ಟ್ರೋಕ್‌ಗಳ ಅಪಾಯವನ್ನು ಹೆಚ್ಚಿಸಬಹುದು.
ನಿದ್ದೆ ಏಕೆ ಮುಖ್ಯ ಎಂದರೆ..
ತಜ್ಞರ ಪ್ರಕಾರ, ಉತ್ತಮ ನಿದ್ರೆ ದೇಹವನ್ನು ವಿಶ್ರಾಂತಿಯಿಂದ ಇಡುತ್ತೆ, ರಕ್ತನಾಳಗಳನ್ನು ಸರಿಪಡಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನವೂ ನಿದ್ದೆ ಸರಿಯಾಗಿ ಮಾಡದಿದ್ರೆ ಅಥವಾ ತಡರಾತ್ರಿ ಮಲಗುವುದನ್ನೇ ರೂಡಿಸಿಕೊಂಡಿದ್ರೆ ದೇಹದ ವ್ಯವಸ್ಥೆಗಳು ಪರಿಣಾಮ ಬೀರುತ್ತವೆ. ರಾಷ್ಟ್ರೀಯ ಹೃದಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆಯ ಸಂಶೋಧನೆಯು ದೀರ್ಘಾವಧಿಯ ನಿದ್ರಾಹೀನತೆಯು ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹದ ಜೊತೆಗೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ,
ಕೆಲವರು ಸೇಡು ತೀರಿಸಿಕೊಳ್ಳಲು ಮಲಗುವುದಿಲ್ಲ!
ಇತ್ತೀಚಿನ ವರ್ಷಗಳಲ್ಲಿ ಒಂದು ಟ್ರೆಂಡಿಂಗ್ Quote ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಸೇಡು ತೀರಿಸಿಕೊಳ್ಳೋವರೆಗೆ ನಿದ್ರಿಸಬೇಡ, ಕನಸು ನನಸಾಗುವವರೆಗೆ ನಿದ್ರಿಸಬೇಡ ಅನ್ನೋದು ಈ ರೀತಿ ಸೇಡು, ಕನಸುಗಳ ಬೆನ್ನಟ್ಟಲು ನಿದ್ದೆ ಮಾಡದಿರುವುದು ಅಪಾಯವೇ ಹೆಚ್ಚು. ದೇಹಕ್ಕೆ ವಿಶ್ರಾಂತಿ ಬೇಕಾದಾಗ ಆಕಳಿಕೆ ಬರುತ್ತೆ. ಮಲಗಬೇಕಕು. ಆದ್ರೆ ಉದ್ದೇಶಪೂರ್ವಕವಾಗಿ ಎಚ್ಚರವಿದ್ದು ತಡವಾಗಿ ಮಲಗುವ ಅಭ್ಯಾಸ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.
ಮಿನಿಸ್ಟ್ರೋಕ್‌ನ ದೊಡ್ಡ ಸಮಸ್ಯೆ ಎಂದರೆ
ಮಿನಿ-ಸ್ಟ್ರೋಕ್‌ಗಳ ದೊಡ್ಡ ಸಮಸ್ಯೆ ಎಂದರೆ ಅವುಗಳ ಲಕ್ಷಣಗಳನ್ನು ಹೆಚ್ಚಾಗಿ ಕಡೆಗಣಿಸೋದು! ದೇಹದ ಒಂದು ಭಾಗದಲ್ಲಿ ಹಠಾತ್ ದೌರ್ಬಲ್ಯ ಅಥವಾ ಮರಗಟ್ಟುವಿಕೆ, ಮಾತನಾಡಲು ತೊಂದರೆ, ತಲೆತಿರುಗುವಿಕೆ, ದೃಷ್ಟಿ ಮಂದವಾಗುವುದು, ಮುಖದ ಒಂದು ಬದಿ ಜೋತು ಬೀಳುವುದು ಅಥವಾ ಕೆಲವು ನಿಮಿಷಗಳ ಕಾಲ ಕನ್ಫ್ಯೂಸ್‌ನಲ್ಲಿರೋದು ಇವೆಲ್ಲ ಆರಂಭಿಕ ಲಕ್ಷಣಗಳಾಗಿರಬಹುದು. ಅಂತಹ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಹೇಳುತ್ತಾರೆ.