Health tips: ಅಧಿಕ ರಕ್ತದೊತ್ತಡದ ರೋಗಿಗಳು ಈ ವ್ಯಾಯಾಮ ಮಾಡಬಾರದು

First Published May 18, 2023, 4:04 PM IST

ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಅಧಿಕ ರಕ್ತದೊತ್ತಡದ ರೋಗಿಯಾಗಿದ್ದರೆ, ಸದೃಢವಾಗಿರಲು ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಒಂದು ದೈಹಿಕ ಚಟುವಟಿಕೆ, ಆದ್ದರಿಂದ ಬಿಪಿ ರೋಗಿಗಳು ಯಾವ ರೀತಿಯ ವ್ಯಾಯಾಮ ಮಾಡಬಾರದು ಅನ್ನೋದನ್ನು ತಿಳಿಯಿರಿ.
 

ಅನಾರೋಗ್ಯಕರ ಮತ್ತು ಒತ್ತಡದ ಜೀವನಶೈಲಿಯಿಂದಾಗಿ, ಬೊಜ್ಜು, ಮಧುಮೇಹ ಮತ್ತು ರಕ್ತದೊತ್ತಡದಂತಹ (Hypertension) ಸಮಸ್ಯೆ ಇತ್ತಿಚಿಗೆ ತುಂಬಾ ಸಾಮಾನ್ಯ. ಇದರಿಂದ ಹೆಚ್ಚಿನ ಜನರು ಸಮಸ್ಯೆ ಅನುಭವಿಸ್ತಿದ್ದಾರೆ. ಈ ಸಮಸ್ಯೆ ಇರೋರು ಏನನ್ನು ಮಾಡಬಾರದು ತಿಳಿಯೋಣ. 

ನಮ್ಮ ರಕ್ತದ ಹರಿವು ಅಥವಾ ಒತ್ತಡದ ಮಟ್ಟ  (blood level)140/90 ಮೀರಲು ಪ್ರಾರಂಭಿಸಿದಾಗ, ಅದು ಅಪಾಯದ ಸಂಕೇತವಾಗಿದೆ ಮತ್ತು ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡದಿಂದಾಗಿ, ರಕ್ತನಾಳಗಳಲ್ಲಿನ ಒತ್ತಡದಿಂದಾಗಿ, ಅವುಗಳ ಗೋಡೆಗೆ ಹಾನಿಯಾಗುತ್ತದೆ ಮತ್ತು ಅವು ತಡೆಗಳನ್ನು ಪಡೆಯಲು ಪ್ರಾರಂಭಿಸುತ್ತವೆ.

ಅಧಿಕ ರಕ್ತದೊತ್ತಡಕ್ಕೆ ಅನೇಕ ಕಾರಣಗಳಿರಬಹುದು, ಆದರೆ ವೈದ್ಯರು ಉದ್ವೇಗ, ಒತ್ತಡ, ಕೋಪ, ಅನಾರೋಗ್ಯಕರ ಜೀವನಶೈಲಿ (unhealthy lifestyle), ಆಲ್ಕೋಹಾಲ್ ಮತ್ತು ಸಿಗರೇಟು ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ.. ಆಹಾರದಲ್ಲಿನ ಹೆಚ್ಚುವರಿ ಉಪ್ಪು ರಕ್ತದೊತ್ತಡ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಪರಿಸ್ಥಿತಿಯನ್ನು ತಪ್ಪಿಸಲು, ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. 

ರಕ್ತದೊತ್ತಡ (Blood Pressure) ನಿಯಂತ್ರಿಸಲು ಪ್ರತಿದಿನ ಕೆಲವು ನಿಮಿಷಗಳನ್ನು ನಿಮಗಾಗಿ ಮೀಸಲಿಟ್ಟು ವ್ಯಾಯಾಮ (exercise) ಮಾಡಿ. ಆದರೆ ಸದೃಢವಾಗಿ ಮತ್ತು ಸಕ್ರಿಯವಾಗಿರಲು ಎಲ್ಲಾ ರೀತಿಯ ವ್ಯಾಯಾಮ ಪ್ರಾರಂಭಿಸಬೇಡಿ., ಏಕೆಂದರೆ ಕೆಲವು ವ್ಯಾಯಾಮಗಳು ನಿಮ್ಮ ಪರಿಸ್ಥಿತಿ ಹೆಚ್ಚು ಅಪಾಯ ಆಗಿರಬಹುದು. ಆದ್ದರಿಂದ ನೀವು ಯಾವ ರೀತಿಯ ವ್ಯಾಯಾಮವನ್ನು ಮಾಡಬೇಕಾಗಿಲ್ಲ ಎಂದು ತಿಳಿದುಕೊಳ್ಳಿ.

ವೇಗವಾಗಿ ನಡೆಯುವುದು (Running)
ಓಟವನ್ನು ಆರೋಗ್ಯಕ್ಕೆ ಪರಿಣಾಮಕಾರಿ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ, ಆದರೆ ಅಧಿಕ ರಕ್ತದೊತ್ತಡ ಅಥವಾ ಹೈಬಿಪಿ ಹೊಂದಿರುವ ರೋಗಿಗಳು ಇದನ್ನು ಮಾಡಬಾರದು. ವೇಗವಾಗಿ ಓಡುವುದು ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಡೆಡ್ ಲಿಫ್ಟ್
ಡೆಡ್ ಲಿಫ್ಟ್ ನಲ್ಲಿ, (Dead lift) ನೆಲದಿಂದ ತೂಕ ಎತ್ತುವ ಮೂಲಕ ನೀವು ನಿಮ್ಮ ಶಕ್ತಿಗೆ ಸವಾಲು ಹಾಕುತ್ತೀರಿ, ಆದರೆ ಅದನ್ನು ಮಾಡುವುದು ಸಾಕಷ್ಟು ಅಪಾಯಕಾರಿಯಾಗಿದೆ. ಅಧಿಕ ರಕ್ತದೊತ್ತಡದ ರೋಗಿಗಳು ಇದನ್ನು ಮಾಡಬಾರದು.

ಹೆಚ್ಚಿನ ಸಾಮರ್ಥ್ಯದ ವ್ಯಾಯಾಮವನ್ನು ತಪ್ಪಿಸಿ
ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುವ ಯಾವುದೇ ವ್ಯಾಯಾಮಗಳನ್ನು ತಪ್ಪಿಸಲು ನೀವು ಪ್ರಯತ್ನಿಸಬೇಕು, ಉದಾಹರಣೆಗೆ ತೂಕ ಎತ್ತುವುದು ಮತ್ತು ಬೆಂಚ್ ಪ್ರೆಸ್ ಗಳು ಇತ್ಯಾದಿ. ಇದರಿಂದ ಬ್ಲಡ್ ಪ್ರೆಶರ್ ಇದ್ದಕ್ಕಿದ್ದಂತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. 
 

ತೂಕ ಎತ್ತುವಿಕೆ (Weight lift)
ಅಧಿಕ ರಕ್ತದೊತ್ತಡದ ರೋಗಿಗಳು ಅಧಿಕ ತೂಕ ಎತ್ತುವುದನ್ನು ತಪ್ಪಿಸಬೇಕು. ಇದನ್ನು ಮಾಡುವುದರಿಂದ ಅಪಾಯವೂ ಹೆಚ್ಚಾಗುತ್ತದೆ. ಇದರಿಂದ ರಕ್ತದ ಒತ್ತಡವು ಹೆಚ್ಚಾಗಿ ಹಲವಾರು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. 

ಬಾರ್ ಬೆಲ್ ಸ್ಕ್ವಾಟ್
ಬಲವನ್ನು ಹೆಚ್ಚಿಸಲು ಬಾರ್ಬೆಲ್ ಸ್ಕ್ವಾಟ್ ವ್ಯಾಯಾಮವನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಆದರೆ ಇದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಸರಿಯಾಗಿಲ್ಲ. ಇದರಿಂದ ನಿಮಗೆ ಲಾಭವಾಗುವ ಬದಲು ಅಪಾಯ ಹೆಚ್ಚು. 

click me!