ತೂಕ ಇಳಿಸಿ, ಮಸಲ್ ಬಿಲ್ಡ್ ಮಾಡಲು ಇಲ್ಲಿದೆ ಸೂಪರ್ ಫಾಸ್ಟ್ ಟಿಪ್ಸ್

First Published May 17, 2023, 4:37 PM IST

ತೂಕ ಇಳಿಸಿಕೊಳ್ಳಲು ಮತ್ತು ಮಸಲ್ ಬಿಲ್ಡ್ ಮಾಡಲು ನೀವು ಜಿಮ್‌ಗೆ ಸೇರಲು ಯೋಚಿಸುತ್ತಿದ್ದರೆ, ಮೊದಲು ಈ ಸಲಹೆಗಳನ್ನು ಪಾಲಿಸಿ. ಇದರ ಸಹಾಯದಿಂದ ನೀವು ಮನೆಯಲ್ಲಿ ಸುಲಭವಾಗಿ ಗುರಿ ಸಾಧಿಸಬಹುದು.

ಕೊಬ್ಬು ಮತ್ತು ಸ್ನಾಯುಗಳು (fat and muscles) ಮಾನವ ದೇಹದಲ್ಲಿನ ಎರಡು ರೀತಿಯ ಅಂಗಾಂಶಗಳಾಗಿವೆ, ಇದು ಆರೋಗ್ಯಕರ ದೇಹದ ಚಯಾಪಚಯ ಮತ್ತು ಸರಿಯಾದ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಯುಗದಲ್ಲಿ, ಹೆಚ್ಚಿನ ಜನರು ಸ್ಥೂಲಕಾಯತೆಯಿಂದ ತೊಂದರೆಗೀಡಾಗಿದ್ದಾರೆ, ಆದರೆ ಕೆಲವರು ಮಸಲ್ ಬಿಲ್ಡ್ ಮಾಡಲು ಜಿಮ್ ಗೆ ಹಣ ಖರ್ಚು ಮಾಡ್ತಾರೆ. 

ಆದರೆ ಈ ರೀತಿ ದುಡ್ಡು ವೇಸ್ಟ್ ಮಾಡೋದು ಬಿಡಿ, ಮನೆಯ ಕೆಲವು ವಿಷಯಗಳನ್ನು ನೋಡಿಕೊಳ್ಳುವ ಮೂಲಕ ನೀವು ಈ ಎರಡೂ ವಿಷಯಗಳನ್ನು ಸಾಧಿಸಬಹುದು. ಈ ಲೇಖನದಲ್ಲಿ, ತೂಕ ಕಳೆದುಕೊಳ್ಳುವುದು ಮತ್ತು ಸ್ನಾಯುಗಳನ್ನು ಹೇಗೆ ಬಿಲ್ಡ್ (muscles build) ಮಾಡೋದು ಎಂಬುದರ ಬಗ್ಗೆ ತಿಳಿಯೋಣ.

ಫೈಬರ್ ಭರಿತ ಆಹಾರ ಸೇವಿಸಿ (fiber food)
ಫೈಬರ್ ಭರಿತ ಆಹಾರಗಳ ಸೇವನೆಯು ನಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದ ಸಕ್ಕರೆಯನ್ನು ಹೆಚ್ಚಿಸುತ್ತದೆ. ಆಹಾರದ ನಿಧಾನ ಜೀರ್ಣಕ್ರಿಯೆಯಿಂದಾಗಿ, ಆಗಾಗ್ಗೆ ಹಸಿವಾಗೋದನ್ನು ಕಂಟ್ರೋಲ್ ಮಾಡುತ್ತೆ, ಇದರಿಂದ ಅನಗತ್ಯವಾಗಿ ತಿನ್ನೋದನ್ನ ತಪ್ಪಿಸಬಹುದು

ನೀವು ಪದೇ ಪದೇ ಆಹಾರ ಸೇವಿಸದೇ ಇದ್ರೆ, ನಿಮ್ಮ ತೂಕ ಇಳಿಯುವ ಪ್ರಕ್ರಿಯೆ ಸುಲಭವಾಗುತ್ತೆ. ಅಂದಹಾಗೆ, ಫೈಬರ್ ಸಮೃದ್ಧ ಆಹಾರವನ್ನು ತೆಗೆದುಕೊಳ್ಳುವುದು ಸ್ನಾಯುಗಳ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ, ಆದರೆ ಅದರ ಪರಿಣಾಮವು ಒಟ್ಟಾರೆ ದೇಹದ ಮೇಲೆ ಕಂಡುಬರುತ್ತದೆ.

ಸ್ವಲ್ಪ ಸ್ವಲ್ಪ ಆಹಾರ ತೆಗೆದುಕೊಳ್ಳೋದು ಉತ್ತಮ
ತೂಕ ಇಳಿಸಿಕೊಳ್ಳಲು ಡಯಟ್ ಮಾಡುವ ಬದಲು, ದಿನಕ್ಕೆ ಸಣ್ಣ ಊಟವನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ತೂಕವನ್ನು ಕಡಿಮೆ (weight lose) ಮಾಡಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಒಂದೇ ಬಾರಿ ಹೆಚ್ಚಿನ ಆಹಾರ ಸೇವಿಸುವ ಬದಲು,  ಪ್ರತಿ ಮೂರು ಗಂಟೆಗಳಿಗೊಮ್ಮೆ ಆರೋಗ್ಯಕರ ಕಾರ್ಬ್ಸ್, ಪ್ರೋಟೀನ್ ಮತ್ತು ಕೊಬ್ಬು ಭರಿತ ಆಹಾರಗಳನ್ನು ಸೇವಿಸಿ. ತೂಕ ನಷ್ಟದೊಂದಿಗೆ ಸ್ನಾಯುಗಳನ್ನು ನಿರ್ಮಿಸಲು ಪ್ರೋಟೀನ್ ಪ್ರಮುಖ ಅಂಶವಾಗಿದೆ. 

ಸಸ್ಯ ಆಧಾರಿತ ಪ್ರೋಟೀನ್ ಸೇವಿಸಿ (plant based food)
ಸಸ್ಯ ಆಧಾರಿತ ಪ್ರೋಟೀನ್ ಸಮೃದ್ಧ ಆಹಾರಗಳು ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸುವುದರ ಜೊತೆಗೆ ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿ. ಆದ್ದರಿಂದ ಈ ಪ್ರೋಟೀನ್ ಗಾಗಿ, ದ್ವಿದಳ ಧಾನ್ಯಗಳು (ಬೀನ್ಸ್, ಕಡಲೆ), ಸೋಯಾ ಉತ್ಪನ್ನಗಳು (ಟೋಫು, ಟೆಂಪೆ, ಸೋಯಾ ಹಾಲು), ಕ್ವಿನೋವಾ, ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

click me!