
ನಮ್ಮ ಶರೀರಕ್ಕೆ ಬೇಕಾದ ವಿಶ್ರಾಂತಿ ಕೊಡೋದು ನಿದ್ರೆ ಮಾತ್ರ. ಆದ್ರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಬೇರೆ ಬೇರೆ ಕೆಲಸಗಳಿಂದ ನಿದ್ರೆಗೆ ಸರಿಯಾದ ಪ್ರಾಮುಖ್ಯತೆ ಕೊಡ್ತಿಲ್ಲ. ಸರಿಯಾಗಿ ನಿದ್ದೆ ಮಾಡದೇ ಇರೋದ್ರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತೆ. ಮುಖ್ಯವಾಗಿ ಇದು ಶರೀರದ ತೂಕ ಹೆಚ್ಚಿಸುತ್ತೆ ಅಂತ ಸಂಶೋಧನೆಗಳು ಹೇಳ್ತವೆ.
ನಾವು ತಿನ್ನುವ ಆಹಾರ ನಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಿದ್ರೆ ಹೇಗೆ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅನುಮಾನ ನಿಮಗೆ ಬರಬಹುದು. ಆದರೆ, ಇದು ನಿಜ. ನಿದ್ರೆ ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮ, ತೂಕ ಹೆಚ್ಚಳದ ಜೊತೆ ಇರುವ ಸಂಬಂಧ ವೈಜ್ಞಾನಿಕವಾಗಿ ಸಾಬೀತಾಗಿದೆ.
ನಿದ್ರೆ ಕಡಿಮೆ ಆದಾಗ ನಮ್ಮ ಶರೀರದಲ್ಲಿ ಕೆಲವು ಮುಖ್ಯ ಹಾರ್ಮೋನುಗಳ ಸಮತೋಲನ ಹಾಳಾಗುತ್ತೆ, ಮುಖ್ಯವಾಗಿ ಹಸಿವು ಮತ್ತು ತೃಪ್ತಿ ನಿಯಂತ್ರಿಸುವ ಲೆಪ್ಟಿನ್, ಘ್ರೆಲಿನ್ ಹಾರ್ಮೋನುಗಳ ಮಟ್ಟ ಬದಲಾಗುತ್ತೆ. ಲೆಪ್ಟಿನ್ ಹಾರ್ಮೋನ್ ತಿಂದ ಮೇಲೆ ತೃಪ್ತಿ ಅಂತ ಮೆದುಳಿಗೆ ಸೂಚನೆ ಕೊಡುತ್ತೆ. ಅದೇ ರೀತಿ ಘ್ರೆಲಿನ್ ಹಸಿವು ಆಗಿದೆ ಅಂತ ಸೂಚನೆ ಕೊಡುತ್ತೆ. ನಿದ್ರೆ ಕಡಿಮೆ ಆದ್ರೆ ಲೆಪ್ಟಿನ್ ಮಟ್ಟ ಕಡಿಮೆ ಆಗುತ್ತೆ, ಘ್ರೆಲಿನ್ ಮಟ್ಟ ಜಾಸ್ತಿ ಆಗುತ್ತೆ. ಈ ಸ್ಥಿತಿಯಲ್ಲಿ ಶರೀರಕ್ಕೆ ಅವಶ್ಯಕತೆ ಇಲ್ಲದಿದ್ರೂ ತಿನ್ನಬೇಕು ಅನ್ನೋ ಆಸೆ ಆಗುತ್ತೆ. ಕೊನೆಗೆ ಜಾಸ್ತಿ ತಿಂತೀವಿ.. ಕೊನೆಗೆ ತೂಕ ಹೆಚ್ಚುತ್ತೆ.
ಇಷ್ಟೇ ಅಲ್ಲ, ನಿದ್ರೆ ಕಡಿಮೆ ಆದಾಗ ಶರೀರದಲ್ಲಿ ಕಾರ್ಟಿಸೋಲ್ ಅನ್ನೋ ಒತ್ತಡದ ಹಾರ್ಮೋನ್ ಮಟ್ಟ ಜಾಸ್ತಿ ಆಗುತ್ತೆ. ಕಾರ್ಟಿಸೋಲ್ ಜಾಸ್ತಿ ಆದಾಗ ಇದೂ ಕೂಡ ತೂಕ ಹೆಚ್ಚಳಕ್ಕೆ ಕಾರಣ ಆಗುತ್ತೆ. ಇದರಿಂದ ಶರೀರದಲ್ಲಿ ಕೊಬ್ಬು ಕೂಡ ಜಾಸ್ತಿ ಆಗುತ್ತೆ. ಹಾಗೇ ನಿದ್ರಾಹೀನತೆ ಮೆಟಬಾಲಿಸಂ ನಿಧಾನ ಮಾಡುತ್ತೆ. ಇದರಿಂದ ತಿಂದ ಆಹಾರ ಬೇಗ ಜೀರ್ಣ ಆಗದೆ, ಶರೀರದಲ್ಲಿ ಕೊಬ್ಬಾಗಿ ಉಳಿದು ತೂಕ ಹೆಚ್ಚಿಸುತ್ತೆ.
ಇನ್ನು, ನಿದ್ರೆ ಕಡಿಮೆ ಆದ್ರೆ ಶರೀರದಲ್ಲಿ ಶಕ್ತಿ ಮಟ್ಟ ಕಡಿಮೆ ಆಗುತ್ತೆ. ಹಾಗಾಗಿ ವ್ಯಕ್ತಿಗೆ ಆಯಾಸ ಜಾಸ್ತಿ ಅನಿಸುತ್ತೆ. ಈ ಕಾರಣದಿಂದ ವ್ಯಕ್ತಿ ದಿನಾ ಮಾಡುವ ದೈಹಿಕ ಶ್ರಮ ಕಡಿಮೆ ಆಗುತ್ತೆ. ಉದಾಹರಣೆಗೆ, ವ್ಯಾಯಾಮ ಮಾಡಬೇಕು ಅನ್ನೋ ಆಸಕ್ತಿ ಇರಲ್ಲ. ದಿನಾ ಮಾಡಬೇಕಾದ ಕೆಲಸಗಳು ಕೂಡ ನಿಧಾನ ಆಗುತ್ತೆ. ಶರೀರದ calorie expenditure ಕಡಿಮೆ ಆಗುತ್ತೆ. ಇದರಿಂದ ಶರೀರದಲ್ಲಿ ಕ್ಯಾಲರಿಗಳು ಖರ್ಚು ಆಗಲ್ಲ. ಕ್ಯಾಲರಿಗಳು ಖರ್ಚು ಆಗದಿದ್ರೂ ತೂಕ ಹೆಚ್ಚುತ್ತೆ.
ಅಷ್ಟೇ ಅಲ್ಲ..ನಿದ್ರೆ ಕಡಿಮೆ ಮಾಡುವವರಿಗೆ ಹಸಿವು ಜಾಸ್ತಿ ಆಗ್ತಾ ಇರುತ್ತೆ. ಅದೂ ಜಂಕ್ ಫುಡ್ ಕಡೆ ಮನಸ್ಸು ಹೋಗ್ತಾ ಇರುತ್ತೆ. ಪಿಜ್ಜಾ, ಬರ್ಗರ್, ಚಾಕಲೇಟ್ ತರ ಅತಿ ಹೆಚ್ಚು ಕ್ಯಾಲರಿ ಇರುವ processed foods ಕಡೆ ಆಕರ್ಷಣೆ ಜಾಸ್ತಿ ಆಗುತ್ತೆ. ಇವುಗಳನ್ನ ತಿಂದ್ರೆ ತೂಕ ಹೆಚ್ಚುವ ಸಾಧ್ಯತೆ ಇರುತ್ತೆ. ಹಾಗಾಗಿ, ನಿದ್ರೆ ಸರಿಯಾಗಿ ಮಾಡದಿದ್ರೆ ಆಯಾಸ ಮಾತ್ರ ಅಲ್ಲ.. ತೂಕ ಹೆಚ್ಚುವ ಸಾಧ್ಯತೆ ಕೂಡ ಇರುತ್ತೆ. ಇದನ್ನೇ ರಾಷ್ಟ್ರೀಯ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
ಶರೀರದ ತೂಕ ನಿಯಂತ್ರಣದಲ್ಲಿರಬೇಕು, ನಾವು ಆರೋಗ್ಯವಾಗಿರಬೇಕು ಅಂದ್ರೆ.. ದಿನಕ್ಕೆ ಕನಿಷ್ಠ 7 ರಿಂದ 9 ಗಂಟೆ ನಿದ್ರೆ ಬೇಕು ಅಂತ ಆರೋಗ್ಯ ತಜ್ಞರು ಹೇಳ್ತಾರೆ. ಇದು ಶರೀರದ ಹಾರ್ಮೋನುಗಳ ಸಮತೋಲನ ಕಾಪಾಡುತ್ತೆ, ಮೆಟಬಾಲಿಸಂ ಸಹಜವಾಗಿರಲು ಸಹಾಯ ಮಾಡುತ್ತೆ. ಹಸಿವಿನ ಮೇಲೆ ನಿಯಂತ್ರಣ ಇಡುತ್ತೆ. ಮುಖ್ಯವಾಗಿ ರಾತ್ರಿ 10 ರಿಂದ ಬೆಳಿಗ್ಗೆ 5–6 ಗಂಟೆವರೆಗೆ ನಿದ್ರೆ ಮಾಡೋದ್ರಿಂದ ಹಾರ್ಮೋನುಗಳ ಬಿಡುಗಡೆ ಸರಿಯಾಗಿ ಆಗುತ್ತೆ. ಇದು ಶರೀರಕ್ಕೆ ಸಹಜವಾದ ರೀಚಾರ್ಜಿಂಗ್ ಸಿಸ್ಟಮ್ ತರ ಕೆಲಸ ಮಾಡುತ್ತೆ.
ಒಟ್ಟಾರೆ, ತೂಕ ಕಡಿಮೆ ಮಾಡ್ಕೊಳ್ಳೋಕೆ ಅಥವಾ ನಿಯಂತ್ರಣ ಮಾಡ್ಕೊಳ್ಳೋಕೆ ತಿನ್ನುವ ಆಹಾರ, ವ್ಯಾಯಾಮ ಮಾತ್ರ ಅಲ್ಲ, ನಿದ್ರೆಗೂ ಸರಿಯಾದ ಪ್ರಾಮುಖ್ಯತೆ ಕೊಡಬೇಕು. ಆರೋಗ್ಯಕರ ಜೀವನಶೈಲಿ ಅನ್ನೋದು ಸರಿಯಾದ ನಿದ್ರೆಯಿಂದಲೇ ಶುರು ಆಗುತ್ತೆ. ಹಾಗಾಗಿ ಪ್ರತಿ ದಿನ ನಿಗದಿತ ಸಮಯಕ್ಕೆ ನಿದ್ರೆ ಮಾಡಿ, ಕನಿಷ್ಠ 7–8 ಗಂಟೆ ನಿದ್ರೆ ಮಾಡಿದ್ರೆ.. ಶರೀರದ ತೂಕ ನಿಯಂತ್ರಿಸೋದಷ್ಟೇ ಅಲ್ಲ, ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು.