ಕ್ಯಾಲ್ಸಿಯಂ(Calcium) ರಕ್ತ ಹೆಪ್ಪುಗಟ್ಟುವಿಕೆ, ಸ್ನಾಯು ಸಂಕೋಚನ, ಸಾಮಾನ್ಯ ಹೃದಯ ಮತ್ತು ನರಗಳ ಕಾರ್ಯಗಳನ್ನು ನಿರ್ವಹಿಸುತ್ತೆ. ಇಮ್ಯುನೋಮೋಡ್ಯುಲೇಶನ್ ನಂತಹ ಅನೇಕ ಶಾರೀರಿಕ ಕಾರ್ಯಗಳಲ್ಲಿ ಭಾಗವಹಿಸುತ್ತೆ. ಈ ಖನಿಜದ ಕೊರತೆಯು ಬಹುತೇಕ ಎಲ್ಲಾ ಅಂಗಗಳ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಬಹುದು ಮತ್ತು ಮಕ್ಕಳಲ್ಲಿ ರಿಕೆಟ್ಸ್ ನಂತಹ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ಅಂಬೆಗಾಲಿಡುವ ಮಕ್ಕಳ ದೇಹಕ್ಕೆ ಕ್ಯಾಲ್ಸಿಯಂ ಪೂರೈಸಲು ಯಾವ ಆಹಾರಗಳನ್ನು ನೀಡಬಹುದು ಎಂದು ಇಲ್ಲಿ ತಿಳಿದುಕೊಳ್ಳೋಣ.
ಸೋಯಾ ಹಾಲು(Soya milk)
ಸೋಯಾ ಹಾಲು ಮತ್ತು ಸೋಯಾಬೀನ್ ಗಳು ಮಕ್ಕಳಿಗೆ ಕ್ಯಾಲ್ಸಿಯಂ ಭರಿತ ಆಹಾರವಾಗಿದ್ದು, ಇದನ್ನು ಮಗುವಿನ ಆಹಾರದಲ್ಲಿ ಸೇರಿಸಬೇಕು. ಮಗುವಿಗೆ ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ, ಸೋಯಾ ಹಾಲನ್ನು ನೀಡಬಹುದು. ಆಗ ಕ್ಯಾಲ್ಸಿಯಂ ಕೊರತೆ ಉಂಟಾಗೋಲ್ಲ.
ಕಿತ್ತಳೆ(Orange)
ಮಗುವಿಗೆ ಬೆಳಗಿನ ಉಪಾಹಾರಕ್ಕಾಗಿ ಒಂದು ಲೋಟ ತಾಜಾ ಕಿತ್ತಳೆ ರಸ ಅಥವಾ ಜ್ಯೂಸ್ ನೀಡಿ. ಪ್ರತಿ ಕಿತ್ತಳೆ ಹಣ್ಣಿನಲ್ಲಿ ಸುಮಾರು 50 ಮಿಗ್ರಾಂ ಕ್ಯಾಲ್ಸಿಯಂ ಇರುತ್ತೆ. ನೀವು ಫೋರ್ಟಿಫೀಎಡ್ ಆರೆಂಜ್ ಜ್ಯೂಸ್ ಸಹ ಆಯ್ಕೆ ಮಾಡಬಹುದು, ಆದರೆ ಇದರಲ್ಲಿ ಅಡ್ಡಿಟಿವ್ಸ್ ಮತ್ತು ಫ್ಲೇವರಿಂಗ್ ಏಜೆಂಟ್ ಹೊಂದಿರುತ್ತೆ. ಇದು ಮಕ್ಕಳ ಆರೋಗ್ಯಕ್ಕೆ ಉತ್ತಮ ಆಯ್ಕೆ ಅಲ್ಲ.
ಬಾದಾಮಿ (Almond)
ಜ್ಞಾಪಕ ಶಕ್ತಿ ಮತ್ತು ಮೆದುಳಿನ ಶಕ್ತಿ ಹೆಚ್ಚಿಸೋದರ ಜೊತೆಗೆ, ಬಾದಾಮಿಯಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದೆ. ಕೇವಲ 1/3 ಕಪ್ ಬಾದಾಮಿಯಲ್ಲಿ ಸುಮಾರು 110 ಮಿಗ್ರಾಂ ಕ್ಯಾಲ್ಸಿಯಂ ಇದೆ. ಪೀನಟ್ ಬಟರ್ ಬದಲಿಗೆ ಬಾದಾಮಿ ಬಟರ್ ಬಳಸೋದು ಒಳ್ಳೆಯದು. ಹಾಗಾಗಿ ಮಕ್ಕಳಿಗೆ ಇದನ್ನು ನೀಡೋದ್ರಿಂದ ಕ್ಯಾಲ್ಸಿಯಂ ಕೊರತೆ ಉಂಟಾಗೋದಿಲ್ಲ.
ಬೀನ್ಸ್(Beans)
ಕಡಲೆ ಕಾಳಿನಿಂದ ಹಿಡಿದು ಬಿಳಿ ಬೀನ್ಸ್ ವರೆಗೆ ಎಲ್ಲವೂ ಕ್ಯಾಲ್ಸಿಯಂ ಸಮೃದ್ಧವಾಗಿದೆ. ನೀವು ಮಗುವಿಗೆ ರಾಜ್ಮಾ ಸಹ ತಿನ್ನಿಸಬಹುದು. ಹಾಗಾಗಿ ಪ್ರತಿ ದಿನ ಮಗುವಿನ ಆಹಾರದಲ್ಲಿ ಇವು ಯಾವುದನ್ನಾದ್ರೂ ಸೇರಿಸಿ. ಈ ಬೀಜಗಳು ಮಕ್ಕಳ ಆರೋಗ್ಯ ಉತ್ತಮವಾಗಿರಲು ಸಹಾಯ ಮಾಡುತ್ತೆ, ಜೊತೆಗೆ ಬೀನ್ಸ್ ಸೇವಿಸೋದ್ರಿಂದ ಕ್ಯಾಲ್ಸಿಯಂ ಕೊರತೆ ಸಹ ಉಂಟಾಗೋದಿಲ್ಲ.
ಬ್ರೊಕೋಲಿ(Broccoli)
ಹೆಚ್ಚಿನ ಮಕ್ಕಳು ಬ್ರೊಕೋಲಿಯನ್ನು ದ್ವೇಷಿಸುತ್ತಾರೆ, ಆದರೆ ವಾಸ್ತವವಾಗಿ ಇದು ನಿಮ್ಮ ಮಗುವಿಗೆ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಬ್ರೊಕೊಲಿ ಸಂಪೂರ್ಣವಾಗಿ ಕ್ಯಾಲ್ಸಿಯಂ ಮತ್ತು ಇತರ ಅನೇಕ ಪ್ರಮುಖ ಪೋಷಕಾಂಶಗಳಿಂದ ತುಂಬಿದೆ. ಹಾಗಾಗಿ ಮಗುವಿಗೆ ಸಲಾಡ್ ಅಥವಾ ಬೇರೆ ಯಾವುದಾದ್ರೂ ರೀತಿಯಲ್ಲಿ ಬ್ರೊಕೋಲಿ ನೀಡಿ.
ಹಸಿರು ಬಟಾಣಿ(Green peas)
ತಾಜಾ 100 ಗ್ರಾಂ ಹಸಿರು ಬಟಾಣಿಯಲ್ಲಿ ಸುಮಾರು 25 ಮಿಗ್ರಾಂ ಕ್ಯಾಲ್ಸಿಯಂ ಇರುತ್ತೆ. ಇದನ್ನು ಮಗುವಿನ ಆಹಾರದಲ್ಲಿ ಸೇರಿಸೋದರಿಂದ ಮೂಳೆಗಳ ಸರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಇದಲ್ಲದೆ, ಹಸಿರು ಬಟಾಣಿಗಳಲ್ಲಿರುವ ವಿಟಮಿನ್ ಕೆ ಮೂಳೆ ಸಾಂದ್ರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ.
ಹಸಿರು ತರಕಾರಿಗಳು(Green vegetables)
ಬ್ರೊಕೋಲಿಯನ್ನು ಹೊರತುಪಡಿಸಿ, ಇತರ ಹಸಿರು ತರಕಾರಿಗಳು ಕ್ಯಾಲ್ಸಿಯಂನ ಉತ್ತಮ ಮೂಲ. ಹೆಚ್ಚಿನ ಮಕ್ಕಳು ಹಸಿರು ತರಕಾರಿಗಳನ್ನು ತಿನ್ನಲು ಇಷ್ಟಪಡೋದಿಲ್ಲ, ಆದ್ದರಿಂದ ನೀವು ಡಿಶ್ ನಲ್ಲಿ ಏನನ್ನಾದರೂ ಟ್ವಿಸ್ಟ್ ಕೊಡೋ ಮೂಲಕ ನಿಮ್ಮ ಮಗುವಿಗೆ ಈ ಪೌಷ್ಟಿಕ ವಸ್ತುಗಳನ್ನು ತಿನ್ನಿಸಬಹುದು.