ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಆಟಗಳನ್ನ ಆಡಿದ್ರೆ ಸಾಕು

First Published | Sep 28, 2022, 5:19 PM IST

ಹ್ಯಾಪಿ ಲೈಫ್  ನಡೆಸಲು ಸರಿಯಾದ ಫಿಟ್ ನೆಸ್ ಹೊಂದಿರುವುದು ಬಹಳ ಮುಖ್ಯ. ನಾವು ನಮ್ಮ ದೇಹದ ಎಲ್ಲಾ ಭಾಗ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತೇವೆ. ಆದರೆ ಮೆದುಳಿನ ಫಿಟ್ ನೆಸ್ ಬಗ್ಗೆ ಗಮನ ಹರಿಸುತ್ತೇವೆಯೇ? ದೇಹದ ಇತರ ಭಾಗಗಳನ್ನು ಆರೋಗ್ಯಕರವಾಗಿಡುವಂತೆಯೇ, ಮೆದುಳಿಗೆ ಉತ್ತಮ ಆರೋಗ್ಯದ ಅಗತ್ಯವಿದೆ. ದೇಹವನ್ನು ಸದೃಢವಾಗಿಡಲು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸಹ ಮುಖ್ಯ. ಹಾಗಿದ್ರೆ ಮಾನಸಿಕ ಆರೋಗ್ಯ ಕಾಪಾಡುವುದು ಹೇಗೆ?. 

ನಮ್ಮ ಮೆದುಳು(Brain) ದೇಹದ ಇತರ ಭಾಗಗಳಿಗೆ ಸಂಕೇತಗಳನ್ನು ಕಳುಹಿಸುತ್ತೆ ಮತ್ತು ಅವು ಪ್ರತಿಕ್ರಿಯಿಸುತ್ತವೆ. ನಾವು ನಮ್ಮ ಮೆದುಳನ್ನು ಆರೋಗ್ಯಕರವಾಗಿಡದಿದ್ದರೆ, ಅದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತೆ. ಹಾಗಿದ್ದರೆ ಮೆದುಳಿನ ಆರೋಗ್ಯ ಕಾಪಾಡುವುದು ಹೇಗೆ? ತಿಳಿಯೋಣ… 

ನಾವು ನಮ್ಮ ಮೆದುಳನ್ನು ಆರೋಗ್ಯಕರವಾಗಿರಿಸದ ಹೊರತು, ನಾವು ಆರೋಗ್ಯಕರ ಮತ್ತು ಸಂತೋಷದ ಜೀವನ(Happy life) ನಡೆಸಲು ಸಾಧ್ಯವಿಲ್ಲ ಯಾಕಂದ್ರೆ  ಮೆದುಳು ಜೀವನ ನಡೆಸುವ ನಮ್ಮ ಸಾಮರ್ಥ್ಯವನ್ನು ನಿಯಂತ್ರಿಸುತ್ತೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸಲೇಬೇಕು.
 

Tap to resize

ಮೆದುಳಿನ ಶಕ್ತಿಯನ್ನು ಹೆಚ್ಚಿಸಲು, ಉತ್ತಮ ಆಹಾರದ(Good food) ಜೊತೆಗೆ, ನಿಮ್ಮ ಮೆದುಳಿನ ಸ್ನಾಯುಗಳು ಬಲವಾಗಿರಲು ಮತ್ತು ಅವು ವೇಗವಾಗಿ ಕೆಲಸ ಮಾಡಲು ಕೆಲವು ವ್ಯಾಯಾಮದ ಅಗತ್ಯವಿದೆ. ಆದ್ದರಿಂದ ಇಲ್ಲಿ ಕೆಲವು ವ್ಯಾಯಾಮಗಳನ್ನು ಹೇಳಿದ್ದೇವೆ, ನೀವು ಅದನ್ನ ಮಾಡಿದ್ರೆ, ಅದು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತೆ. ಈ ವ್ಯಾಯಾಮಗಳನ್ನು ಮಾಡುವ ಮೂಲಕ, ನೀವು ಅಲ್ಝೈಮರ್ ನಂತಹ ರೋಗಗಳನ್ನು ಸಹ ಎದುರಿಸಬಹುದು.

ಕ್ರಾಸ್ ವರ್ಡ್ ಪಝಲ್ (Cross word puzzle)
ನೀವು ನಿಮ್ಮ ಮೆದುಳನ್ನು ವೇಗವಾಗಿ ಮತ್ತು ಸಕ್ರಿಯವಾಗಿಡಲು ಬಯಸಿದರೆ, ಕ್ರಾಸ್ ವರ್ಡ್ ಪಝಲ್ ನಿಮಗೆ ಸಾಕಷ್ಟು ಸಹಾಯ ಮಾಡುತ್ತೆ. ಇದನ್ನು ಕ್ಲಾಸ್ ಪಝಲ್ ಎಂದೂ ಕರೆಯಲಾಗುತ್ತೆ. ಕ್ರಾಸ್ ವರ್ಡ್ ಪಝಲ್ ಒಂದು ರೀತಿಯ ಆಟವಾಗಿದ್ದು, ಇದರಲ್ಲಿ ನಾವು ಪದಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ, ಇದು ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತೆ.  ಈ ಕ್ರಾಸ್ವರ್ಡ್ ಅಲ್ಝೈಮರ್ ಅಥವಾ ಮೆಮೊರಿ ನಷ್ಟದಂತಹ ಮಾನಸಿಕ ಆರೋಗ್ಯ ಆಕ್ಟೀವ್ ಆಗಿರುವಂತೆ ನೋಡಿಕೊಳ್ಳುತ್ತೆ. 

ಸುಡೋಕು(Suduko)
ಸುಡೋಕು ಕೂಡ ನಮ್ಮ ಮೆದುಳಿನ ಜೀವಕೋಶಗಳನ್ನು ಸಕ್ರಿಯವಾಗಿಡುವ ಆಟವಾಗಿದೆ. ಪ್ರತಿದಿನ ಸುಡೋಕು ಆಡೋದರಿಂದ ಅಲ್ಝೈಮರ್ ನಂತಹ ರೋಗಗಳ ಅಪಾಯವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಸುಡೋಕು ಮೆದುಳನ್ನು ಉತ್ತೇಜಿಸುತ್ತೆ ಮತ್ತು ನಿಮ್ಮ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತೆ.
 

ಚೆಸ್ (Chess) ಆಡಿ
ಸುಡೋಕು ಮತ್ತು ಕ್ರಾಸ್ ವರ್ಡ್ ನಂತೆ, ಚೆಸ್ ಕೂಡ ಸಂಪೂರ್ಣ ಮನಸ್ಸಿನ ಏಕಾಗ್ರತೆಯ ಆಟವಾಗಿದೆ. ಚದುರಂಗದ ಆಟದಲ್ಲಿ, ನೀವು ಇನ್ನೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಗ್ರಹಿಸಬೇಕು, ಆಗ ಮಾತ್ರ ನೀವು ಅವನನ್ನು ಸೋಲಿಸಲು ಸಾಧ್ಯವಾಗುತ್ತೆ. ಇದನ್ನು ಮಾಡೋದರಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತೆ.

ಚೆಸ್ ಆಟವು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತೆ ಮತ್ತು ನಿಮ್ಮ ಮನಸ್ಸಿನ ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತೆ. ನೀವು ಅದಕ್ಕೆ ಒಗ್ಗಿಕೊಂಡರೆ, ಅದು ನಿಮ್ಮ ಮೆದುಳನ್ನು ಸಕ್ರಿಯವಾಗಿರಿಸುತ್ತೆ ಮತ್ತು ಯಾವುದೇ ವಿಷಯದ ಬಗ್ಗೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಅನೇಕ ಬಾರಿ ಜನರು ಚೆಸ್ ಅನ್ನು ಏಕಾಂಗಿಯಾಗಿ ಆಡುತ್ತಾರೆ, ಇದರಿಂದ ಅವರ ಮೆದುಳಿಗೆ ವ್ಯಾಯಾಮ ಆಗಬಹುದು. ಇದು ಅಲ್ಝೈಮರ್(Alzheimer) ಹೊಂದಿರುವ ಜನರಿಗೆ ಸಹಾಯ ಮಾಡುತ್ತೆ.
.

ಸ್ಕ್ರ್ಯಾಬಲ್(Scramble)
ಸ್ಕ್ರಾಬಲ್ ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ಬಹಳ ಪ್ರಸಿದ್ಧ ಆಟವಾಗಿದೆ. ನಮ್ಮ ಎದುರಾಳಿ ನಮಗಾಗಿ ಒಂದು ಹೊಸ ಗುರಿಯನ್ನು ನಿಗದಿಪಡಿಸಿದಾಗ, ಒಂದು ಹೊಸ ಪದದ ಬಗ್ಗೆ ಯೋಚಿಸುವಂತೆ ನಮ್ಮನ್ನು ಒತ್ತಾಯಿಸುತ್ತೆ. ಸ್ಕ್ರ್ಯಾಬಲ್ ನಮ್ಮನ್ನು ತಾರ್ಕಿಕವಾಗಿ ಮತ್ತು ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಏಕಕಾಲದಲ್ಲಿ ಅನೇಕ ಅಂಶಗಳ ಬಗ್ಗೆ ಯೋಚಿಸಲು ನಮಗೆ ಸಹಾಯ ಮಾಡುತ್ತೆ.

Latest Videos

click me!