Winter Health Tips: ಚಳಿಗಾಲದಲ್ಲಿ ಕೈಕಾಲುಗಳಲ್ಲಿ ಬಿಗಿತ ಉಂಟಾದ್ರೆ ಏನು ಮಾಡೋದು?

First Published | Sep 26, 2022, 6:24 PM IST

ಮಳೆಗಾಲ ಮುಗೀತಾ ಬಂತು. ಚಳಿಗಾಲ ಇನ್ನೇನು ಆರಂಭವಾಗಲಿದೆ. ಈ ಟೈಮ್ ಲಿ ಹೊರಗಿನ ವಾತಾವರಣ ಶುಷ್ಕವಾಗಿರುತ್ತೆ. ಇದರಿಂದಾಗಿ ಈ ಸೀಸನ್ ನಲ್ಲಿ ದೇಹದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ತುಂಬಾನೆ ಹೆಚ್ಚಾಗಿರುತ್ತೆ. ಯಾಕೆಂದರೆ ಹೊರಗಡೆ ತುಂಬಾನೆ ಚಳಿ ಇರುತ್ತೆ, ಶುಷ್ಕ ವಾತಾವರಣ ಬೇರೆ ಇರುತ್ತೆ. ಇದರಿಂದ ಮೈ, ಕೈಗಳಲ್ಲಿ ನೋವು ಆರಂಭವಾಗುತ್ತೆ. ವಿಶೇಷವಾಗಿ ನೀವು ಸಂಧಿವಾತದ ರೋಗಿಯಾಗಿದ್ದರೆ, ಆಗ ಕೀಲು, ಕೈಗಳು ಮತ್ತು ಪಾದಗಳಲ್ಲಿ ಹೆಚ್ಚು ನೋವು ಅನುಭವಿಸಬೇಕಾಗಬಹುದು.
 

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು (health problem)ತುಂಬಾನೆ ಹೆಚ್ಚಾಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ, ಮೂಳೆಗಳಲ್ಲಿ ನೋವು ಹೆಚ್ಚಾಗಬಹುದು, ನಡೆಯಲು ಕಷ್ಟವಾಗಬಹುದು. ಈ ಪರಿಸ್ಥಿತಿಯನ್ನು ತಪ್ಪಿಸಲು, ನೀವು ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಟ್ರೈ ಮಾಡಬಹುದು. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ

ಕೀಲುಗಳನ್ನು ರೊಟೇಟ್ ಮಾಡೋದು 
ಚಳಿಗಾಲದಲ್ಲಿ, ಕೀಲು, ಕೈಗಳು ಮತ್ತು ಪಾದಗಳಲ್ಲಿ ಬಿಗಿತದ ಸಮಸ್ಯೆಯನ್ನು ತಪ್ಪಿಸಲು ನೀವು ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್ ಮಾಡಬೇಕು. ಇದಲ್ಲದೆ, ನಿಮ್ಮ ಜೀವನಶೈಲಿಯಲ್ಲಿ ನೀವು ಇತರ ವ್ಯಾಯಾಮಗಳನ್ನು (exercise) ಸೇರಿಸಬಹುದು. ಇದರಿಂದ ಕಾಲುಗಳಲ್ಲಿ ನೋವು ಉಂಟಾಗೋದಿಲ್ಲ. 

Tap to resize

ಸೈಕ್ಲಿಂಗ್ (cycling) ಮತ್ತು ಈಜುವಿಕೆ ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತೆ. ಅಲ್ಲದೆ ಇದು ಚಳಿಗಾಲದಲ್ಲಿ ಬಿಗಿತದ ಸಮಸ್ಯೆಯನ್ನೂ ಕಡಿಮೆ ಮಾಡುತ್ತೆ. ವ್ಯಾಯಾಮದ ಹೊರತಾಗಿ, ನೀವು ನಡೆಯಬಹುದು. ಹೆಚ್ಚು ನಡೆಯೋದರಿಂದ ಆರಾಮ ದೊರೆಯುತ್ತೆ. ದೇಹ ಪೂರ್ತಿ ಆಕ್ಟಿವ್ ಆಗಿರುತ್ತೆ.

ತುಪ್ಪದ ಸೇವನೆ
ಸಂಧಿವಾತ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಆಗ ನಿಮ್ಮ ದೇಹದಲ್ಲಿ ಅತಿಯಾದ ವಾತ ಇರಬಹುದು. ಈ ಕಾರಣದಿಂದಾಗಿ, ದೇಹದಲ್ಲಿ ತೇವಾಂಶದ ಕೊರತೆಯಾಗುತ್ತೆ, ಇದರಿಂದಾಗಿ ಕೀಲುಗಳಲ್ಲಿನ ಮೃದುತ್ವ ಕಡಿಮೆಯಾಗಬಹುದು. ಹಾಗಾಗಿ, ಕೀಲುಗಳ ಸ್ಮೂತ್ ನೆಸ್ ಕಾಪಾಡಿಕೊಳ್ಳಲು ತುಪ್ಪ ಅಥವಾ ಆಲಿವ್ ಎಣ್ಣೆಯನ್ನು (olive oil) ಸೇವಿಸಿ. ಇದು ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತೆ. 

ಯೋಗ ಅತ್ಯಗತ್ಯ
ಕೈಗಳು ಮತ್ತು ಪಾದಗಳ ಬಿಗಿತವನ್ನು ಕಡಿಮೆ ಮಾಡಲು ನೀವು ನಿಯಮಿತವಾಗಿ ವ್ಯಾಯಾಮ ಮಾಡಬಹುದು. ಇದು ನಿಮಗೆ ನೋವಿನಿಂದ ಪರಿಹಾರ ಸಹ ನೀಡುತ್ತೆ. ಕೀಲುಗಳ ಬಿಗಿತವನ್ನು ಕಡಿಮೆ ಮಾಡಲು, ವೀರಭದ್ರಾಸನ, ತಾಡಾಸನ ಮತ್ತು ದಂಡಾಸನದಂತಹ ಯೋಗಾಸನಗಳನ್ನು ಮಾಡಿ. ಇದು ನೋವಿನಿಂದ ರಕ್ಷಣೆ ನೀಡುತ್ತೆ.

ಆರೋಗ್ಯಕರ ಆಹಾರ ಸೇವಿಸಿ
ಕೈಗಳು ಮತ್ತು ಪಾದಗಳ ಬಿಗಿತವನ್ನು ಕಡಿಮೆ ಮಾಡಲು ನಿಮ್ಮ ಡಯಟ್ ನಲ್ಲಿ ಆರೋಗ್ಯಕರ ಆಹಾರವನ್ನು (healthy food) ಸೇರಿಸಿ. ಇದಕ್ಕಾಗಿ, ದೈನಂದಿನ ಆಹಾರದಲ್ಲಿ ನುಗ್ಗೆಕಾಯಿ, ಬದನೆಕಾಯಿ, ಹಾಗಲಕಾಯಿ, ಸೊಪ್ಪುಗಳು, ಆವಕಾಡೊದಂತಹ ಆಹಾರ ಸೇವಿಸಿ. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತೆ. 

Latest Videos

click me!