ಶಿವನ ಪೂಜೆಗೆ ಮಾತ್ರವಲ್ಲ, ಹಲವು ಸಮಸ್ಯೆ ನಿವಾರಿಸಲು ಬೆಸ್ಟ್ ಈ ಹೂವು

First Published Sep 27, 2022, 7:42 PM IST

ಶಿವನಿಗೆ ಪ್ರಿಯವಾದ ಎಕ್ಕದ ಹೂವುಗಳಿಂದ ಆರೋಗ್ಯ ಸಮಸ್ಯೆ, ಸೌಂದರ್ಯ ಸಮಸ್ಯೆಗಳನ್ನೂ ಸಹ ನಿವಾರಿಸಬಹುದು ಅನ್ನೋದು ನಿಮಗೆ ಗೊತ್ತಾ? ಹೌದು ಈ ಎಕ್ಕದ ಹೂವು ಸುಕ್ಕುಗಳನ್ನು ನಿವಾರಿಸೋದ್ರಿಂದ ಹಿಡಿದು, ಹಲ್ಲು ನೋವನ್ನೂ ಸಹ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಕೀಲು ನೋವನ್ನು ಕಡಿಮೆ ಮಾಡಲು, ಚರ್ಮದ ಸುಕ್ಕುಗಳನ್ನು ತೆಗೆದುಹಾಕಲು ಎಕ್ಕದ ಹೂವುಗಳನ್ನು ಬಳಸಬಹುದು. ಹಾಗಾದರೆ ಇದನ್ನು ಬಳಸೋದು ಹೇಗೆ ಅನ್ನೋದನ್ನು ನೋಡೋಣ.

ಎಕ್ಕದ ಹೂವು ಸಣ್ಣದಾಗಿದ್ದು ಬಿಳಿ ಬಣ್ಣದಲ್ಲಿದ್ದು ಮತ್ತು ಬಟ್ಟಲಿನ ಆಕಾರದಲ್ಲಿದೆ. ಅಲ್ಲದೆ, ಇದರ ಮೇಲೆ ಕೆಂಪು ಮತ್ತು ನೇರಳೆ ಚುಕ್ಕೆಗಳಿವೆ. ಈ ಸಸ್ಯದ ಬೇರಿನಲ್ಲಿ ಮಂದಾರಲ್ಬನ್ ಮತ್ತು ಫ್ಯೂಅಬಿಲ್ ಎಂಬ ರಾಸಾಯನಿಕಗಳು ಕಂಡುಬರುತ್ತವೆ. ಈ ಸಸ್ಯವು ಅನೇಕ ರೋಗಗಳ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಈ ಸಸ್ಯ ಭಾರತದಾದ್ಯಂತ ಬಂಜರು ಭೂಮಿ, ತೆರೆದ ಮತ್ತು ಶುಷ್ಕ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದು ಅನೇಕ ದೈಹಿಕ ಸಮಸ್ಯೆಗಳನ್ನು ನಿವಾರಿಸುತ್ತೆ.

ನೀವು ಪೊದೆಗಳಲ್ಲಿ ಎಕ್ಕದ ಸಸ್ಯವನ್ನು ಅನೇಕ ಬಾರಿ ನೋಡಿರಬಹುದು, ಬಿಳಿ ಎಕ್ಕದ ಹೂವು ಶಿವನಿಗೆ ಪ್ರಿಯವಾದುದು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಈ ಹೂವನ್ನು ಬೇರೆ ಯಾವುದಕ್ಕೆ ಬಳಕೆ ಮಾಡುತ್ತಾರೆ ಅನ್ನೋದು ಮಾತ್ರ ತಿಳಿದಿಲ್ಲ ಅಲ್ವಾ? ಈ ಹೂವು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು, ಚರ್ಮದ ಕಲೆಗಳನ್ನು ತೆಗೆದುಹಾಕಲು ಮತ್ತು ತಲೆನೋವಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಎಕ್ಕದ ಹೂವನ್ನು ಬಳಸಲಾಗುತ್ತದೆ. ಇದರ ಇನ್ನಿತರ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಎಕ್ಕದ ಎಲೆಗಳನ್ನು ಅನೇಕ ಆಯುರ್ವೇದ ಉತ್ಪನ್ನಗಳು, ಗಿಡಮೂಲಿಕೆ ಚಹಾಗಳು, ಪರಿಹಾರ ಮಿಶ್ರಣಗಳು ಮತ್ತು ಇತ್ಯಾದಿಗಳಲ್ಲಿ ಬಳಸಲಾಗುತ್ತೆ. ಇದು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹ ಇದನ್ನು ಬಳಸಬಹುದು. ಮಧುಮೇಹ (diabetes) ಚಿಕಿತ್ಸೆಯಲ್ಲಿ ಸಹ ಇದನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಸುಕ್ಕುಗಳನ್ನು ನಿವಾರಿಸುತ್ತೆ
ಸುಕ್ಕುಗಳ ಸಮಸ್ಯೆಗಳನ್ನು (wrinkle problem)ನಿವಾರಿಸಲು ನೀವು ಎಕ್ಕದ ಹೂವುಗಳನ್ನು ಬಳಸಬಹುದು. ಇದಕ್ಕಾಗಿ, ಸುಮಾರು 3 ಗ್ರಾಂ ಎಕ್ಕದ ಹೂವುಗಳ ಪುಡಿಯನ್ನು ತೆಗೆದುಕೊಳ್ಳಿ. ಈಗ ಸ್ವಲ್ಪ ಅರಿಶಿನ, ರೋಸ್ ವಾಟರ್ ಮತ್ತು ಹಾಲನ್ನು ಮಿಕ್ಸ್ ಮಾಡಿ. ಇದರ ನಂತರ, ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇದು ಸುಕ್ಕುಗಳನ್ನು ನಿವಾರಿಸುತ್ತದೆ. 

ತಲೆನೋವು ಮತ್ತು ಕಿವಿ ನೋವಿನಿಂದ ಪರಿಹಾರ
ಕಿವಿ ನೋವು ಮತ್ತು ತಲೆನೋವನ್ನು (headache) ನಿವಾರಿಸಲು ಎಕ್ಕದ ಹೂವುಗಳನ್ನು ಬಳಸಿ. ಇದರೊಂದಿಗೆ, ಇದು ಮೈಗ್ರೇನ್ ನಲ್ಲಿನ ನೋವನ್ನು ಸಹ ತೆಗೆದುಹಾಕುತ್ತದೆ. ಇದಕ್ಕಾಗಿ, ಎಕ್ಕದ ಹೂವುಗಳ ರಸವನ್ನು ಹೊರತೆಗೆದು ತಲೆಗೆ ಹಚ್ಚಿ. 

ಕಣ್ಣಿನ ಸಮಸ್ಯೆ ದೂರ ಮಾಡುತ್ತೆ
ಕಣ್ಣಿನ ಸಮಸ್ಯೆಗಳನ್ನು ನಿವಾರಿಸಲು ಎಕ್ಕದ ಹೂವುಗಳನ್ನು ಬಳಸಬಹುದು. ಇದಕ್ಕಾಗಿ, ಎಕ್ಕದ ಹೂವುಗಳನ್ನು ಒಣಗಿಸಿ. ಅದರಲ್ಲಿ ಸ್ವಲ್ಪ ರೋಸ್ ವಾಟರ್ ಬೆರೆಸಿ ಮತ್ತು ಅದನ್ನು ಕಣ್ಣುಗಳ ಸುತ್ತಲೂ ಹಚ್ಚಿ. ಇದು ಕಣ್ಣಿನ ತುರಿಕೆ, (sore eyes) ನೋವು ಮತ್ತು ಭಾರವನ್ನು ತೆಗೆದುಹಾಕುತ್ತದೆ. 

ಹಲ್ಲು ನೋವಿನಿಂದ ಪರಿಹಾರ
ಹಲ್ಲು ನೋವನ್ನು ಕಡಿಮೆ ಮಾಡಲು ಎಕ್ಕದ ಹೂವುಗಳನ್ನು ಬಳಸಬಹುದು. ಇದಕ್ಕಾಗಿ, ಎಕ್ಕದ  ಹಾಲನ್ನು ತೆಗೆಯಿರಿ. ಅದಕ್ಕೆ ಸ್ವಲ್ಪ ತುಪ್ಪವನ್ನು ಬೆರೆಸಿ ಹತ್ತಿಯ ಸಹಾಯದಿಂದ ದವಡೆಗಳ ಮೇಲೆ ಹಚ್ಚಿ. ಇದು ದವಡೆ ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಹಲ್ಲುನೋವನ್ನು ಸಹ ನಿವಾರಿಸಬಹುದು. 

ಹೆಮೊರಾಯ್ಡ್ ಸಮಸ್ಯೆಗೆ ಪರಿಹಾರ ನೀಡುತ್ತೆ
ಹೆಮೊರಾಯ್ಡ್ ಗಳಿಂದ ಬಳಲುತ್ತಿರುವ ಜನರು ಎಕ್ಕ ಬಳಸೋದ್ರಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಎಕ್ಕದ ಎಲೆಗಳನ್ನು ಅರೆದು, ಹೆಮೊರಾಯ್ಡ್ ಗಾಯದ ಮೇಲೆ ಹಚ್ಚುವುದರಿಂದ ನೋವಿನಿಂದ ಪರಿಹಾರ ಸಿಗುತ್ತೆ. ಅಲ್ಲದೇ ಗಾಯ ಬೇಗನೆ ವಾಸಿಯಾಗುತ್ತೆ.

click me!