ಪೇನ್ ಕಿಲ್ಲರ್ ಬಿಡಿ, ಕಿವಿ ನೋವನ್ನು ನಿವಾರಿಸಲು ಇದನ್ನ ಟ್ರೈ ಮಾಡಿ

First Published Aug 18, 2022, 6:41 PM IST

ನಿಮ್ಮ ಕಿವಿ ತುಂಬಾ ತುರಿಸ್ತಿದ್ಯಾ ತುರಿಸ್ತಿದ್ಯಾ? ಕಿವಿಯಲ್ಲಿ ತುರಿಕೆಯು ಕಿವಿ ಸೋಂಕಿಗೆ ಕಾರಣವಾಗುವ ಒಂದು ಸಾಮಾನ್ಯ ಸಮಸ್ಯೆ. ಇದು ನಿಮಗೆ ತಡೆಯಲು ಸಾಧ್ಯ ಆಗದೇ ಇರೋವಷ್ಟು ಕಿವಿ ನೋವನ್ನು ಅನುಭವಿಸುವಂತೆ ಮಾಡಬಹುದು. ಕಿವಿಯು ದೇಹದ ಸೂಕ್ಷ್ಮ ಭಾಗ, ಇಲ್ಲಿ ಉಂಟಾದ ತುರಿಕೆ ಅಥವಾ ನೋವಿನಿಂದ ಪರಿಹಾರ ಪಡೆಯಲು ಕಿವಿಗೆ ನೀವು ಏನು ಹಾಕೋದು ಡೇಂಜರ್. ಹಾಗಿದ್ರೆ ಏನು ಮಾಡೋದು.
 

ಮೊದಲನೆಯದಾಗಿ ಕಿವಿಯಲ್ಲಿ(Ear) ತುರಿಕೆ ಅಥವಾ ನೋವು ಏಕೆ ಇದೆ ಎಂದು ತಿಳಿದುಕೊಳ್ಳೋದು ತುಂಬಾನೆ ಮುಖ್ಯ. ಒಬ್ಬ ವ್ಯಕ್ತಿಯ ಕಿವಿಯಲ್ಲಿ ತುರಿಕೆಗೆ ದೊಡ್ಡ ಕಾರಣ ಆ ವ್ಯಕ್ತಿಯಲ್ಲಿ ಅಲ್ಟ್ರಾ ಸೆನ್ಸಿಟಿವ್ ನ್ಯೂರಾಲಜಿಕಲ್ ಫೈಬರ್ಸ್ ಉಪಸ್ಥಿತಿ. ಈ ಸಣ್ಣ  ಫೈಬರ್ಸ್ ಕಿವಿಯೊಳಗೆ ಸಂವೇದನಾಶೀಲತೆಯನ್ನು ಉಂಟುಮಾಡುತ್ತೆ, ಇದರಿಂದಾಗಿ ಆಗಾಗ್ಗೆ ತುರಿಕೆ ಉಂಟಾಗುತ್ತೆ. ಎರಡನೆಯ ಕಾರಣವೆಂದರೆ ಕಿವಿಯ ಚರ್ಮದ ಶುಷ್ಕತೆ, ಇದು ತುರಿಕೆ ಮತ್ತು ನೋವಿಗೆ ಕಾರಣವಾಗಬಹುದು.


ಕಿವಿ ನೋವು(Pain), ತುರಿಕೆ ಅಥವಾ ಊತಕ್ಕೆ ಚಿಕಿತ್ಸೆ ಏನು? 
ಕಿವಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ನೀವು ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂಬುದನ್ನು ನೆನಪಿನಲ್ಲಿಡಿ. ಆದಾಗ್ಯೂ, ಕಿವಿ ನೋವು ಮತ್ತು ಇತರ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುವ ಕೆಲವು ಮನೆಮದ್ದುಗಳಿವೆ. ಆದರೆ ಇವುಗಳನ್ನು ಬಳಕೆ ಮಾಡೋ ಮುನ್ನ ವೈದ್ಯರನ್ನು ಕಂಡರೆ ಉತ್ತಮ. 
 

ಅಲೋವೆರಾ(Aloevera)
ಕಿವಿಗಳಲ್ಲಿ ತುರಿಕೆ ಇದ್ದರೆ,  ಅಲೋವೆರಾ ಸಸ್ಯವು ಅದ್ಭುತ ಮಾಡುತ್ತೆ. ತಲೆಯನ್ನು ಒಂದು ಬದಿಗೆ ವಾಲಿಸಿ, ನೀವು ಮೂರರಿಂದ ನಾಲ್ಕು ಹನಿ ಅಲೋವೆರಾ ಜೆಲ್ ಅನ್ನು ಕಿವಿಯಲ್ಲಿ ಹಾಕಬಹುದು. ಅದನ್ನು ಹೊರತೆಗೆಯುವ ಮೊದಲು ಅದನ್ನು ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಬಿಡಿ. ಅಲೋವೆರಾ ಒಳಕಿವಿಯೊಳಗಿನ pH ಮಟ್ಟವನ್ನು ಸುಧಾರಿಸುತ್ತೆ. ಇದರ ಉರಿಯೂತ ಶಮನಕಾರಿ ಗುಣಲಕ್ಷಣ ಒಣ, ತುರಿಕೆ, ಕಿರಿಕಿರಿ ಉಂಟುಮಾಡುವ ಕಿವಿ ಸಮಸ್ಯೆಯನ್ನು ದೂರ ಮಾಡುತ್ತೆ.
 

ಶುಂಠಿ(Ginger)
ಶುಂಠಿಯು ನೈಸರ್ಗಿಕ ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಕಿವಿ ನೋವನ್ನು ನಿವಾರಿಸಲು ಪ್ರಯೋಜನಕಾರಿ ಮತ್ತು ಕಿವಿಗಳ ತುರಿಕೆ ನಿವಾರಿಸುತ್ತೆ.  ಸ್ವಲ್ಪ ಶುಂಠಿ ರಸವನ್ನು ಬಿಸಿ ಮಾಡಿ ಮತ್ತು ಅದನ್ನು ಫಿಲ್ಟರ್ ಮಾಡಿದ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಹೊರ ಕಿವಿಯ ಕಾಲುವೆಯ ಸುತ್ತಲೂ ಹಚ್ಚಿ. ಅದನ್ನು ನೇರವಾಗಿ ಕಿವಿಗೆ ಹಾಕೋ ಸಾಹಸ ಮಾತ್ರ ಮಾಡ್ಬೇಡಿ.

ಎಣ್ಣೆ(Oil)
ತುರಿಕೆ ಕಿವಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದ ಅನೇಕ ಎಸೆನ್ಷಿಯಲ್ ಆಯಿಲ್ ಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ಈ ಎಣ್ಣೆ ಕಿವಿಗಳಿಗೆ ಪರಿಹಾರ ಮತ್ತು ತುರಿಕೆ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತೆ. ಇವುಗಳಲ್ಲಿ ತೆಂಗಿನೆಣ್ಣೆ, ತರಕಾರಿ ಎಣ್ಣೆ, ಆಲಿವ್ ಎಣ್ಣೆ ಮತ್ತು ಟೀ ಟ್ರೀ ಎಣ್ಣೆ ಸೇರಿವೆ. ಈ ಎಣ್ಣೆಗಳನ್ನು ಹಚ್ಚಲು ಮೊದಲಿಗೆ ಒಂದು ಟೀಸ್ಪೂನ್ ಎಣ್ಣೆಯನ್ನು ಕೊಂಚ ಬಿಸಿ ಮಾಡಬಹುದು. ಬಳಿಕ ಒಂದು ಡ್ರಾಪರ್ ತೆಗೆದುಕೊಳ್ಳಿ, ನಿಮ್ಮ ತಲೆಯನ್ನು ಪಕ್ಕಕ್ಕೆ ಬಾಗಿಸಿ ಮತ್ತು ಕಿವಿಯಲ್ಲಿ ಕೆಲವು ಡ್ರಾಪ್ಸ್ ಹಾಕಿ. ಸುಮಾರು ಒಂದು ಅಥವಾ ಎರಡು ನಿಮಿಷಗಳ ನಂತರ ತಲೆಯನ್ನು ನೇರಗೊಳಿಸಿ. ಇದರಿಂದ ಕಿವಿ ನೋವು ನಿವಾರಣೆಯಾಗುತ್ತೆ.

ಬೆಳ್ಳುಳ್ಳಿ(Garlic)
ಬೆಳ್ಳುಳ್ಳಿಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಶತಮಾನಗಳಿಂದ ಆಂಟಿಬಯೋಟಿಕ್ ಮತ್ತು ನೋವು ನಿವಾರಕವಾಗಿ ಬಳಸಲಾಗುತ್ತಿದೆ. ಜಜ್ಜಿದ ಬೆಳ್ಳುಳ್ಳಿಯನ್ನು ಬಿಸಿ ಆಲಿವ್ ಅಥವಾ ಎಳ್ಳೆಣ್ಣೆಯಲ್ಲಿ ಹಲವಾರು ನಿಮಿಷಗಳ ಕಾಲ ನೆನೆಸಿಡಿ. ಬೆಳ್ಳುಳ್ಳಿಯನ್ನು ಸೋಸಿ ಮತ್ತು ಎಣ್ಣೆಯನ್ನು ಕಿವಿಗೆ ಹಚ್ಚಿ. ಕಿವಿ ತುರಿಕೆಗೆ ಚಿಕಿತ್ಸೆ ನೀಡಲು ಇದು ಉತ್ತಮ ಮನೆಮದ್ದು.
 

ಆಲಿವ್ ಎಣ್ಣೆ(Olive oil)
ಆಲಿವ್ ಎಣ್ಣೆಯ ಬಳಕೆಯು ಕಿವಿ ನೋವಿಗೆ ಉತ್ತಮ ಚಿಕಿತ್ಸೆಯಾಗಿದೆ. ಕಿವಿಗೆ ಆಲಿವ್ ಎಣ್ಣೆಯ ಹನಿಗಳನ್ನು ಹಾಕಿದರೆ ಕಿವಿ ನೋವು ನಿವಾರಿಸಬಹುದು. ಆದರೆ ಮಕ್ಕಳಿಗೆ ಮಾತ್ರ ಇದನ್ನು ಬಳಸೋದನ್ನು ತಪ್ಪಿಸಿ ಡಾಕ್ಟರ್ ಹತ್ತಿರ ಹೋಗಿ ಚಿಕಿತ್ಸೆ ಪಡೆಯಿರಿ.

click me!