Mushroom Benefits: ಆರೋಗ್ಯಕ್ಕೆ ರಾಮಬಾಣ ಈ ಮಶ್ರೂಮ್!

First Published Jun 13, 2022, 6:26 PM IST

Benefits of eating Mashroom: ಮಶ್ರೂಮ್ ಭಾರತದ ಅನೇಕ ಭಾಗಗಳಲ್ಲಿ ಕಂಡುಬರುತ್ತವೆ. ಇದು ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನೋವಂತಹ ಆಹಾರ. ಇತ್ತೀಚಿನ ದಿನಗಳಲ್ಲಿ ಇದನ್ನ ಮಾರ್ಕೆಟ್ ನಲ್ಲಿ ಸುಲಭವಾಗಿ ಪಡೆಯಬಹುದು. ಇದರಿಂದ ರುಚಿರುಚಿಯಾದ ಅಡುಗೆ ಮಾಡಿ ಸವಿಯಬಹುದು. ಇದು ಟೇಸ್ಟಿ ಮಾತ್ರವಲ್ಲ, ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾದ ಮಶ್ರೂಮ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ

ವಿಟಮಿನ್ಸ್ , ಮಿನರಲ್ಸ್ ಮತ್ತು ಅಮೈನೋ ಆಸಿಡ್ ಗಳು ಮಶ್ರೂಮ್ ನಲ್ಲಿ ಕಂಡುಬರುತ್ತವೆ. ಅದಕ್ಕಾಗಿಯೇ ಮಶ್ರೂಮ್(Mushroom) ಆರೋಗ್ಯಕ್ಕೆ ರಾಮಬಾಣವೆಂದು ಪರಿಗಣಿಸಲಾಗುತ್ತೆ . ಇದರ ಪ್ರಯೋಜನ ತಿಳಿಯದೆ ಇದರ ರುಚಿಯಿಂದಾಗಿ ಅನೇಕ ಜನ ಅದನ್ನ ತಿನ್ನಲು ಇಷ್ಟಪಡ್ತಾರೆ. ಇಲ್ಲಿ ಅಣಬೆ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಸಲಾಗಿದೆ, ನಿಮಗೂ ಆ ಬಗ್ಗೆ ತಿಳಿಬೇಕು ಅನ್ಸಿದ್ರೆ ಮುಂದೆ ಓದಿ…  

ರೋಗಗಳನ್ನು ದೂರವಿಡುತ್ತೆ 
ಅಣಬೆ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತೆ. ಇದು ನ್ಯಾಚುರಲ್ ಇಮ್ಮ್ಯೂನಿಟಿ ಬೂಸ್ಟರ್(Natural Immunity Booster) ಆಗಿದ್ದು, ಮೈಕ್ರೋಬಿಯಲ್  ಮತ್ತು ಇತರ ಫಂಗಲ್ ಇನ್ಫೆಕ್ಷನ್ ದೂರ ಮಾಡುತ್ತೆ . ಇದರಲ್ಲಿ ಕಂಡುಬರುವ ಗುಣಲಕ್ಷಣಗಳಿಂದಾಗಿ, ಇದು ದೇಹದ ಸೆಲ್ಸ್ ಗಳನ್ನು ಆರೋಗ್ಯವಾಗಿಡಬಹುದು.


ಹೃದಯದ(Heart) ಬಗ್ಗೆ ಕಾಳಜಿ ವಹಿಸುತ್ತೆ 
ಅಣಬೆ ಹೃದಯವನ್ನು ತುಂಬಾ ಚೆನ್ನಾಗಿರಿಸುತ್ತವೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ನ್ಯೂಟ್ರಿಯೆಂಟ್ಸ್ ಮತ್ತು ಎಂಸೈಮ್ಸ್   ಹೊಂದಿದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿದ್ದರೆ, ಹೃದಯಾಘಾತ ಮತ್ತು ಪ್ಯಾರಾಲಿಸಿಸ್ ಅಪಾಯ ಕಡಿಮೆಯಾಗುತ್ತೆ. ಆದ್ದರಿಂದ ಆಹಾರದಲ್ಲಿ ಮಶ್ರೂಮ್ ಸೇರಿಸಲು ಮರೆಯಬೇಡಿ. 

ಮಧುಮೇಹ(Diabetes)
ಮಶ್ರೂಮ್ ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಕಾರಿ. ಅಣಬೆಗಳಲ್ಲಿ ಸಕ್ಕರೆ ಇರೋದಿಲ್ಲ. ಇದು ದೇಹದಲ್ಲಿ ಇನ್ಸುಲಿನ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತೆ. ಆದುದರಿಂದ ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಮಶ್ರೂಮ್ ಸೇರಿಸಿದ್ರೆ ಉತ್ತಮ. 

ಹೊಟ್ಟೆಯ(Stomach) ಸಮಸ್ಯೆ ನಿವಾರಿಸುತ್ತೆ 
ಅಣಬೆ ಸೇವನೆಯು ಮಲಬದ್ಧತೆ, ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತೆ. ಫೋಲಿಕ್ ಆಸಿಡ್ ಕಾರಣದಿಂದಾಗಿ, ಇದು ದೇಹದಲ್ಲಿ ರಕ್ತ ತಯಾರಿಸುವ ಕೆಲಸ ಸಹ ಮಾಡುತ್ತೆ. ಒಟ್ಟಲ್ಲಿ ಉದರದ ಎಲ್ಲಾ ಸಮಸ್ಯೆ ನಿವಾರಿಸಲು ಇದು ಸಹಾಯಕ.

ಬಲವಾದ ಮೂಳೆಗಳಿಗೆ(Bones)
ಮಶ್ರೂಮ್ ಸೇವನೆಯು ಮೂಳೆಗಳನ್ನು ಬಲಪಡಿಸುತ್ತೆ. ಏಕೆಂದರೆ ಇದು ಸಾಕಷ್ಟು ವಿಟಮಿನ್ ಡಿ ಹೊಂದಿದೆ. 

ಆಂಟಿ-ಏಜಿಂಗ್(Anti aging)
ಅಣಬೆ ಚರ್ಮಕ್ಕೆ ತುಂಬಾನೆ ಪ್ರಯೋಜನಕಾರಿ.  ಇದು ಆಂಟಿ-ಏಜಿಂಗ್ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು, ನಿಮಗೆ ಬೇಗನೆ ವಯಸ್ಸಾಗೋದಿಲ್ಲ. 
 

click me!