ಪದೇ ಪದೇ ಮೂತ್ರವನ್ನು ತಡೆಯೋದ್ರಿಂದ ಏನಾಗುತ್ತೆ?

First Published | Jun 13, 2022, 1:46 PM IST

ದೀರ್ಘಕಾಲದವರೆಗೆ ಮೂತ್ರ ನಿಯಂತ್ರಿಸುವುದು  (holding pee) ಮೂತ್ರಪಿಂಡಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಹೆಚ್ಚಿಸುವ ಅಪಾಯ ಹೊಂದಿದೆ. ಮೂತ್ರ ತಡೆಹಿಡಿಯುವ ಸಾಮರ್ಥ್ಯ ವ್ಯಕ್ತಿಯ ವಯಸ್ಸನ್ನು ಅವಲಂಬಿಸಿರುತ್ತದೆ. ವಯಸ್ಕರ ಮೂತ್ರಕೋಶವು 2 ಕಪ್ ಮೂತ್ರವನ್ನು ಹಿಡಿದಿಟ್ಟುಕೊಳ್ಳಬಹುದು. ಅದಾದ ಬಳಿಕ ಮೂತ್ರಕೋಶದಲ್ಲಿ ಹೆಚ್ಚುತ್ತಿರುವ ಮೂತ್ರವು ಹೊಟ್ಟೆಯಲ್ಲಿ ಸೋಂಕಿನ ಅಪಾಯವನ್ನುಂಟು ಮಾಡುತ್ತೆ. 
 

 ನಮ್ಮ ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡುವ ಮೂಲಕ ಮೂತ್ರವನ್ನು ತಯಾರಿಸುತ್ತವೆ. ಇದು ದೇಹದ ತ್ಯಾಜ್ಯ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಆದ್ದರಿಂದ,ಮೂತ್ರ ವಿಸರ್ಜನೆ ಮಾಡುವ ಬಯಕೆ ಬಂದಾಗ ಅದನ್ನು ನಿಗ್ರಹಿಸಬಾರದು. ಇದು ದೇಹದ ಅನಗತ್ಯ ಕ್ರಿಯೆಗಳಲ್ಲಿ ಒಂದಾಗಿದೆ.  ನೀವು ಅದನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಅದು ದೇಹದ ನೈಸರ್ಗಿಕ ಪ್ರಕ್ರಿಯೆಯಲ್ಲಿ ಅಡೆತಡೆ ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ, ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುತ್ತದೆ.

ಆಯುರ್ವೇದವು (ayurveda) ಎಂದಿಗೂ ನಿಗ್ರಹಿಸಬಾರದ 13 ನೈಸರ್ಗಿಕ ಪ್ರಚೋದನೆಗಳನ್ನು ವಿವರಿಸುತ್ತದೆ. ಇವುಗಳಲ್ಲಿ ಮೂತ್ರವನ್ನು ತಡೆಯುವುದು ಸಹ ಒಂದಾಗಿದೆ. ವಿಶೇಷವಾಗಿ ಮಹಿಳೆಯರು ಹಲವಾರು ಕಾರಣಗಳಿಗಾಗಿ ಮೂತ್ರವಿಸರ್ಜನೆ ಬಯಕೆಯನ್ನು ನಿಗ್ರಹಿಸುತ್ತಾರೆ. ಹಾಗೆ ಮಾಡೋದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು.
 

Tap to resize

ಮೂತ್ರ ತಡೆಹಿಡಿಯೋದ್ರಿಂದ ಉಂಟಾಗುವ ಅಡ್ಡಪರಿಣಾಮಗಳು

ಮೂತ್ರಕೋಶದ ಸಾಮರ್ಥ್ಯವು ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ
ಮೂತ್ರವಿಸರ್ಜನೆಯನ್ನು ನಿಲ್ಲಿಸುವ ಸಾಮರ್ಥ್ಯವು ವ್ಯಕ್ತಿಯ ವಯಸ್ಸನ್ನು ಅವಲಂಬಿಸಿರುತ್ತದೆ. ವಯಸ್ಕರ ಮೂತ್ರಕೋಶವು (kidney) 2 ಕಪ್ ಮೂತ್ರವನ್ನು ಹಿಡಿದಿಟ್ಟುಕೊಳ್ಳಬಹುದು. ಆದರೆ ಮಕ್ಕಳಲ್ಲಿ ಮೂತ್ರವನ್ನು ಸಂಗ್ರಹಿಸುವ ಸಾಮರ್ಥ್ಯವು ಅದರ ಅರ್ಧದಷ್ಟಿದೆ. ಅದಕ್ಕಾಗಿಯೇ ಮಕ್ಕಳು ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಾರೆ.

ಮೂತ್ರವಿಸರ್ಜನೆ ತಡೆದಾಗ ಏನಾಗುತ್ತೆ? 
ಆಯುರ್ವೇದ ತಜ್ಞರು ಮೂತ್ರವಿಸರ್ಜನೆಯನ್ನು ಪ್ರಕೃತಿಯ ಕರೆ (natural call) ಎಂದು ಸೂಚಿಸುತ್ತಾರೆ. ನೀವು ಅದನ್ನು ತಡೆಯಲು ಪ್ರಯತ್ನಿಸಿದಾಗ, ಅನೇಕ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ. ಒಂದು ಅಥವಾ ಎರಡು ಬಾರಿ ಮೂತ್ರವಿಸರ್ಜನೆ ಮಾಡೋದನ್ನು ನಿಲ್ಲಿಸುವುದು ಒಳ್ಳೆಯದು, ಆದರೆ ನಾವು ಅದನ್ನು ನಿಯಮಿತವಾಗಿ ತಡೆದಾಗ ಹಲವಾರು ಸಮಸ್ಯೆಗಳು ಕಾಡುತ್ತವೆ. 

ಯುಟಿಐನ (UTI) ಹೆಚ್ಚಿನ ಅಪಾಯ
ಮೂತ್ರಕೋಶದ ಸಾಮರ್ಥ್ಯಕ್ಕಿಂತ ಹೆಚ್ಚು ಮೂತ್ರ ತಡೆ ಹಿಡಿದರೆ ಅದು ಸೋಂಕಿಗೆ ಕಾರಣವಾಗಬಹುದು. ವಾಸ್ತವವಾಗಿ, ಮೂತ್ರದಲ್ಲಿ ದೇಹದ ಅನೇಕ ನಿಷ್ಪ್ರಯೋಜಕ ಬ್ಯಾಕ್ಟೀರಿಯಾಗಳಿವೆ. ಅದನ್ನು ಸಕಾಲದಲ್ಲಿ ತೆಗೆದುಹಾಕದಿದ್ದಾಗ, ಅದರ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಸೋಂಕು ಉಂಟಾಗುತ್ತದೆ. ಇದರಿಂದಾಗಿ ಮೂತ್ರವಿಸರ್ಜನೆಯ ಸಮಯದಲ್ಲಿ ನೋವಿನ ಸಮಸ್ಯೆ ಪ್ರಾರಂಭವಾಗುತ್ತದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತವೆ.

ಕಲ್ಲುಗಳ ಸಮಸ್ಯೆ ಆರೋಗ್ಯಕ್ಕೆ ಅಪಾಯ : 
ಪದೇ ಪದೇ ಮೂತ್ರವಿಸರ್ಜನೆ ತಡೆಯೋದ್ರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೆಚ್ಚುತ್ತದೆ. ಇದಲ್ಲದೆ, ಆಹಾರ, ಹೆಚ್ಚುವರಿ ದೇಹದ ತೂಕ, ಮೆಡಿಕಲ್ ಕಂಡೀಶನ್ ಮತ್ತು ಔಷಧಿಗಳು ಮೂತ್ರಪಿಂಡದ ಕಲ್ಲುಗಳನ್ನು (kidney stone) ರೂಪಿಸಲು ಕಾರಣವಾಗಬಹುದು.

ಮೂತ್ರ ತಡೆಯೋದ್ರಿಂದ, ಮೂತ್ರದ ಗೋಡೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರೆದರೆ ಮೂತ್ರಕೋಶಕ್ಕೆ ಹಾನಿಯಾಗುವ ಅಪಾಯವಿದೆ. ಇದು ಮೂತ್ರದ ಸೋರಿಕೆಗೂ ಕಾರಣವಾಗಬಹುದು. ಇದಲ್ಲದೆ, ದೀರ್ಘಕಾಲದವರೆಗೆ ಮೂತ್ರ ತಡೆಯೋದು ಮೂತ್ರಕೋಶ ಮತ್ತು ಖಾಸಗಿ ಭಾಗಗಳಲ್ಲಿ ನೋವಿಗೆ ಕಾರಣವಾಗಬಹುದು.

Latest Videos

click me!