ಆಹಾರ ಸೇವಿಸಿದ ನಂತರ ಬೆಲ್ಲ (Jaggery) ಸೇವಿಸೋದು ಅನೇಕ ಪ್ರಯೋಜನ ನೀಡತ್ತೆ. ಬೆಲ್ಲವು ಸಿಹಿ ಮತ್ತು ತಿನ್ನಲು ಸಾಕಷ್ಟು ರುಚಿಕರವಾಗಿದೆ. ಇದು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸುತ್ತೆ. ಊಟದ ನಂತರ ಬೆಲ್ಲ ತಿನ್ನೋದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಇದಲ್ಲದೆ, ಬೆಲ್ಲ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ರೋಗಗಳನ್ನು ಸಹ ನಿವಾರಿಸುತ್ತೆ.
ಊಟದ ನಂತರ ನೀವು ಬೆಲ್ಲ ಏಕೆ ತಿನ್ನಬೇಕು?
ನೀವು ಯಾವಾಗ ಬೇಕಾದರೂ ಬೆಲ್ಲ ತಿನ್ನಬಹುದು, ಆದರೆ ಊಟದ ನಂತರ ಬೆಲ್ಲ ತಿನ್ನೋದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭಗೊಳಿಸುತ್ತೆ. ಬೆಲ್ಲ ಕಬ್ಬಿಣ, ಕ್ಯಾಲ್ಸಿಯಂ (Calcium), ರಂಜಕ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳನ್ನು ಹೊಂದಿರುತ್ತೆ. ಪ್ರತಿದಿನ ಬೆಲ್ಲವನ್ನು ತಿನ್ನುವವರ ಹೊಟ್ಟೆ ಆರೋಗ್ಯಕರವಾಗಿರುತ್ತೆ ಮತ್ತು ಮುಖದ ಮೇಲೆ ಹೊಳಪು ಸಹ ಬರುತ್ತೆ. ಮಕ್ಕಳು ಮತ್ತು ವೃದ್ಧರು ಬೆಲ್ಲವನ್ನು ತಿನ್ನಬೇಕು.
ಬೆಲ್ಲ ತಿನ್ನುವ ಪ್ರಯೋಜನಗಳು
1- ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತೆ -
ಪ್ರತಿದಿನ ಆಹಾರ ಸೇವಿಸಿದ ನಂತರ ಬೆಲ್ಲ ತಿನ್ನೋದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತೆ, ಇದು ಹೊಟ್ಟೆಯಲ್ಲಿ ಗ್ಯಾಸ್, ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡೋದಿಲ್ಲ. ಬೆಲ್ಲದಲ್ಲಿ ಕಂಡುಬರುವ ಪೋಷಕಾಂಶಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತೆ. ಊಟದ ನಂತರ ಸಿಹಿಯಾದದ್ದನ್ನು ತಿನ್ನುವವರು ಇತರ ವಸ್ತುಗಳ ಬದಲು ಬೆಲ್ಲವನ್ನು ತಿನ್ನಬೇಕು.
2- ಮೂಳೆಗಳನ್ನು (Bones) ಬಲಪಡಿಸುತ್ತೆ -
ಬೆಲ್ಲವನ್ನು ತಿನ್ನೋದರಿಂದ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಸಿಗುತ್ತೆ. ಇದು ಮೂಳೆಗಳನ್ನು ಬಲಪಡಿಸುತ್ತೆ. ಮಕ್ಕಳಿಗೆ ಬೆಲ್ಲವನ್ನು ಉಣಿಸಬೇಕು. ಪ್ರತಿದಿನ ಊಟ ಮಾಡಿದ ನಂತರ ಬೆಲ್ಲ ತಿನ್ನೋದರಿಂದ ಸ್ನಾಯುಗಳ ಸಮಸ್ಯೆ ಸಹ ನಿವಾರಣೆಯಾಗುತ್ತೆ.
3- ರಕ್ತ (Blood) ನಷ್ಟವನ್ನು ನಿವಾರಿಸುತ್ತೆ -
ಬೆಲ್ಲವು ಕಬ್ಬಿಣದ ಉತ್ತಮ ಮೂಲವಾಗಿದೆ. ದೇಹದಲ್ಲಿ ರಕ್ತದ ಕೊರತೆಯನ್ನು ನಿವಾರಿಸಲು ಬೆಲ್ಲ ಸೇವಿಸಿ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತೆ. ಹಿಮೋಗ್ಲೋಬಿನ್ ಹೆಚ್ಚಿಸಲು ಬೆಲ್ಲವನ್ನು ಸಹ ತಿನ್ನಬೇಕು. ಬೆಲ್ಲ ತಿನ್ನೋದರಿಂದ ತಕ್ಷಣದ ಶಕ್ತಿಯೂ ಸಿಗುತ್ತೆ. ಆದ್ದರಿಂದ ಊಟದ ನಂತರ ಬೆಲ್ಲ ತಿನ್ನೋದನ್ನು ರೂಢಿ ಮಾಡ್ಕೊಳಿ.
4- ತೂಕ ಇಳಿಸಿಕೊಳ್ಳಲು (Weightloss)-
ಊಟದ ನಂತರ ಬೆಲ್ಲ ತಿನ್ನೋದರಿಂದ ಬೊಜ್ಜು ಕಡಿಮೆಯಾಗುತ್ತೆ. ಬೆಲ್ಲದಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತೆ, ಇದು ಚಯಾಪಚಯ ಕ್ರಿಯೆಯನ್ನು ವೇಗವಾಗಿ ಮಾಡುತ್ತೆ. ಬೆಲ್ಲ ಸೇವಿಸಿದ ನಂತರ, ದೀರ್ಘಕಾಲದವರೆಗೆ ಏನನ್ನೂ ತಿನ್ನುವ ಬಯಕೆಯಿರೋದಿಲ್ಲ. ಹಾಗೆ ಬೆಲ್ಲವು ಸಕ್ಕರೆ ಮತ್ತು ಇತರ ಸಿಹಿ ವಸ್ತುಗಳಿಗಿಂತ ಉತ್ತಮ.
5- ರೋಗ ನಿರೋಧಕ ಶಕ್ತಿ (Immunity power) ಹೆಚ್ಚಿಸುತ್ತೆ-
ಜಿಂಕ್ ಮತ್ತು ವಿಟಮಿನ್ ಸಿ ಕೂಡ ಬೆಲ್ಲದಲ್ಲಿ ಕಂಡುಬರುತ್ತೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತೆ. ಪ್ರತಿದಿನ ಬೆಲ್ಲ ತಿನ್ನೋದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು . ಇದು ದೇಹವನ್ನು ರೋಗಗಳಿಂದ ದೂರವಿರಿಸುತ್ತೆ . ಬೆಲ್ಲ ತಿನ್ನುವುದು ದೇಹದಲ್ಲಿ ಶಾಖವನ್ನು ಕಾಪಾಡುತ್ತೆ ಮತ್ತು ಶೀತದ ಅಪಾಯ ಕಡಿಮೆ ಮಾಡುತ್ತೆ.