ಮಶ್ರೂಮ್ ಬೇಡ ಅನ್ಬೇಡಿ… ಆರೋಗ್ಯ ಪ್ರಯೋಜನಗಳು ಎಷ್ಟಿವೆ ನೋಡಿ

First Published | Mar 14, 2024, 4:47 PM IST

ಸಸ್ಯಾಹಾರಿ ಆಹಾರವನ್ನು ತಿನ್ನೋದಕ್ಕೆ ಇಷ್ಟಪಡುವವರು ಖಂಡಿತವಾಗಿಯೂ ಮಶ್ರೂಮ್ ಇಷ್ಟಪಡ್ತಾರೆ.  ಅಣಬೆಗಳ ರುಚಿ ಮಾತ್ರ ಟೇಸ್ಟಿಯಾಗಿರೋದಲ್ಲ, ಇದರಿಂದ ಆರೋಗ್ಯ ಪ್ರಯೋಜನಗಳು ಸಹ ಸಾಕಷ್ಟಿವೆ. ಅವುಗಳ ಬಗ್ಗೆ ತಿಳಿತೋಣ.
 

ಕಳೆದ ಕೆಲವು ವರ್ಷಗಳಲ್ಲಿ, ಆಹಾರದಲ್ಲಿ ಅಣಬೆಗಳ(mushroom) ಟ್ರೆಂಡ್ ವೇಗವಾಗಿ ಹೆಚ್ಚಾಗಿದೆ. ಜನರು ಇದನ್ನು ಪನೀರ್ ಗೆ ಪರ್ಯಾಯವಾಗಿ ತಿನ್ನೋದಕ್ಕೆ ಪ್ರಾರಂಭಿಸಿದ್ದಾರೆ. ಅಣಬೆಗಳನ್ನು ಇಷ್ಟಪಡದ ಅನೇಕ ಜನರು ಅದರ ಪ್ರಯೋಜನಗಳನ್ನು ತಿಳಿದ ನಂತರ, ಮತ್ತೆ ಎರಡು ಯೋಚನೆ ಮಾಡದೇನೆ ಅದನ್ನ ತಿನ್ನುತ್ತಾರೆ. 
 

ಮಾರುಕಟ್ಟೆಯಲ್ಲಿ ಅನೇಕ ವಿಧದ ಅಣಬೆ ಅಥವಾ ಮಶ್ರೂಮ್ ಲಭ್ಯವಿದೆ. ಮುಖ್ಯವಾಗಿ ಜನರು ಇದನ್ನು ತರಕಾರಿ ಮತ್ತು ಸಲಾಡ್ ಆಗಿ ತಿನ್ನಲು ಇಷ್ಟಪಡುತ್ತಾರೆ. ಅಣಬೆಗಳ ರುಚಿ ಹೊರತಾಗಿ, ಇದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿಯೋಣ, ಜೊತೆಗೆ ನಾವು ಅದನ್ನು ಆಹಾರದಲ್ಲಿ ಏಕೆ ಸೇರಿಸಬೇಕು? ಅನ್ನೋದನ್ನು ತಿಳಿಯೋಣ. 
 

Tap to resize

ಮೂಳೆಗಳನ್ನು ಬಲಪಡಿಸುತ್ತವೆ
ಅಣಬೆಗಳು ನಮ್ಮ ದೇಹದ ಮೂಳೆಗಳನ್ನು (strong bone) ಬಲಪಡಿಸುತ್ತವೆ. ಅಷ್ಟೇ ಅಲ್ಲ ಅಣಬೆಗಳಲ್ಲಿ ಫೈಬರ್, ವಿಟಮಿನ್-ಡಿ, ಪ್ರೋಟೀನ್, ಸತು ಮತ್ತು ಸೆಲೆನಿಯಂ ಸಮೃದ್ಧವಾಗಿದ್ದು, ಇದನ್ನು ಸೇವಿಸೋದರಿಂದ ವೃದ್ಧಾಪ್ಯದಲ್ಲಿ  ಮೂಳೆಗಳು ದುರ್ಬಲವಾಗುವುದಿಲ್ಲ ಅನ್ನೋದು ತಿಳಿದು ಬಂದಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ
ಅಣಬೆಗಳು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಇದು ಶಕ್ತಿಯನ್ನು ನೀಡುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದ್ರೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಪಡೆಯಲಾಗುತ್ತದೆ. ಇದು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.

ತೂಕವನ್ನು ನಿಯಂತ್ರಿಸುತ್ತದೆ
ಕಾರ್ಬೋಹೈಡ್ರೇಟ್ ಗಳೊಂದಿಗೆ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣಗಳನ್ನು ಅಣಬೆಗಳು ಹೊಂದಿವೆ. ಮಧುಮೇಹ ರೋಗಿಗಳು ಇದನ್ನು ತಿನ್ನೋದು ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತದೆ.. ಅಣಬೆಗಳಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬು ಕಡಿಮೆ ಇರುತ್ತದೆ. ಇದರಿಂದಾಗಿ ತೂಕವನ್ನು (weight control) ನಿಯಂತ್ರಿಸಬಹುದು.

mushroom

ಸೌಂದರ್ಯ ವರ್ಧಕವೂ ಹೌದು
ಅಣಬೆಗಳು ಸೌಂದರ್ಯಕ್ಕೂ ಪ್ರಯೋಜನಕಾರಿ. ಇದು ವಯಸ್ಸಾದ ಚಿಹ್ನೆಗಳು, ಚರ್ಮದ ಟೋನ್ ಮತ್ತು ವರ್ಣದ್ರವ್ಯದಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಣಬೆಗಳು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಇವುಗಳನ್ನು ಆಹಾರದಲ್ಲಿ ಸೇರಿಸೋದರಿಂದ ಆರೋಗ್ಯಕರ ಚರ್ಮ ನಿಮ್ಮದಾಗುತ್ತೆ. 

ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತವೆ
ಅಣಬೆಗಳು ಉತ್ತಮ ಪ್ರಮಾಣದ ಫೋಲಿಕ್ ಆಮ್ಲ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ, ಇದು ಹಿಮೋಗ್ಲೋಬಿನ್ ಮಟ್ಟವನ್ನು (hemoglobin level) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅಣಬೆಗಳು ದೇಹದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ನಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುವ ಅನೇಕ ಆರೋಗ್ಯಕರ ಅಂಶಗಳು ಇದರಲ್ಲಿವೆ. 

Latest Videos

click me!