Food
ಅಣಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ ಮಳೆಗಾಲದಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಬೇಕು
ಪ್ರೊಟೀನ್, ವಿಟಮಿನ್, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣದಂತಹಾ ಪೋಷಕಾಂಶಗಳು ಅಣಬೆಗಳಲ್ಲಿ ಕಂಡು ಬರುತ್ತವೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಅಣಬೆಯಲ್ಲಿರುವ ಕೊಬ್ಬು, ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ನ ಪ್ರಮಾಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಣಬೆಯಲ್ಲಿರುವ ಪೊಟ್ಯಾಶಿಯಮ್ ಮತ್ತು ಉತ್ಕರ್ಷಣ ನಿರೋಧಕ ಹೃದಯದ ಆರೋಗ್ಯ ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
ಅಣಬೆಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಮತ್ತು ಅಲ್ಜೈಮರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಬಹುದು.
ಮಳೆಯಲ್ಲಿ ಬ್ಯಾಕ್ಟಿರೀಯಾಗಳು ಮಣ್ಣಿನ ಮೇಲೆ ಬರುತ್ತವೆ ಮತ್ತು ಆರ್ದ್ರ ಮಣ್ಣಿನಲ್ಲಿ ಅಣಬೆ ರೂಪುಗೊಳ್ಳುತ್ತವೆ. ಈ ಸಂದರ್ಭದಲ್ಲಿ ಬ್ಯಾಕ್ಟಿರೀಯಾಗಳು ಮಶ್ರೂಮ್‌ಗೆ ವರ್ಗಾವಣೆಯಾಗುತ್ತದೆ.
ಮಾನ್ಸೂನ್‌ನಲ್ಲಿ ಅಣಬೆಗಳು ಬಹಳಷ್ಟು ಬೀಜಕಗಳನ್ನು ಉತ್ಪಾದಿಸುತ್ತದೆ. ಮತ್ತು ಹೆಚ್ಚಿನ ಮೋಲ್‌ಗಳನ್ನು ಉಂಟು ಮಾಡುತ್ತದೆ. ಈ ಬೀಜಗಳು ಅನೇಕ ಜನರಿಗೆ ಅಲರ್ಜಿಯನ್ನುಂಟು ಮಾಡಬಹುದು.