ರೆಸ್ಟೋರೆಂಟ್ ಫ್ಯಾನ್ಸಿ ಆಹಾರ ತಿನ್ನೋ ಮೊದ್ಲು ಅಪಾಯದ ಬಗ್ಗೆ ಎಚ್ಚರ!

First Published | Mar 12, 2024, 5:24 PM IST

ಈ ದಿನಗಳಲ್ಲಿ, ರೆಸ್ಟೋರೆಂಟ್ಸ್ ಆಹಾರವನ್ನು ಎಲ್ಲಾ ಫ್ಯಾಶನ್ ರೀತಿಯಲ್ಲಿ ನೀಡಲಾಗುತ್ತದೆ. ಅವು ನೋಡಲು ಚೆನ್ನಾಗಿ ಕಾಣುತ್ತವೆ, ಆದರೆ ಕೆಲವು ವಿಧಾನಗಳು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಹೊರಗೆ ರೆಸ್ಟೋರೆಂಟ್ ಗೆ ಹೋದಾಗ ಫ್ಯಾನ್ಸಿ ಆಹಾರ ಸೇವಿಸೋ ಮುನ್ನ ಅಪಾಯದ ಬಗ್ಗೆ ಅರಿವಿದ್ದರೆ ಉತ್ತಮ. 
 

ರೆಸ್ಟೋರೆಂಟ್ ಗೆ (restaurant) ಹೋದಾಗ ನಮ್ಮ ಊಟ ಮುಗಿದ ನಂತರ, ವೈಟರ್ ಕೈಗಳನ್ನು ತೊಳೆಯಲು ಕತ್ತರಿಸಿದ ನಿಂಬೆಯನ್ನು ಹೊಂದಿರುವ ಬಟ್ಟಲಿನಲ್ಲಿ ನೀರನ್ನು ತರುತ್ತಾನೆ. ಇದರ ಬಗ್ಗೆ, ತಿಳಿದಿಲ್ಲದ ಜನರು ಆ ನೀರನ್ನು ಕುಡಿಯಲು ತಂದಿರುವುದು ಎಂದು ಕುಡಿಯುತ್ತಿದ್ದದ್ದೂ ಇದೆ ಆದರೆ ಈಗ ಜನರು ಅದರ ಬಗ್ಗೆ ಜಾಗೃತರಾಗುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ರೆಸ್ಟೋರೆಂಟ್ಸ್ ವಿವಿಧ ರೀತಿಯ ಹೊಸ ಬಗೆಯ ಆಹಾರ ಪದಾರ್ಥಗಳಲ್ಲಿ ಪ್ರಯೋಗ ಮಾಡಲು ಪ್ರಾರಂಭಿಸಿವೆ.

ಈ ಹೊಸ ಫ್ಯಾನ್ಸಿ ಐಟಮ್ ಗಳಲ್ಲಿ ಡ್ರೈ ಐಸ್ ಬಳಕೆಯು ಈ ಪ್ರಯೋಗದ ಒಂದು ಭಾಗ. ಇತ್ತೀಚೆಗೆ, ಕೆಲವರು ಆಕಸ್ಮಿಕವಾಗಿ ಡ್ರೈ ಐಸ್ ಸೇವಿಸಿ,  ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿತ್ತು.  ಆಹಾರಗಳ ಮೇಲೆ ಮಾಡಿದ ಎಲ್ಲಾ ಪ್ರಯೋಗವೂ ಹಾನಿಕಾರ ಅಲ್ಲ, ಆದರೆ ಕೆಲವೊಂದನ್ನು ತಿನ್ನೋದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (effect on health) ಬೀರುತ್ತದೆ. ಹಾಗಾಗಿ ರೆಸ್ಟೋರೆಂಟಿನಲ್ಲಿ ಕಂಡುಬರುವ ಅಲಂಕಾರಿಕ ಆಹಾರ ಪದಾರ್ಥಗಳನ್ನು ತಿನ್ನುವಾಗ ಜಾಗರೂಕರಾಗಿರೋದು ಉತ್ತಮ.
 

Tap to resize

ಡ್ರೈ ಐಸ್ ತಿಂದ್ರೆ ಆಸ್ಪತ್ರೆ ಸೇರಬಹುದು
ಡ್ರೈ ಐಸ್ (dry ice) ತಿಂದ ನಂತರ ಐದು ಜನರು ಅನಾರೋಗ್ಯಕ್ಕೆ ಒಳಗಾದ ಘಟನೆ ಇತ್ತೀಚೆಗೆ ನಡೆದಿತ್ತು. ರೆಸ್ಟೋರೆಂಟಿನಲ್ಲಿ, ಆಹಾರದ ಜೊತೆಗೆ ಹೊಗೆಯ ಎಫೆಕ್ಟ್ ಸೃಷ್ಟಿಸಲು ಡ್ರೈ ಐಸ್ ಬಳಸಲಾಗುತ್ತದೆ. ಇದು ಹೆಪ್ಪುಗಟ್ಟಿದ ಇಂಗಾಲದ ಡೈಆಕ್ಸೈಡ್. ಇದು ತಿನ್ನುವಂತಹ ವಸ್ತುವೇ ಅಲ್ಲ. ಅದರ ಸಂಪರ್ಕಕ್ಕೆ ಬರುವ ಮೂಲಕ ಚರ್ಮವನ್ನು ಹಾನಿಗೊಳಿಸುತ್ತದೆ.  

ತಜ್ಞರ ಪ್ರಕಾರ ಡ್ರೈ ಐಸ್ ಇಂಗಾಲದ ಡೈಆಕ್ಸೈಡ್ (carbon dyoxide) ನ ರೂಪವಾಗಿದ್ದು, ಇದು ಆಹಾರ ಪದಾರ್ಥವಲ್ಲ, ಆದರೆ ಅದು ಚರ್ಮದ ಮೇಲೆ ಬಿದ್ದರೆ, ಅದು ಚರ್ಮವನ್ನು ಸುಡಬಹುದು. ಡ್ರೈ ಐಸ್ ಮುಚ್ಚಿದ ಕೋಣೆಯಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಹೊಗೆಯ ಎಫೆಕ್ಟ್ ತೋರಿಸಲು ಇದನ್ನು ಬಳಸುತ್ತಿದ್ದರೆ, ಅದು ಇನ್ನೂ ಹೆಚ್ಚು ಅಪಾಯಕಾರಿ. ಏಕೆಂದರೆ ಇದು ಸುತ್ತಮುತ್ತಲಿನ ಆಮ್ಲಜನಕದ (Oxygen) ಮೇಲೆ ಪರಿಣಾಮ ಬೀರಬಹುದು ಮತ್ತು ವ್ಯಕ್ತಿ ಪ್ರಜ್ಞಾಹೀನನಾಗಬಹುದು. ಇದನ್ನು ತಿಂದ್ರೂ ಸಹ ಅಪಾಯ ಉಂಟಾಗಬಹುದು.

ಲಿಕ್ವಿಡ್ ನೈಟ್ರೋಜನ್ (Liquid Nitrogen) ಹೊಟ್ಟೆಯನ್ನು ಹಾನಿಗೊಳಿಸುತ್ತದೆ
ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕಾಕ್ ಟೈಲ್-ಮಾಕ್ಟೇಲ್ ಪಾನೀಯಗಳಿಂದ ಹೊಗೆ ಏಳುವುದನ್ನು ನೀವು ನೋಡಿರಬಹುದು. ಈ ಹೊಗೆಯು ದ್ರವ ಸಾರಜನಕದಿಂದ ಕೂಡಿದೆ. ಆದರೆ ಇದೇ ರೀತಿಯ ಕಾಕ್ಟೈಲ್‌ನಿಂದಾಗಿ, ಕೆಲವು ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯ ಹೊಟ್ಟೆಯಲ್ಲಿ ರಂಧ್ರ ಉಂಟಾದ ಸುದ್ದಿ ಕೇಳಿ ಬಂದಿತ್ತು. ಹೊಟ್ಟೆಯ ಪೀಡಿತ ಭಾಗವನ್ನು ಕತ್ತರಿಸುವ ಮೂಲಕ ಅವರ ಜೀವ ಉಳಿಸಲಾಯಿತು.  

ತಜ್ಞರು ಹೇಳುವಂತೆ ಲಿಕ್ವಿಡ್ ನೈಟ್ರೋಜನ್ (liquid nitrogen) ತುಂಬಾ ಕೂಲ್ ಆಗಿರುತ್ತೆ. ಆದರೆ ಇದು ಸಾಮಾನ್ಯ ತಾಪಮಾನದ ಸಮೀಪಕ್ಕೆ ಬಂದರೆ, ಬಾಂಬ್ ಸ್ಫೋಟದಂತಹ (Bomb Blast) ಪ್ರತಿಕ್ರಿಯೆ ಉಂಟಾಗುತ್ತೆ, ಅದು ಹೊಟ್ಟೆಗೆ ಹೋಗಿ ಹಾನಿಯನ್ನುಂಟು ಮಾಡುತ್ತದೆ. ಇದು ಬಾಯಿಯನ್ನು ಸಹ ಹಾನಿಗೊಳಿಸಬಹುದು. ಈ ಹೊಗೆ ನೇರವಾಗಿ ಮೂಗಿಗೆ ಹೋದರೂ, ಅದು ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ, ಇದನ್ನು ನೇರವಾಗಿ ಸೇವಿಸಬಾರದು. ಹೊಗೆಯ ಪರಿಣಾಮವನ್ನು ಉಂಟುಮಾಡಲು, ಅದನ್ನು ಆಹಾರಕ್ಕೆ ಸೇರಿಸಿದ್ದರೆ, ಅದರ ಹೊಗೆ ಅಂದರೆ ಸಾರಜನಕವನ್ನು ಮೊದಲು ತೆಗೆದುಹಾಕಬೇಕು.
 

ಕಾಟನ್ ಕ್ಯಾಂಡಿಯಲ್ಲಿರುವ ಹಾನಿಕಾರಕ ರಾಸಾಯನಿಕಗಳು
ಮಾರುಕಟ್ಟೆಯಲ್ಲಿ ಮಕ್ಕಳ ಬಾಯಿಯಲ್ಲಿ ನೀರು ತರುವ ಬಣ್ಣ ಬಣ್ಣದ ಕಾಟನ್ ಕ್ಯಾಂಡಿ (cotton candy) ಮಾರಾಟ ಮಾಡಲಾಗುತ್ತದೆ, ಆ ಕಾಟನ್ ಕ್ಯಾಂಡಿಯನ್ನು ಈಗ ಪಬ್ ಗಳು ಮತ್ತು ಬಾರ್ ಗಳಲ್ಲಿ ಬಳಸಲಾಗುತ್ತಿದೆ. ಇದನ್ನು ಕಾಕ್ಟೈಲ್ಸ್-ಮಾಕ್ಟೇಲ್‌ಗಳು ಮತ್ತು ಕಾಫಿಯೊಂದಿಗೆ ಸರ್ವ್ ಮಾಡಲಾಗುತ್ತೆ. ಇದನ್ನು ಸಾಮಾನ್ಯವಾಗಿ ಡ್ರಿಂಕ್ಸ್ ಮೇಲೆ ಅಲಂಕಾರಕ್ಕಾಗಿ ಇಡಲಾಗುತ್ತೆ. 
 

ಕರ್ನಾಟಕ ಸೇರಿ ಪುದುಚೇರಿ ಮತ್ತು ತಮಿಳುನಾಡು ಈ ಕಾಟನ್ ಕ್ಯಾಂಡಿಯನ್ನು ನಿಷೇಧಿಸಿವೆ ಏಕೆಂದರೆ ಇದು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುವ ರಾಸಾಯನಿಕಗಳನ್ನು ಹೊಂದಿದೆ. ಈ ಕಾಟನ್ ಕ್ಯಾಂಡಿ ತಯಾರಿಸಲು ರೋಡೊಮಿನ್-ಬಿ ರಾಸಾಯನಿಕವನ್ನು ಬಳಸಲಾಗುತ್ತದೆ, ಇದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಅನ್ನೋದು ತಿಳಿದು ಬಂದಿದೆ. ಮತ್ತೊಂದೆಡೆ, ಇದರಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿರುವುದರಿಂದ, ಇದು ಮಧುಮೇಹಿಗಳಿಗೆ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. 
 

ಇತ್ತೀಚಿನ ದಿನಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಆಹಾರ ಬಡಿಸುವ ಮತ್ತೊಂದು ವಿಧಾನವು ಸಾಕಷ್ಟು ಪ್ರಚಲಿತದಲ್ಲಿದೆ, ಇದರಲ್ಲಿ ಅವರು ಆಹಾರ ಪದಾರ್ಥಗಳನ್ನು ತಂದಾಗ, ಅದು ಬಿಸಿಯಾಗಿರುವುದು ಮಾತ್ರವಲ್ಲದೆ ಅದರಲ್ಲಿ ಬೆಂಕಿ ಉರಿಸಿ ಸರ್ವ್ ಮಾಡಲಾಗುತ್ತದೆ. ಕೆಲವು ರೆಸ್ಟೋರೆಂಟ್ ಗಳು ಇದನ್ನು ಮೀರಿ ಮೇಜಿನ ಮೇಲಿರುವ ಆಹಾರಕ್ಕೆ ಬೆಂಕಿ ಹಚ್ಚುವ ಮೂಲಕ ಹೀಟ್ ನೀಡಲು ಪ್ರಾರಂಭಿಸಿವೆ. ಅದಕ್ಕೂ ಮೊದಲು, ಅವನು ಆಹಾರದ ಮೇಲೆ ಸ್ವಲ್ಪ ದ್ರವ ಹಾಕುತ್ತಾನೆ, ಅದು ಆಲ್ಕೋಹಾಲ್. ಇದರಿಂದ ಆಹಾರಕ್ಕೆ ಬೇಗನೆ ಬೆಂಕಿ ತಗಲುತ್ತದೆ. ಇದನ್ನು ಫ್ಲಾಂಬಿ ಫುಡ್ (flambe food) ಎಂದು ಕರೆಯಲಾಗುತ್ತದೆ.
 

ಈ ಬೆಂಕಿ ಆಹಾರ ನಮ್ಮ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ, ಇದು ತುಂಬಾ ಬಿಸಿಯಾಗಿರುತ್ತದೆ, ಅದನ್ನು ತಿಂದ ಕೂಡಲೇ ಬಾಯಿ ಸುಡಬಹುದು. ಆಹಾರ ಪದಾರ್ಥಗಳ ಮೇಲೆ ಆಲ್ಕೋಹಾಲ್ (Alcohol) ಇರುವುದರಿಂದ, ಬಟ್ಟೆ ಮೇಲೆ ಬೀಳುವ ಬೆಂಕಿ ಬೇಗ ಆರಿಸೋಕೆ ಸಾಧ್ಯ ಆಗೋದಿಲ್ಲ, ಸಣ್ಣ ಮಗು ಸುತ್ತಲೂ ಇದ್ದರೂ ಅಪಘಾತ ಸಂಭವಿಸಬಹುದು. ಇನ್ನು ರೆಸ್ಟೋರೆಂಟ್ ಸಣ್ಣ ಜಾಗದಲ್ಲಿ ಇದ್ದರೆ, ಆ ಅಪಾಯ ಮತ್ತಷ್ಟು ಹೆಚ್ಚುತ್ತದೆ. 

Latest Videos

click me!